ಯಕ್ಷಗಾನದ ಇನ್ನೊಂದು ಪ್ರಮುಖ ವಿಭಾಗವೆಂದರೆ "ತಾಳ ಮದ್ದಲೆ". ಬಯಲಾಟಗಳಿಗಿಂತ ಇವು ವಿಭಿನ್ನವಾದವುಗಳು. ಇಲ್ಲಿ ವೇಷಭೂಷಣ, ನೃತ್ಯ ಮತ್ತು ಭಾವಾಭಿನಯಗಳು ಕಂಡು ಬರುವುದಿಲ್ಲ. ಭಾಗವತಿಕೆ, ಹಿಮ್ಮೇಳ ಹಾಗೂ ಮಾತುಗಾರಿಕೆಗಳು ಮಾತ್ರ ಇಲ್ಲಿರುತ್ತವೆ. ಬಯಲಾಟದಂತೆ ಇಲ್ಲಿಯೂ ಒಂದು ಪ್ರಸಂಗವನ್ನು ಆಯ್ದುಕೊಳ್ಳಲಾಗುತ್ತದೆ. ಭಾಗವತರು ಹಾಡುಗಾರಿಕೆಯ ಮೂಲಕ ಕಥಾನಕವನ್ನು ಹೇಳುತ್ತಾ ಹೋಗುತ್ತಾರೆ.
ಇಲ್ಲಿ ಪಾತ್ರಧಾರಿಗಳ ಬದಲು ಅರ್ಥಧಾರಿಗಳಿರುತ್ತಾರೆ. ಅರ್ಥಧಾರಿಗಳು ಹಾಡುಗಾರಿಕೆಯಲ್ಲಿ ಹೇಳಲ್ಪಟ್ಟ ಕಥೆಯ ಭಾಗವನ್ನು ಮಾತುಗಾರಿಕೆಯ ಮೂಲಕ ಚರ್ಚಿಸುತ್ತಾರೆ. ಬಯಲಾಟಕ್ಕೂ ತಾಳ ಮದ್ದಲೆಗೂ ಪ್ರಮುಖ ವ್ಯತ್ಯಾಸವಿರುವುದೇ ಈ ಮಾತುಗಾರಿಕೆಯಲ್ಲಿ. ಬಯಲಾಟಗಳಲ್ಲಿ ನೃತ್ಯ ಮತ್ತು ಅಭಿನಯಗಳೇ ಪ್ರಧಾನ. ಮಾತುಗಾರಿಕೆ ಇದ್ದರೂ ಅದು ಕೇವಲ ಹಾಡುಗಾರಿಕೆಯಲ್ಲಿ ಹೇಳಲ್ಪಟ್ಟ ಕಥಾನಕದ ಸಾರಾಂಶವಷ್ಟೇ ಆಗಿರುತ್ತದೆಯೇ ವಿನಃ ವಾದ ಮಂಡನೆಗೆ ಹೆಚ್ಚು ಅವಕಾಶವಿರುವುದಿಲ್ಲ. ಅದೂ ಅಲ್ಲದೇ ಬಯಲಾಟದಲ್ಲಿ ಬರುವ ಸಂಭಾಷಣೆಗಳನ್ನು ಸಾಮಾನ್ಯವಾಗಿ ಮೊದಲೇ ಸಿಧ್ಧಪಡಿಸಿರುತ್ತಾರೆ. ಹಾಗಾಗಿ ಈ ಮಾತುಗಾರಿಕೆಯು ಭಾಗವತಿಕೆಯಲ್ಲಿ ಹೇಳಲ್ಪಟ್ಟ ಕಥೆಯ ಚೌಕಟ್ಟನ್ನು ದಾಟಿ ಆಚೆ ಹೋಗುವುದಿಲ್ಲ. ಆದರೆ ತಾಳ ಮದ್ದಲೆಗಳು ಹಾಗಲ್ಲ. ತಾಳ ಮದ್ದಲೆಯಲ್ಲಿ ವಾದವೇ ಪ್ರಮುಖವಾದದ್ದು.
ಇಲ್ಲಿ ಈ ಭಾಗವತರು ಹೇಳುವ ಒಂದು ಹಾಡಿಗೆ ಇಂತಿಷ್ಟೇ ಸಂಭಾಷಣೆಗಳನ್ನು ಹೇಳಬೇಕು ಎಂದು ಪೂರ್ವ ನಿರ್ಧಾರವಾಗಿರುವಿದಿಲ್ಲ. ಭಾಗವತರು ಹಾಡುಗಾರಿಕೆಯ ಮೂಲಕ ವಾದಕ್ಕೆ ಒಂದು ಪೀಠಿಕೆ ಹಾಕಿ ಕೊಡುತ್ತಾರೆ. ಆಮೇಲೆ ಆ ಕಥಾನಕದ ಭಾಗದ ಮೇಲೆ ಅರ್ಥಧಾರಿಗಳಿಂದ ವಾದ ಆರಂಭವಾಗುತ್ತದೆ. ಈ ವಾದ ಸಂಧರ್ಭಕ್ಕನುಗುಣವಾಗಿ ಪ್ರಸಂಗದಿಂದ ಪ್ರಸಂಗಕ್ಕೆ ಬದಲಾಗುತ್ತಲೂ ಹೋಗಬಹುದು. ವಾದವೇ ತಾಳ ಮದ್ದಲೆಗಳ ಜೀವಾಳವಾಗಿರುತ್ತದೆ.
ಡಾ| ಎಂ. ಪ್ರಭಾಕರ ಜೋಶಿ |
|
|
ಶೆಡ್ಡೆ ಕೃಷ್ಣ ಮಲ್ಲಿ |
|
|
ಪೆರ್ಲ ಕೃಷ್ಣ ಭಟ್ |
|
|
ಶೇಣಿ ಗೋಪಾಲಕೃಷ್ಣ ಭಟ್ |
|
|
ಮಲ್ಪೆ ರಾಮದಾಸ ಸಾಮಗ |
|
|
ಸೂರಿಕುಮೇರು ಗೋವಿ೦ದ ಭಟ್ |
|
|
ಈ ಕೆಳಗಿನ ಕಲಾವಿದರ/ಕಲಾ ಪೋಷಕರ ವಿವರಗಳಿನ್ನೂ ಸೇರ್ಪಡೆಯಾಗಬೇಕಷ್ಟೆ. ಆಸಕ್ತರು ಲಭ್ಯ ಮಾಹಿತಿ ಕಳುಹಿಸಬೇಕಾಗಿ ವಿನ೦ತಿ. |
|
ಮೂಡ೦ಬೈಲು ಗೋಪಾಲಕೃಷ್ಣ ಶಾಸ್ತ್ರಿ |
|
|
ದೇರಾಜೆ ಸೀತಾರಾಮಯ್ಯ |
|
|
ಮಲ್ಪೆ ಶ೦ಕರನಾರಾಯಣ ಸಾಮಗ |
|
|
ಕೋಳ್ಯೂರು ರಾಮಚಂದ್ರ ರಾವ್ |
|
|
ಮಲ್ಪೆ ಲಕ್ಷ್ಮೀನಾರಾಯಣ ಸಾಮಗ |
|
|
ಮಲ್ಪೆ ವಾಸುದೇವ ಸಾಮಗ |
|
|
ಡಾ. ರಮಾನಂದ ಬನಾರಿ, ಯು. ಬಿ. |
|
|
ಕುಂಬ್ಳೆ ಸುಂದರ ರಾವ್ |
|
|
ಉಮಾಕಾ೦ತ್ ಭಟ್ ಕೆರೇಕೈ |
|
|
ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ |
|
|
ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ |
|
|
ಜಬ್ಬರ್ ಸಮೋ ಸಂಪಾಜೆ |
|
|
ಸುಣ್ಣಂಬಳ ವಿಶ್ವೇಶ್ವರ ಭಟ್ |
|
|
|
|