ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಪುಸ್ತಕಗಳು  

ಯಕ್ಷಚಿಂತನೆ : ಯಕ್ಷಗಾನದ ಪ್ರಮುಖ ಘಟ್ಟಗಳ ದಾಖಲೆ
ಡಾ.ಆನಂದರಾಮ ಉಪಾಧ್ಯ ಅವರು ಬ್ಯಾಂಕಿಂಗ್ ವೃತ್ತಿಯಲ್ಲಿದ್ದವರಾದರೂ ವೃತ್ತಿಯ ಆಚೆ ಉಸಿರಾಡಿದ್ದು ಯಕ್ಷಗಾನವನ್ನೇ. 15 ವರ್ಷಗಳಿಂದ ಯಕ್ಷಗಾನ ರಂಗಭೂಮಿಯ ಮೇಲಿನ ಪ್ರೀತಿಯಿಂದಲೇ ಅವರು ಬರೆಯುತ್ತ ಬಂದವರು. ಈ ಕಲೆಯ ಕುರಿತಾಗಿ, ಕನ್ನಡ ಸಾಹಿತ್ಯ ಕುರಿತಾಗಿ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ವ್ಯಕ್ತಪಡಿಸಿದ ಯೋಚನೆಗಳು, ವಿಚಾರಗಳು ಬಿಡಿ ಬಿಡಿಯಾಗಿ ದಾಖಲಾಗಿದ್ದವು. ವಿಭಿನ್ನ ನೆಲೆಯಲ್ಲಿ ಹೊರಹೊಮ್ಮಿದ ಅವೆಲ್ಲ ಇಡಿಯಾಗಿ ‘ಯಕ್ಷಚಿಂತನೆ’ ಎಂಬ ಹೆಸರಿನಲ್ಲಿ ಪುಸ್ತಕರೂಪ ತಾಳಿವೆ. ಯಕ್ಷಗಾನ ಕುರಿತಾದ 20 ಲೇಖನಗಳು ಇದರಲ್ಲಿವೆ.
ಯಕ್ಷಗಾನ ಅರ್ಥಸಹಿತ ಪುಸ್ತಕ `ಕುಮಾರ ವಿಜಯ` ಮರುಮುದ್ರಣಗೊಂಡಿದೆ!
ಈ ಖುಷಿಯನ್ನು ಹಂಚಿಕೊಳ್ಳಲು ಹೆಮ್ಮೆಯಾಗುತ್ತಿದೆ. ಪುಸ್ತಕವೊಂದು ಪ್ರಕಟವಾಗಿ, ಅದಕ್ಕೆ `ಲೋಕಾರ್ಪಣ ಭಾಗ್ಯ` ಬಂದ ಬಳಿಕ ಓದುಗರ ಕೈಗೆ ತಲುಪಿಸುವುದೇ ತ್ರಾಸ. ಖ್ಯಾತರ ಪುಸ್ತಕಗಳನ್ನು ಪ್ರಕಟಣಪೂರ್ವದಲ್ಲೇ ಕಾಪಿಡುವ ಸಾಹಿತ್ಯಪ್ರಿಯರಿದ್ದಾರೆ. ಯಕ್ಷಗಾನಕ್ಕೆ ಸಂಬಂಧಪಟ್ಟಂತೆ ಅಂತಹ ಭಾಗ್ಯ ತೀರಾ ಕಡಿಮೆ. ಕವಿ ಮುದ್ದಣ ವಿರಚಿತ `ಕುಮಾರ ವಿಜಯ` ಪ್ರಸಂಗದ ಅರ್ಥ ಸಹಿತ ಕೃತಿಯು 2004ರಲ್ಲಿ ಪ್ರಕಟವಾಗಿತ್ತು. ಎರಡೇ ವರುಷದಲ್ಲಿ ಪುಸ್ತಕವು ಪೂರ್ತಿ ಮಾರಾಟವಾಗಿದೆ. ಈಗ ಅದಕ್ಕೆ ಎರಡನೇ ಮುದ್ರಣದ ಸಂಭ್ರಮ.
ರವಿಶಂಕರ ವಳಕ್ಕುಂಜರ ಎರಡು ಅಮೂಲ್ಯ ಪುಸ್ತಕಗಳ ಲೋಕಾರ್ಪಣೆ
ಶ್ರೀಯುತ ರವಿಶಂಕರ ವಳಕ್ಕುಂಜರ ಎರಡು ಅಮೂಲ್ಯ ಪುಸ್ತಕಗಳು, “ಯಕ್ಷಗಾನ ಪ್ರಸಂಗ ದೃಶ್ಯಾವಳೀ” ಮತ್ತು “ಯಕ್ಷಗಾನ ವಾಚಿಕ ಸಮಾರಾಧನೆ” ದಿನಾಂಕ 13ನೇ ದಶಂಬರ 2014 ರಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ಯಕ್ಷಲೋಕಾರ್ಪಣೆಗೊಂಡಿತು. ನಿಜಕ್ಕೂ ಬಹಳ ಅಚ್ಚುಕಟ್ಟಾದ ಸಭಾ ಕಾರ್ಯಕ್ರಮ. 6.30 ಕ್ಕೆ ಸರಿಯಾಗಿ ಯಕ್ಷಗಾನದ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಭಾಗವತರಾಗಿ ಪ್ರಪುಲ್ಲಚಂದ್ರ ನೆಲ್ಯಾಡಿಯವರು, ಮದ್ದಳೆಯಲ್ಲಿ ಗಿರೀಶ್ ಕಾವೂರು ಹಾಗೂ ಚೆಂಡೆಯಲ್ಲಿ ರಾಜೇಶ್ ಆಚಾರ್ಯ ಮಡ್ಯಂತಾರ್ ಇವರುಗಳು ಸಹಕರಿಸಿದರು.
ಕಾಫಿ ಟೇಬಲ್ ಬುಕ್‌ನಲ್ಲಿ ದೇವಿ ಮಹಾತ್ಮೆ
ಯಕ್ಷಗಾನದಲ್ಲಿ ಶ್ರೀದೇವಿ ಮಹಾತ್ಮೆ ಎಂದು ಕೇಳಿದಾಕ್ಷಣ ಮನಸ್ಸು ಭಕ್ತಿ ಮತ್ತು ಭಯದೊಂದಿಗೆ ಅರಳುತ್ತದೆ. ಎಷ್ಟು ಬಾರಿ ನೋಡಿದರೂ ಮತ್ತಷ್ಟು ನೋಡಬೇಕೆಂಬಾಸೆ ಹುಟ್ಟಿಸುವ, ಪ್ರತೀ ಬಾರಿ ನೋಡಿದಾಗಲೂ ಹೊಸದರಂತೆ ಕಾಣಿಸುವ ಈ ಕಥಾನಕದ ವೈಭವವನ್ನು ಶಬ್ದ ಚಿತ್ರಗಳಲ್ಲಿ ತೆರೆದಿಡುವ ಅಪರೂಪದ ಪ್ರಯೋಗ, `ದೇವಿ ಮಹಾತ್ಮೆ` ಎಂಬ ಈ ಕಾಫಿ ಟೇಬಲ್ ಬುಕ್. ಮೂರು ಹಂತಗಳಲ್ಲಿ ಕಥಾನಕವನ್ನೂ, ಬಳಿಕ ಅನುಭವಿಗಳ ಸಂದರ್ಶನವನ್ನೂ ಒಳಗೊಂಡ ಈ ಕೃತಿಯು, ಕೇವಲ ಯಕ್ಷಗಾನದ ಬಗೆಗಷ್ಟೇ ಅಲ್ಲದೆ, ದೇವಿ ಮಹಾತ್ಮೆಯ ಮೂಲಕವಾಗಿ ಸಮಕಾಲೀನ ಹಾಗೂ ಸಾರ್ವಕಾಲಿಕ ಸಂದೇಶವನ್ನೂ ಕಟ್ಟಿ ಕೊಡುತ್ತದೆ.
ಯಕ್ಷಗಾನ ಕವಿ ಚರಿತ್ರೆ : ಒಂದು ಮಹತ್ವಾಕಾಂಕ್ಷೆಯ ಪುಸ್ತಕ
ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ ‘ಯಕ್ಷಗಾನ ಕವಿ ಚರಿತ್ರೆ’ ಒಂದು ಮಹತ್ವಾಕಾಂಕ್ಷೆಯ ಪುಸ್ತಕ. ಕುಂಬಳೆಯಿಂದ ಬೀದರ್‌ವರೆಗಿನ ಸುಮಾರು ೧೨೦೦ ಯಕ್ಷಗಾನ ಕವಿಗಳು ಇಲ್ಲಿ ಉಲ್ಲೇಖಗೊಂಡಿದ್ದಾರೆ. ಇವರಲ್ಲಿ 300 ಮಂದಿ ಅಜ್ಞಾತ ಕವಿಗಳು. ಈ ಕವಿಗಳು ರಚಿಸಿದ ಪ್ರಸಂಗಗಳ ಸಂಖ್ಯೆ ಸುಮಾರು 4600. ‘ಪ್ರತಿಯೊಂದು ಪ್ರಸಂಗದಲ್ಲಿ ೨೫೦ ಪದ್ಯಗಳಿವೆ ಎಂದು ಭಾವಿಸಿದರೂ, ಪದ್ಯಗಳ ಒಟ್ಟು ಸಂಖ್ಯೆ ಹತ್ತು ಲಕ್ಷ ದಾಟುತ್ತದೆ’.
ಮನೋಹರ್ ಎಸ್. ಕುಂದರ್‌ರ ಯಕ್ಷಗಾನ ರಂಗವೈಭವ ಲೋಕಾರ್ಪಣೆ
ಸರಕಾರಗಳು ತಮ್ಮ ಸಾಂಸ್ಕೃತಿಕ ನೀತಿಯನ್ನು ಘೋಷಿಸಬೇಕು ಹಾಗೂ ಯಕ್ಷಗಾನವನ್ನು ರಾಜ್ಯದ ಸಾಂಕೇತಿಕ ಕಲೆಯಾಗಿ ಸ್ವೀಕರಿಸಬೇಕು ಎಂದು ಯಕ್ಷಗಾನ ವಿಮರ್ಶಕ ಡಾ. ಎಂ. ಪ್ರಭಾಕರ ಜೋಶಿ ಹೇಳಿದರು. ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮನೋಹರ್ ಎಸ್. ಕುಂದರ್ ಬಡಾ ಎರ್ಮಾಳು ಅವರ `ಯಕ್ಷಗಾನ ರಂಗವೈಭವ` ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶನಿವಾರ ಪುಸ್ತಕ ಪರಿಚಯ ಮಾಡಿದರು.
ಕುರುಕ್ಷೇತ್ರಕ್ಕೊಂದು ಆಯೋಗ
ಯಕ್ಷಗಾನ ತಾಳಮದ್ದಳೆಯಲ್ಲಿ ರಸಪೂರ್ಣ ಅರ್ಥಗಾರಿಕೆಗೆ ಹೆಸರಾದವರು ದೇರಾಜೆ ಸೀತಾರಾಮಯ್ಯ . ಅವರು ಬರೆದ ``ಶ್ರೀರಾಮಾಯಣ ಚರಿತಾಮೃತಂ`` ಮತ್ತು `ಶ್ರೀಮನ್ಮಹಾಭಾರತ ಕಥಾಮೃತಂ`` ಪುಸ್ತಕಗಳು ಅಪೂರ್ವ ಒಳನೋಟಗಳ ರಾಮಾಯಣ -ಮಹಾಭಾರತದ ಮರುಸೃಷ್ಟಿಗಳು. ತಾಳಮದ್ದಳೆಯ ಕ್ಷೇತ್ರದ ಉತ್ತುಂಗದಲ್ಲಿದ್ದಾಗಲೇ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ ಇವರು, ನಂತರದ 14 ವರ್ಷಗಳ ಬದುಕಿನಲ್ಲಿ ಬರೆದ ಪುಸ್ತಕಗಳಲ್ಲಿ ``ಕುರುಕ್ಷೇತ್ರಕ್ಕೊಂದು ಆಯೋಗ``ವೂ ಒಂದು. 1981ರಲ್ಲಿ ಪ್ರಕಟವಾಗಿದ್ದ ಆ ಪುಸ್ತಕ ಕಳೆದ ವರ್ಷ ದ್ವಿತೀಯ ಮುದ್ರಣ ಕಂಡಿದೆ.
ಅಕ್ಷರ ಕ್ರಾಂತಿಯ ಯಕ್ಷ ಮಾಸಪತ್ರಿಕೆಗಳು
ವಿದ್ಯುನ್ಮಾನ ಮಾಧ್ಯಮ ಎಷ್ಟೇ ಆಕರ್ಷಕವಾಗಿದ್ದರೂ, ಮುದ್ರಣ ಮಾಧ್ಯಮ ತನ್ನದೇ ಆದ ವಿಶಿಷ್ಟತೆ ಮತ್ತು ಅನನ್ಯತೆಯನ್ನು ಉಳಿಸಿಕೊಂಡಿದೆ ಎಂಬುದು ವಾಸ್ತವ. ಕಲೆ-ಸಂಸ್ಕೃತಿಯನ್ನು ಜನಮಾನಸದಲ್ಲಿ ಪಡಿಮೂಡಿಸುವಲ್ಲಿ ನಾಡಿನ ಅನೇಕ ಪತ್ರಿಕೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿವೆ. ಯಕ್ಷಗಾನದಂತಹ ಶ್ರೀಮಂತ ಕಲೆಯ ಕುರಿತಾಗಿ ವಿದ್ವಾಂಸರ ಸೃಜನಶೀಲ ಬರಹಗಳನೇಕ ಬಿಡಿಬಿಡಿಯಾಗಿ ಸುದ್ದಿ ಪತ್ರಿಕೆಗಳಲ್ಲಿ, ವಾರಪತ್ರಿಕೆಗಳಲ್ಲಿ ಪ್ರಕಟವಾದ ಇತಿಹಾಸವಿದೆ. ಯಕ್ಷಗಾನಕ್ಕಾಗಿಯೇ ಮೀಸಲಾದ ಮಾಸಪತ್ರಿಕೆಗಳು ಎರಡು ದಶಕಗಳಿಂದೀಚೆಗೆ ಯಶಸ್ವಿಯಾಗಿ ಮುನ್ನುಡಿ ಬರೆದಿರುವುದು ಯಕ್ಷ ಇತಿಹಾಸದಲ್ಲಿ ಒಂದು ಮೈಲಿಗಲ್ಲು.
ಹಿಮ್ಮೇಳ - ಯಕ್ಷಗಾನ ಬಯಲಾಟದ ಆಮೂಲಾಗ್ರ ಅಧ್ಯಯನ
ಆಟ, ದಶಾವತಾರ, ಬಯಲಾಟ ಎಂದೇ ನೂರಾರು ವರ್ಷಗಳಿಂದ ಪ್ರಸಿದ್ಧವಾಗಿದ್ದ ಕನ್ನಡದ ಕಲೆಯ ಇತ್ತೀಚಿನ ಹೆಸರೇ ಯಕ್ಷಗಾನ. ಜಾನಪದ ಕಲೆ ಎಂದು ಯಾವುದೇ ಪ್ರೊತ್ಸಾಹವಿಲ್ಲದೇ ತಿರಸ್ಕಾರಕ್ಕೆ ಒಳಗಾದ ಬಯಲಾಟದ ಅನೇಕ ವಿಧಗಳಲ್ಲಿ ಇದೂ ಒಂದು. ದೊಡ್ಡಾಟ, ಘಟ್ಟದಕೋರೆ, ಶ್ರೀ ಕೃಷ್ಣ ಪಾರಿಜಾತ ಹೀಗೆ ಅನೇಕ ರಂಗ ಕಲೆಗಳು ಮೂಲೆ ಗುಂಪಾಗಿ ನಶಿಸಿ ಹೋಗಿವೆ ಹೋಗುತ್ತಿವೆ. ಯಕ್ಷಗಾನವೆಂದು ಕರಾವಳಿ ಮತ್ತು ಮಲೆನಾಡಿನ ಬಡಗು ಮತ್ತು ತೆಂಕು ಶೈಲಿಯ ಆಟ ಇತ್ತೀಚೆಗೆ ಪ್ರಸಿದ್ಧಿಗೆ ಬಂದರೂ ಸಿನೆಮಾ, ಸುಗಮ ಸಂಗೀತ, ಟಿವಿ ಮತ್ತು ಶಾಸ್ತ್ರೀಯ ಎನಿಸಿಕೊಂಡ ಕಲೆಗಳ ಹಾವಳಿಗೆ ಸಿಕ್ಕು ಸಂಪೋರ್ಣ ವಿಕಾರಗೊಂಡು ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತ ತಲುಪಿದೆ. ಯಾವುದು ಯಕ್ಷಗಾನ ಯಾವುದು ಅಲ್ಲ ಎಂದು ದಿಟ್ಟವಾಗಿ ಪರಿಷ್ಕರಿಸಿ, ಯಕ್ಷಗಾನದ ಹಿಂದಿರುವ ತತ್ವಗಳು ಏನು, ಅದರ ರೂಪುರೇಷೆ ಯಾವುದು, ತಾಳ ರಾಗ ಕುಣಿತಗಳ ಹಿಂದಿರುವ ಚಾಲಕ ವ್ಯಾಕರಣ ಯಾವುದು ಎಂಬಿತ್ಯಾದಿ ಸಂಶೋಧನೆ ಮಾಡಿ ದಾಖಲಿಸುವ ಪ್ರಯತ್ನ ಸಂಪೂರ್ಣವಾಗಿ ಆಗಿರಲಿಲ್ಲ. ಅದಕ್ಕೆ ಪರಿಹಾರ ಸದೃಶವಾಗಿ ಡಾ ರಾಘವ ನಂಬಿಯಾರರ ಕೃತಿ `ಹಿಮ್ಮೇಳ` ಈಗ ಪ್ರಕಟವಾಗಿದೆ.
ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ