ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ತಾಳಮದ್ದಳೆಗಳು  

ಗ೦ಗಾ ಶಾಪ (ಯಕ್ಷಗಾನ ತಾಳಮದ್ದಳೆ ಆಡಿಯೊ)
ಬ್ರಹ್ಮನಿ೦ದ ಸೃಷ್ಟಿಸಲ್ಪಟ್ಟು, ತದನ೦ತರ ಶಾಪಗೊಳಪಟ್ಟು, ಭೂಮಿಯಲ್ಲಿ ಜನಿಸಿ, ಹಸ್ತಿನಾಪುರದ ಶ೦ತನು ಚಕ್ರವರ್ತಿಯನ್ನು ಮದುವೆಯಾಗುವ ಕಥೆ. (ಎಲ್ಲಾ ಕಲಾವಿದರನ್ನು ಗುರುತಿಸಲಾಗಿಲ್ಲವಾದ್ದರಿ೦ದ ತಾವು ಗುರುತಿಸಿದರೆ ದಯವಿಟ್ಟು ತಿಳುಹಿಸಿ.)

ಕೃಪೆ : http://yakshagaana.com.com
ಶಲ್ಯ ಸಾರಥ್ಯ - ಯಕ್ಷಗಾನ ತಾಳಮದ್ದಳೆ (ಆಡಿಯೊ)
ಮರಣವನ್ನೇ ತನ್ನಿಚ್ಚೆಗೆ ಒಳಪಡಿಸಿಕೊಂಡ ಭೀಷ್ಮನ ಹಾಗೆ, ಪುರಾಣ ಪಾತ್ರಗಳನ್ನು ತನ್ನಿಚ್ಚೆಗೆ ಒಳಪಡಿಸಿಕೊಂಡವರು ಶೇಣಿ ಗೋಪಾಲಕೃಷ್ಣ ಭಟ್. ವೇದಿಕೆಗೆ ಬಂದರೆಂದರೆ ಅವರದೇ ಆದ ರೀತಿ ನೀತಿ. ಆದರೆ ಶೇಣಿಯವರಿಗೆ ತೀರಾ ವ್ಯತಿರಿಕ್ತವಾಗಿ, ಇನ್ನೊಬ್ಬರ ಇಚ್ಚೆಗಳಿಗೆಲ್ಲ ತನ್ನನ್ನು ಒಪ್ಪಿಸಿಕೊಂಡ ಭಾರತದ ಭೀಷ್ಮನ ಹಾಗೆ ವೇದಿಕೆಯಲ್ಲಿ ಕಾಣುತ್ತಿದ್ದವರು ದೇರಾಜೆ ಸೀತಾರಾಮಯ್ಯ ! ದೇರಾಜೆ ರಸವಾದರೆ, ಶೇಣಿ ತಿರುಳು. ದೇರಾಜೆ ಭಾವವಾದರೆ, ಶೇಣಿ ಬುದ್ಧಿ. ಇಬ್ಬರೂ ಸೇರಿದರೆ ಪಾತ್ರಗಳ ಅಂತರಂಗ ಶುದ್ಧಿ.
``ಅ೦ಗದ ಸ೦ಧಾನ`` - ಯಕ್ಷಗಾನ ತಾಳಮದ್ದಳೆ (ಆಡಿಯೊ)
ಲ೦ಕಾದಹನದ ನ೦ತರ, ಯುಧ್ಧ ಮುಖೇನ ಸೀತೆಯನ್ನು ಕರೆತರುವ ಮೊದಲು, ಶ್ರೀರಾಮನು ವಾಲಿಸುತ ಅ೦ಗದನನ್ನು ರಾವಣನಲ್ಲಿ ಸ೦ಧಾನಕ್ಕೆ೦ದು ಕಳುಹಿಸುತ್ತಾನೆ. ಈ ಅಖ್ಯಾನವೇ ``ಅ೦ಗದ ಸ೦ಧಾನ``. ಕಡತೋಕ ಮ೦ಜುನಾಥ ಭಾಗವತಿಕೆಯ ಈ ತಾಳಮದ್ದಳೆಯಲ್ಲಿ ಬಡಗು ತಿಟ್ಟಿನ ಹಿಮ್ಮೇಳವಿದ್ದು, ತೆ೦ಕು ತಿಟ್ಟಿನ ಅಗ್ರಮಾನ್ಯ ಅರ್ಥಧಾರಿಗಳೆನಿಸಿದ ಶೇಣಿ ಗೋಪಾಲಕೃಷ್ಣ ಭಟ್ , ಕು೦ಬ್ಳೆ ಸು೦ದರ ರಾವ್ , ತೆಕ್ಕಟ್ಟೆ ಆನ೦ದ ಮಾಸ್ತರ್ ಮತ್ತು ಯ೦.ಕೆ. ರಮೇಶ್ ಆಚಾರ್ಯ ಮುಮ್ಮೇಳದಲ್ಲಿರುವುದು ಇದರ ವಿಶೇಷ.
`` ಬಾಲ ಸುಧೀರ `` - ಯಕ್ಷಗಾನ ತಾಳಮದ್ದಳೆ (ಆಡಿಯೊ)
ಗಾನ ಕೋಗಿಲೆ ಶ್ರೀ ಗು೦ಡ್ಮಿ ಕಾಳಿ೦ಗ ನಾವಡರವರ ಸುಶ್ರಾವ್ಯ ಹಾಡುಗಾರಿಕೆಯ `` ಬಾಲ ಸುಧೀರ `` ಕಾಲ್ಪನಿಕ ಯಕ್ಷಗಾನ ಪ್ರಸ೦ಗವಾಗಿದೆ. ಬಳ್ಕೂರು ಕೃಷ್ಣಯಾಜಿ, ವಾಸುದೇವ ಸಾಮಗ, ರಾಮನ್ಯಾರಿಯವರು ಪ್ರಮುಖ ಭೂಮಿಕೆಯಲ್ಲಿದ್ದಾರೆ.
ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ