ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಭಾಗವತರು  
ಯಕ್ಷಗಾನದ ಜೀವಾಳವೇ ಭಾಗವತಿಕೆ ಅಥವಾ ಹಾಡುಗಾರಿಕೆ. ಅವರು ಈ ರಂಗ ಪ್ರಕಾರದ ನಿರ್ದೇಶಕರಿದ್ದಂತೆ. ಇಲ್ಲಿ ಪಾತ್ರಧಾರಿಗಳು ಅಭಿನಯಿಸುವ ಕಥಾನಕವನ್ನು ಕಾವ್ಯ ರೂಪದಲ್ಲಿ ಹಾಡಲಾಗುತ್ತದೆ. ಹೀಗೆ ಹಾಡುವವರನ್ನು ಭಾಗವತರು ಎಂದು ಕರೆಯುತ್ತಾರೆ.

ಸಮಸ್ತ ಪ್ರಸಂಗ ಇವರ ನೇತೃತ್ವದಲ್ಲೇ ನಡೆಯುವುದು. ಯಕ್ಷಗಾನ ಪದ್ಯವನ್ನು ರಾಗ ಸಮೇತ ಹಾಡುವುದು ಇವರ ಕೆಲಸ. ಯಕ್ಷಗಾನದಲ್ಲಿ ಭಾಗವತರ ಕಾರ್ಯ ಇಷ್ಟಕ್ಕೇ ಸೀಮಿತಗೊಳ್ಳುವುದಿಲ್ಲ. ಒಬ್ಬ ಅರ್ಥಧಾರಿ, ಪದ್ಯದ ಅರ್ಥವನ್ನು ಸಮರ್ಥವಾಗಿ ವ್ಯಾಖ್ಯಾನಿಸಲು ತಡವರಿಸಿದಲ್ಲಿ ಆತನನ್ನು ಆಪತ್ತಿನಿಂದ ಪಾರು ಮಾಡುವುದೇ ಭಾಗವತರು. ಯಾರೇ ಒಬ್ಬ ಯಕ್ಷಗಾನ ಕಲಾವಿದ ( ಹಿಮ್ಮೇಳ, ಮುಮ್ಮೇಳ ಯಾವುದೇ ಇರಲಿ) ಯಕ್ಷಗಾನದ ಸಮಸ್ತ ಆಯಾಮಗಳನ್ನೂ ತಿಳಿದಿರಬೇಕಾಗುತ್ತದೆ. ಅದರಲ್ಲೂ ಭಾಗವತರು ಸೂತ್ರಧಾರಿಯಾಗಿರುವುದರಿಂದ ಕಡ್ಡಾಯವಾಗಿ ತಿಳಿದುಕೊಂಡಿರಬೇಕು. ಪ್ರಸಂಗದ ಸಂಪೂರ್ಣ ಜ್ಞಾನ ಅವರಲ್ಲಿರಬೇಕು.

ತಾಳ, ರಾಗ ಶೃತಿ ಎಲ್ಲವನ್ನೂ ಸೂಕ್ತ ರೀತಿಯಲ್ಲಿ ಹೊಂದಿಸಿಕೊಂಡು ಹೋಗುವ ಕಲೆ ಅವರಿಗೆ ಕರಗತವಾಗಿರಬೇಕು. ಒಂದು ಪ್ರಸಂಗದ ಪದ್ಯ ಹಲವಾರು ರಾಗಗಳಿಂದ ಕೂಡಿರುತ್ತದೆ. (ರಾಗಗಳ ಬಗ್ಗೆ ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.) ಈ ಎಲ್ಲಾ ರಾಗಗಳನ್ನು ಅಭ್ಯಸಿಸಿದರಷ್ಟೇ ಒಬ್ಬಾತ ಭಾಗವತ ಅನ್ನಿಸಿಕೊಳ್ಳಲು ಸಾಧ್ಯ. ಕೇವಲ ರಾಗ ಗೊತ್ತಿದ್ದರಷ್ಟೇ ಸಾಲದು, ಯಾವ ಪದ್ಯಕ್ಕೆ ಯಾವ ರಾಗ ಎಂಬುದನ್ನೂ ಅರಿತಿರಬೇಕು. ಅದೆಷ್ಟೋ ಪ್ರಸಂಗಗಳನ್ನು ಕಂಠಪಾಠ ಮಾಡಿದ ಭಾಗವತರೂ ಇದ್ದಾರೆ. ಉದಾಹರಣೆಗೆ ಬಲಿಪ ನಾರಾಯಣ ಭಾಗವತರು 150ಕ್ಕೂ ಹೆಚ್ಚು ಪ್ರಸಂಗಗಳನ್ನು ಕಂಠಪಾಠ ಮಾಡಿದ್ದಾರೆ.

ಯಕ್ಷಗಾನದಲ್ಲಿ ವೇಷಧಾರಿಗಳಿಗೆ ಮಾತ್ರ ನಿರ್ದಿಷ್ಟ ವೇಷ ಭೂಷಣಗಳಿರುವುದಲ್ಲ. ಹಿಮ್ಮೇಳದವರೂ ಸಾಂಪ್ರದಾಯಿಕ ಉಡುಗೆ ಧರಿಸುವುದು ಪದ್ಧತಿ. ಭಾಗವತರು ಸೇರಿದಂತೆ ಎಲ್ಲಾ ಹಿಮ್ಮೇಳದವರು ಬಿಳಿ ಪಂಚೆ, ಅದಕ್ಕೊಪ್ಪುವ ಸಾಂಪ್ರದಾಯಿಕ ಅಂಗಿ (ಜುಬ್ಬಾ ಕೂಡ ಆದೀತು.), ಹೆಗಲಿಗೊಂದು ಶಲ್ಯ, ತಲೆಗೆ ಕೆಂಪು ರುಮಾಲು ಧರಿಸಬೇಕು.


ಐರೋಡಿ ರಾಮ ಗಾಣಿಗ
ಕೊಳಗಿ ಕೇಶವ ಹೆಗಡೆ
ಹೆರಂಜಾಲು ಗೋಪಾಲ ಗಾಣಿಗ
ತೆ೦ಕಬೈಲು ತಿರುಮಲೇಶ್ವರ ಶಾಸ್ತ್ರಿ
ಲೀಲಾವತಿ ಬೈಪಡಿತ್ತಾಯ
ಕೊಕ್ಕರ್ಣೆ ಸದಾಶಿವ ಅಮೀನ್
ಸುರೇಶ್ ಶೆಟ್ಟಿ ಶಂಕರನಾರಾಯಣ
ಕುರಿಯ ಗಣಪತಿ ಶಾಸ್ತ್ರಿ
ಕೆ.ಪಿ.ಹೆಗಡೆ
ಪಟ್ಲ ಸತೀಶ್ ಶೆಟ್ಟಿ
ಹೊಸ್ತೋಟ ಮಂಜುನಾಥ ಭಾಗವತ
ಕುಬಣೂರು ಶ್ರೀಧರ ರಾವ್
ನೀಲಾವರ ಲಕ್ಷ್ಮೀನಾರಾಯಣಯ್ಯ
ಮರವಂತೆ ನರಸಿಂಹದಾಸರು
ಕೊಪ್ಪದಮಕ್ಕಿ ಈರಪ್ಪ ಭಾಗವತರು
ಮತ್ಯಾಡಿ ನರಸಿಂಹ ಶೆಟ್ಟಿ
ಬಲಿಪ ನಾರಾಯಣ ಭಾಗವತ (ಹಿರಿಯ)
ಅಗರಿ ಶ್ರೀನಿವಾಸ ಭಾಗವತ
ಬಲಿಪ ನಾರಾಯಣ ಭಾಗವತ
ಆರ್ಗೋಡು ಗೋವಿ೦ದರಾಯ ಶೆಣೈ
ಅಗರಿ ರಘುರಾಮ ಭಾಗವತ
ಕಡತೋಕ ಮಂಜುನಾಥ ಭಾಗವತ
ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ
ಕಾಳಿಂಗ ನಾವಡ
ಸುಬ್ರಹ್ಮಣ್ಯ ಧಾರೇಶ್ವರ
ಪದ್ಯಾಣ ಗಣಪತಿ ಭಟ್
ನಾರಾಯಣ ಶಬರಾಯ
ಬೋಂದೆಲ್ ಸತೀಶ್ ಶೆಟ್ಟಿ
ಈ ಕೆಳಗಿನ ಕಲಾವಿದರ/ಕಲಾ ಪೋಷಕರ ವಿವರಗಳಿನ್ನೂ ಸೇರ್ಪಡೆಯಾಗಬೇಕಷ್ಟೆ. ಆಸಕ್ತರು ಲಭ್ಯ ಮಾಹಿತಿ ಕಳುಹಿಸಬೇಕಾಗಿ ವಿನ೦ತಿ.
ಮರವ೦ತೆ ಶ್ರೀನಿವಾಸ ದಾಸ್ ಭಾಗವತ
ಮಾ೦ಬಾಡಿ ನಾರಾಯಣ ಭಾಗವತ
ನೆಬ್ಬೂರು ನಾರಾಯಣ ಭಾಗವತ
ನಾರ್ಣಪ್ಪ ಉಪ್ಪೂರು
ದಾಮೋದರ ಮಂಡೆಚ್ಚ
ಪುತ್ತಿಗೆ ರಘುರಾಮ ಹೊಳ್ಳ
ದಿನೇಶ ಅಮ್ಮಣ್ಣಾಯ
ವಿದ್ವಾನ್ ಗಣಪತಿ ಭಟ್
ಕಿಗ್ಗ ಹಿರಿಯಣ್ಣ ಆಚಾರ್
ರಾಘವೇ೦ದೃ ಮಯ್ಯ , ಹಾಲಾಡಿ
ರಾಘವೇಂದ್ರ ಆಚಾರಿ ಜನ್ಸಾಲೆ
ರಾಮಕೃಷ್ಣ ಮಯ್ಯ, ಸಿರಿಬಾಗಿಲು
ಬೊಟ್ಟಿಕೆರೆ ಪುರುಷೊತ್ತಮ ಪೂಂಜ
ಗೋಪಾಲಕೃಷ್ಣ ಮಯ್ಯ, ಬಾಯಾರು
ಹೊಸಮೂಲೆ ಗಣೇಶ್ ಭಟ್
ರವಿಚ೦ದ್ರ ಪೂಜಾರಿ, ಕನ್ನಡಿಕಟ್ಟೆ
ಸತೀಶ್ ಶೆಟ್ಟಿ, ಬೊ೦ದೆಲ್
ರವೀ೦ದ್ರ ಶೆಟ್ಟಿ, ಹೊಸ೦ಗಡಿ
ವಿಷ್ಣು ಭಾಗವತ, ಹಿರೇಮಕ್ಕಿ
ಬಲಿಪ ಪ್ರಸಾದ ಭಾಗವತ
ಬಲಿಪ ಶಿವಶ೦ಕರ ಭಾಗವತ
ಸತ್ಯನಾರಾಯಣ ಪುಣಿ೦ಚಿತ್ತಾಯ
ಅನ೦ತ ಹೆಗಡೆ , ದ೦ತಳಿಕೆ
ರವಿ ಕುಮಾರ್, ಸೂರಾಲ್
ಶ೦ಕರ ಭಟ್ , ಬ್ರಹ್ಮೂರು
ರವೀ೦ದ್ರ ಭಟ್, ಅಚವೆ
ರಾಮಕೃಷ್ಣ ಹೆಗಡೆ
ತೆ೦ಕಬೈಲು ಮುರಳಿಕೃಷ್ಣ ಶಾಸ್ತ್ರಿ
ಗಿರೀಶ್ ರೈ, ಕಕ್ಕೆಪದವು
ವಿಜೇತ್ ಶೆಟ್ಟಿ
ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ