ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸ೦ದರ್ಶನಗಳು  

ನನ್ನ ಉಸಿರಿರುವವರೆಗೂ ಯಕ್ಷಗಾನಕ್ಕಾಗಿ ಕೆಲಸ ಮಾಡಿಯೇ ಮಾಡುತ್ತೇನೆ : ಹೊಸ್ತೋಟ
ಯಕ್ಷಗಾನದ ಭೀಷ್ಮ , ಅರ್ಧ ಶತಮಾನಕ್ಕಿಂತ ಹೆಚ್ಚುಕಾಲ ಯಕ್ಷಗಾನದ ಗುರುವಾಗಿ, ಪ್ರಸಂಗಕರ್ತರಾಗಿ, ಸಂಶೋಧಕರಾಗಿ ಅಥವಾ ಯಕ್ಷಗಾನದ ಎಲ್ಲವೂ ಆಗಿ ದುಡಿದ ಹೊಸ್ತೋಟರು ಬ್ರಹ್ಮಚಾರಿ. ಯಕ್ಷಗಾನ ಕಲಾಭಿಮಾನಿಗಳ ಮನೆ ಮನೆಗೆ ತಿರುಗಿ ಅವಧೂತನಂತೆ ಸಹಸ್ರಾರು ಜನರಿಗೆ ಯಕ್ಷಗಾನವನ್ನು ಕಲಿಸಿದ ಹೊಸ್ತೋಟರು ಒಬ್ಬ ಜನಪ್ರಿಯ ಕಲಾವಿದರೂ ಅಲ್ಲ, ಜನಪ್ರಿಯ ಭಾಗವತರೂ ಅಲ್ಲ ಆದರೂ ಯಕ್ಷಗಾನದ ಪ್ರೇಕ್ಷಕ ವರ್ಗಕ್ಕೆ ಅವರೆಂದರೆ ಅಚ್ಚು ಮೆಚ್ಚು ಮತ್ತು ಗೌರವ. ಇದೀಗ ತಮ್ಮ ಇಡಿಯ ಜೀವನವನ್ನೇ ಯಕ್ಷಗಾನಕ್ಕಾಗಿ ಮುಡಿಪಾಗಿಟ್ಟ ಎಪ್ಪತ್ತೈದರ ವಯೋವೃದ್ಧ ಅವಧೂತ ಯಕ್ಷಗುರು ಹೊಸ್ತೋಟ ಮಂಜುನಾಥ ಭಾಗವತರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. ಈ ಸಂದರ್ಭದಲ್ಲಿ ಯಕ್ಷಗುರು ಹೊಸ್ತೋಟರ ಸಂದರ್ಶನ
ಯಕ್ಷ-ಗಾನ-ಯಾನ : ಬಾರ್ಕೂರು ಸುರೇಶ ಭಾಗವತರ ಸಂದರ್ಶನ
ಯಕ್ಷಗಾನ ಒಂದು ವಿಶ್ವವಿಖ್ಯಾತ ಕಲೆ. ಗಾನ-ನೃತ್ಯ-ಮಾತುಗಾರಿಕೆ-ವೇಷ ಭೂಷಣಗಳ ಮೇಳೈಕೆ ಈ ಯಕ್ಷಗಾನ. ಇದರಲ್ಲಿ ಪದ್ಯ ಹೇಳುವ ಭಾಗವತರದ್ದು ನಿರ್ದೇಶಕರ ಕೆಲಸ. ನಿರ್ದೇಶನ-ಸಮಯಪ್ರಜ್ಞೆ-ಸೃಜನಶೀಲತೆ ಮುಂತಾದ ಗುಣಗಳು ಇದ್ದಲ್ಲಿ ಮಾತ್ರ ಒಬ್ಬ ಯಶಸ್ವೀ ಭಾಗವತರಾಗುವುದಕ್ಕೆ ಸಾಧ್ಯ. ನಮ್ಮ ನಡುವೆ ಇಂತಹ ನೂರಾರು ಭಾಗವತರಿದ್ದಾರೆ. ಅವರಲ್ಲಿ ಕೆಲವರು ಪ್ರಸಿದ್ಧಿಯನ್ನು ಪಡೆದರೆ, ಇನ್ನೂ ಕೆಲವರು ಎಲೆ ಮರೆಯ ಕಾಯಿಯಂತೆ ಯಕ್ಷಕಲಾ ಸೇವೆಯಲ್ಲಿ ತೊಡಗಿದ್ದಾರೆ. ಅಂತವರಲ್ಲಿ ಒಬ್ಬರು ಶ್ರೀ ಬಾರ್ಕೂರು ಸುರೇಶ ಭಾಗವತರು. ಕಳೆದ 32 ವರ್ಷಗಳಿಂದ ರಂಗಸ್ಥಳದಲ್ಲಿ ತಮ್ಮ ಇಂಪಾದ ಗಾನವನ್ನು ಹರಿಸುತ್ತಿರುವ ಬಾರ್ಕೂರು ಸುರೇಶ ಭಾಗವತರೊಂದಿಗೆ ನಡೆಸಿದ ಸಂದರ್ಶನ.
ಯಕ್ಷಗಾನದಲ್ಲಿ ಗುಣಮಟ್ಟ ಉಳಿಸಿಕೊಳ್ಳಬೇಕು: ಮೂಡಂಬೈಲು ಶಾಸ್ತ್ರಿ
ಪುತ್ತೂರಿನಲ್ಲಿ ಜ. 2ರಿಂದ ಮೂರು ದಿನಗಳ ಕಾಲ ನಡೆಯುವ 10ನೇ ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಕ್ಕೆ ಅನುಭವಿ. ಅರ್ಥಧಾರಿ ಮೂಡಂಬೈಲು ಸಿ. ಗೋಪಾಲಕೃಷ್ಣ ಶಾಸ್ತ್ರಿ ಅಧ್ಯಕ್ಷರು. ನಾಲ್ಕೈದು ದಶಕಗಳ ಅರ್ಥಗಾರಿಕೆಯ ಅನುಭವ, ಪಾಂಡಿತ್ಯ ಇವೆಲ್ಲ ಶಾಸ್ತ್ರಿಯವರ ವಿಶೇಷತೆ. ಈ ಸಂಭ್ರಮದಲ್ಲಿ ಅವರೊಂದಿಗೆ ಮುಕ್ತಮಾತು.
ಮೂಡಣದ ಪ್ರೇರಕ ಶಕ್ತಿ ಮೂಡಂಬೈಲು
ಯಕ್ಷಗಾನದಂತಹ ಒಂದು ಪಾರಂಪರಿಕ ಕಲೆ ಬೆಳೆದು ಬರಬೇಕೆಂದರೆ ಅದಕ್ಕೆ ಪರಂಪರೆಯೇ ತೆರೆದು ನಿಲ್ಲಿಸಿದ ಒಂದು ಹಾದಿ ಮುಖ್ಯವಾಗುತ್ತದೆ. ಎಳೆಯ ಕರು ಭೂಮಿಗೆ ತಾಯಿ ಒಡಲಿಂದ ಬಿದ್ದಾಗ ಅದರ ಮುಂದಿನ ಪ್ರವೃತ್ತಿಗೆ ಯಾವುದೇ ಶಾಸ್ತ್ರ ಸಮ್ಮತವಾದ ಜೀವನ ಕ್ರಮ ಸಿದ್ಧವಾಗಿರುವುದಿಲ್ಲ. ತಾಯಿ ಹಸು ಬಿದ್ದ ಕರುವನ್ನು ಸ್ವಪ್ರಚೋದನೆಯಿಂದಲೆ ತಡವುತ್ತದೆ, ಮತ್ತು ಆಮುಖೇನ ಆ ಕಂದ ಕರುವಿಗೆ ಅತ್ಯಂತ ಪ್ರಾಥಮಿಕವಾಗಿ ಸಿಗಬೇಕಾದ ಆರೈಕೆಯ ಅವಶ್ಯಕತೆಯನ್ನು ಬಾಹ್ಯ ಪ್ರಚೋದನೆ ಇಲ್ಲದೇನೆ ಅದು ನೀಡುತ್ತದೆ. ಕಂದ ಕರುವು ತೀರಾ ಅಪರಿಚಿತ ಕ್ಷೇತ್ರಕ್ಕೆ ಬಂದ ಒಡನೆ ಕರುವು ಎದ್ದು ನಿಲ್ಲುವುದಕ್ಕೆಪ್ರಯತ್ನಿಸಿ ಎದ್ದು ನಿಂತೊಡನೆ ತಾಯಿ ಕೆಚ್ಚಲನ್ನು ಅರಸಿ ಬಾಯಿ ಹಾಕಿ ಬಿಡುತ್ತದೆ.
ಯಕ್ಷಗಾನಕ್ಕೆ ಪುರಾಣವೇ ತಳಹದಿ, ಅದಿಲ್ಲದೆ ಕಾಲ್ಪನಿಕ ಪ್ರಸಂಗ ಬಾಳದು: ಶ್ರೀಪಾದ ಭಟ್‌
ಯಕ್ಷಗಾನ ಸರ್ವಾಂಗೀಣ ಕಲೆ. ಕುಣಿತ, ಅಭಿನಯ, ಮಾತು, ಹಾವಭಾವ, ಪ್ರತ್ಯುತ್ಪನ್ನಮತಿತ್ವ ಸೇರಿ ಆಗುವ ಪರಿಪೂರ್ಣ ಕಲೆ. ಊಟದಲ್ಲಿ ಹೇಗೆ ಎಲ್ಲಾ ರಸ ಮುಖ್ಯವೋ, ಯಾವುದು ಸ್ವಲ್ಪ ಹೆಚ್ಚಾದರೂ ರುಚಿ ಕೆಡುತ್ತದೋ ಯಕ್ಷಗಾನವೂ ಹಾಗೇ. ಈಗ ಜನಕ್ಕೆ ಏನು ಬೇಕೋ ಅದನ್ನು ಕೊಡುವ ಉಮೇದು ಜಾಸ್ತಿಯಾಗಿದೆ. ಇದರಿಂದ ಪಾತ್ರಕ್ಕೆ ಬೇಕಾದ ತಯಾರಿ ಕಡಿಮೆಯಾಗಿದೆ, ಅಭ್ಯಾಸ ಮರೆತು ಹೋಗಿದೆ. ಯಾವುದೋ ಒಂದು ವರ್ಗದ ಜನರನ್ನು ಹಿಡಿಯುವ ಪ್ರಯತ್ನವಾಗಿ ಕುಣಿತಕ್ಕೆ ಪ್ರಾಧಾನ್ಯತೆ ಸಿಕ್ಕಿದೆ.
ಪೌರಾಣಿಕ ಪ್ರಸಂಗಗಳಿಗಿರುವ ಪಾರಂಪರಿಕ ಚೌಕಟ್ಟಿನ ಸೊಗಸು ಹೊಸಪ್ರಸಂಗಗಳಲ್ಲಿ ತೀರಾ ದುರ್ಲಭ : ಹೊಸಂಗಡಿ ರವೀಂದ್ರ ಶೆಟ್ಟಿ
ಕಂಚಿನ ಕಂಠ ಅಂದಾಗಲೆಲ್ಲ ನಮ್ಮ ಕಣ್ಮುಂದೆ ಬರುವುದು ದಿ| ಗುಂಡ್ಮಿ ಕಾಳಿಂಗ ನಾವುಡರ ಚಿತ್ರ. ಅವರಿದ್ದಷ್ಟು ಕಾಲ ಭಾಗವತಿಕೆಗೆ ಪರ್ಯಾಯ ಪದವೇ ಕಾಳಿಂಗ ನಾವುಡ ಅನ್ನುವಷ್ಟರ ಮಟ್ಟಿಗೆ ಯಕ್ಷರಂಗದಲ್ಲಿ ಏಕಮೇವಾದ್ವಿತೀಯರಾಗಿ ಮೆರೆದವರವರು. ಇಂದಿಗೂ ಅವರ ಹಾಡುಗಾರಿಕೆಯ ಧ್ವನಿಮುದ್ರಿಕೆಯನ್ನು ಕೇಳಿದಾಗ ಆ ಸ್ವರಾನುಭೂತಿಯ ಮೋಡಿಯಲ್ಲಿ ಮೈಮರೆಯುವ ಲಕ್ಷಾಂತರ ಯಕ್ಷಪ್ರೇಮಿಗಳ ಮನಸ್ಸಿನಲ್ಲಿ ಅವರ ಕಂಚಿನ ಕಂಠದ ನೆನಪು ಸದಾ ಹಸಿರು. ಅಂತಹ ಕಾಳಿಂಗ ನಾವುಡರು ನಿರ್ಮಿಸಿಹೋದ ಪರಂಪರೆಯ ಜಾಡಿನಲ್ಲಿ ಹೆಜ್ಜೆಹಾಕುತ್ತಾ ಪ್ರವರ್ಧಮಾನಕ್ಕೆ ಬರುತ್ತಿರುವ ಭಾಗವತರೊಬ್ಬರು ಕಾಳಿಂಗ ನಾವುಡರ ಸ್ವರದ ಛಾಪನ್ನು ಮೈಗೂಡಿಸಿಕೊಂಡು ಯಕ್ಷಗಾನ ರಸಿಕರ ಮನರಂಜಿಸುತ್ತಿದ್ದಾರೆ. ಅವರೇ ಹೊಸಂಗಡಿಯ ರವೀಂದ್ರ ಶೆಟ್ಟಿಯವರು.
ಯಕ್ಷಗಾನಕ್ಕೆ ರಾಷ್ಟ್ರ ಮಟ್ಟದ ಮನ್ನಣೆ ಸಿಗಬೇಕು : ಪಂಜಾಜೆ
ಇದು ಪ್ರಶ್ನೆ ಅಥವಾ ಗೊಂದಲ. ಯಕ್ಷಗಾನಂ ಗೆಲ್ಗೆ, ಯಕ್ಷಗಾನಂ ಬಾಳ್ಗೆ. ಹಾಗಂತ ಯಕ್ಷಪ್ರೇಮಿಗಳ ಕಾರಿನ ಹಿಂಭಾಗದಲ್ಲಿ, ವೇದಿಕೆಯ ಮೈಕಿನಲ್ಲಿ ಅನುರಣಿಸುತ್ತದೆ. ಮಳೆಗಾಲದ ರಾತ್ರಿ, ವೀಕೆಂಡಿನ ಹಗಲು ಕಲಾಕ್ಷೇತ್ರದಲ್ಲಿ ಬಣ್ಣಗಳು, ಪಾತ್ರಗಳು ಮೈತಾಳುತ್ತವೆ. ಮೂರು ಗಂಟೆಗಳ ಕಾಲ ನಡೆವ ಯಕ್ಷಗಾನ ಮೇಲೋ, ರಾತ್ರಿಯಿಡೀ ನರ್ತಿಸುವ ಪ್ರಸಂಗ ಮೇಲೋ ಅಂತ ಪೈಪೋಟಿಯ ಮಾತು ಕೇಳುತ್ತದೆ. ಆದರೆ ಯಕ್ಷಗಾನ ದಿನೇದಿನೇ ಹಲವು ಬದಲಾವಣೆಗಳಿಗೆ ಒಡ್ಡಿಕೊಳ್ಳುತ್ತಿದೆ, ಪರಂಪರೆ ಮತ್ತು ಆಧುನಿಕತೆಯ ಮಧ್ಯೆ ಅದಕ್ಕೂ ಹಲವು ಸವಾಲುಗಳು ಎದುರಾಗಿವೆ.
ಕುಣಿಯುವ ನವಿಲಿಗೆ ಪದ್ಮಶ್ರೀ ಗೆಜ್ಜೆ
ಕುಮಾರವ್ಯಾಸ ಹಾಡಿದನೆಂದರೆ, ಕಲಿಯುಗ ದ್ವಾಪರವಾಗುವುದು. ಇದು ಕುವೆಂಪು ಗದುಗಿನ ಭಾರತ ಓದಿ ಬರೆದ ಕವಿತೆ. ಹಾಗೆಯೇ ಚಿಟ್ಟಾಣಿಯವರು ಕುಣಿದರೆಂದರೆ ದ್ವಾಪರ, ತ್ರೇತಾಯುಗ ಇತ್ಯಾದಿ ಎಲ್ಲಾ ಯುಗಗಳು 4 ಕಂಬದ ರಂಗಸ್ಥಳದ ಮೇಲೆ ಸೃಷ್ಟಿಗೊಳ್ಳುವುದರಲ್ಲಿ ಅನುಮಾನವಿಲ್ಲ. ನಿಂತ ಸ್ಥಳವನ್ನೇ ಬಣ್ಣ ಬೆಡಗಿನ ಲೋಕವಾಗಿ ಮರುಸೃಷ್ಟಿಗೊಳಿಸಬಲ್ಲ ಶಕ್ತಿ ಇರುವುದು ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಕುಣಿತಕ್ಕೆ. ಒಂದರ್ಥದಲ್ಲಿ ಯಕ್ಷಗಾನ ರಂಗದ ಮಂತ್ರವಾದಿ ಇವರು. ನೀಲಗಗನದೊಳು ನವಿಲು ಕುಣಿಯುತಿದೆ ನೋಡು ಎಂದು ನವಿಲು ಕುಣಿತಕ್ಕೆ ಪ್ರಾರಂಭಿಸಿದರೆ ಶೃಂಗಾರ ರಸ ಸಾಕಾರಗೊಳ್ಳುತ್ತದೆ. ನೋಡಿರಿ ಧರ್ಮಜ ಪಲುಗುಣಾದಿಗಳೇ ಎಂದು ಗದಾಯುದ್ಧದಲ್ಲಿ ಭೀಮ ಬಿದ್ದ ಖುಶಿಗೆ ಕೌರವ ಪಡುವ ಸಂಭ್ರಮದ ಕುಣಿತ ರನ್ನನ ಇಡೀ ಕಾವ್ಯವನ್ನೇ ಮತ್ತೊಮ್ಮೆ ನೆನಪಿಸುತ್ತದೆ. ಕೌರವನ ಪಾತ್ರವಂತೂ ರನ್ನನ ಕಾವ್ಯದ ಒಂದು ಸಾರ್ಥಕ ಮರು ಸೃಷ್ಟಿಯೇ ಆಗಿದೆ. (ಪದ್ಮಶ್ರಿ ಪ್ರಶಸ್ತಿ ಪ್ರಕಟವಾದ ಸಂದರ್ಭದಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆರೊ೦ದಿಗೆ ವಿಠ್ಠಲ ಭಂಡಾರಿಯವರ ಸ೦ದರ್ಶನ )
ರಸಾನಂದದ ಕಲ್ಪನೆಯಿದ್ದರೆ ನಿವೃತ್ತಿ ಎಂಬ ಪ್ರಶ್ನೆಯೇ ಇರುವುದಿಲ್ಲ : ಮಂಟಪ
ಚೆಂದ, ಸೌಂದರ್ಯವೇ ಸ್ತ್ರೀಪಾತ್ರದ ಮುಖ್ಯ ಅಂಶವಲ್ಲ. ಆದರೆ ಅದೇ ಮುಖ್ಯ ಎಂಬಂತಾಗಿರುವುದು ದೌರ್ಭಾಗ್ಯ. ಕಾಣಿಸಿಕೊಳ್ಳುವುದೇ ಉದ್ದೇಶವಾಗಿದ್ದ ಕಾಲಕ್ಕೆ ಸೀರೆ, ಪೋಷಾಕು, ವೇಷಭೂಷಣವೆಲ್ಲಾ ಚೆಂದವಾಗಿದ್ದರೆ ಮಾತ್ರ ಮಿಂಚಲು ಸಾಧ್ಯ ಎಂಬುದಷ್ಟೇ ನನಗೂ ಗೊತ್ತಿದ್ದರಿಂದ ಕಲೆಗಿಂತ ಹೆಚ್ಚು ಪ್ರದರ್ಶನದ ಬಗ್ಗೆ ಗಮನವಿತ್ತು. ಅದಕ್ಕೆ ಪೂರಕವಾಗಿ ಭರತನಾಟ್ಯ ಕಲಿತೆ. ಆ ಶ್ರಮ ನನ್ನ ಒಟ್ಟು ನೃತ್ಯದಲ್ಲಿ ಹೊಸ ರೇಖೆಗಳನ್ನು ಕಾಣಿಸಿದ ಕಾರಣ ಈವಾಗಲೂ ಭರತನಾಟ್ಯ ಕುಣೀತಿರಿ ಎಂಬ ದೂರುಗಳಿವೆ. ಆದರೆ ಕಲೆಯ ಆನಂದ, ಸ್ವಾದ, ರಸ, ಭಾವ ಮುಂತಾಗಿ ಯಾವ ವಿಚಾರಗಳೂ, ನಾಟ್ಯಶಾಸ್ತ್ರದ ಯಾವ ಕಲ್ಪನೆಯೂ ಆಗ ಇರಲಿಲ್ಲ. ಜನರ ಮುಂದೆ ಹೋಗಿ ನರ್ತಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ತೀವ್ರತೆಯೊಂದೇ ಇತ್ತು.
ಬಲಿಪ ವಿಚಾರ ಸಂವಾದ
ಸುಮಾರು 50 ವರ್ಷಗಳ ಸುದೀರ್ಘ ಕಾಲದ ಭಾಗವತಿಕೆ. ಯಕ್ಷಗಾನದ ಪೂರ್ವರಂಗ ಸಂಗೀತವನ್ನು ನಿಖರವಾಗಿ ಬಲ್ಲ ಏಕೈಕ ಭಾಗವತ ಎಂಬ ಹೆಗ್ಗಳಿಕೆ. ಪರಂಪರೆಯ ಯಕ್ಷಗಾನಕ್ಕೊಂದು ಮನ್ನಣೆ ನೀಡಿ ಇಂದಿಗೂ ಶುದ್ಧ ಯಕ್ಷಗಾನ ಶೈಲಿಯನ್ನು ಉನ್ನತ ಕಂಠಸಿರಿಯಿಂದ ಹಾಡುವ ತಾಕತ್ತುಳ್ಳ ಅಮೂಲ್ಯ ಸ್ವರಹೊಂದಿದ ಭಾಗವತರು. ತೆ೦ಕು ತಿಟ್ಟಿನ ಯಕ್ಷಗಾನದ ಪರಮ ಅಭಿಮಾನಿಯೂ ಲೇಖಕರೂ ಆಗಿರುವ ರಾಜ್ ಕುಮಾರ್ ಅವರ ಬ್ಲಾಗ್ http://yakshachintana.wordpress.com ನಲ್ಲಿ ಪ್ರಕಟಗೊ೦ಡ ಈ ಸ೦ದರ್ಶನವನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ.
ಸ್ತ್ರೀಪಾತ್ರದ ಪ್ರಭಾವ ಗೌಣವಾಗದ೦ತೆ ಅಭಿನಯಿಸಬೇಕು
ಯಕ್ಷಗಾನ ರಂಗದಲ್ಲಿ ರೂಪ, ಸ್ವರಭಾರ, ಆಳಂಗ, ಅಭಿನಯಗಳು ಒಂದಕ್ಕೊಂದು ಪೂರಕವಾಗಿದ್ದರೆ ಒಬ್ಬ ಕಲಾವಿದನ ಸ್ತ್ರೀ ವೇಷ ಎಷ್ಟು ಯಶಸ್ಸು ಗಳಿಸಬಹುದು ಎನ್ನುವುದಕ್ಕೆ ದೃಷ್ಟಾಂತ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ. ಹೊನ್ನಾವರದವರಾದ ಇವರು ಕನ್ನಡ ಸ್ನಾತಕೋತ್ತರ ಪದವೀಧರರಾಗಿ ಯಕ್ಷರಂಗ ಪ್ರವೇಶಿಸಿದವರು. ಪದವಿಯ ಬಳಿಕ ಕೆರೆಮನೆ ಶಂಭು ಹೆಗಡೆಯವರ ಗುಣವಂತೆಯ ಶ್ರೀಮಯ ಕಲಾಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡರು. ಅಲ್ಲಿ ಗುರುಗಳಾಗಿದ್ದ ಹೆರಂಜಾಲು ವೆಂಕಟರಮಣ ಗಾಣಿಗರಿಂದ ನಾಟ್ಯ ಕಲಿತು ಪರಿಪೂರ್ಣಕಲಾವಿದರಾಗಿ ಮೂಡಿಬಂದರು.
``ಅನುಸರಣೆ ಸರಿ; ಅನುಕರಣೆ ಸಲ್ಲದು`` - ಪಾತಾಳ ವೆ೦ಕಟರಮಣ ಭಟ್
1950ರ ನಂತರದ 3 ದಶಕಗಳಲ್ಲಿ ಸ್ತ್ರೀವೇಷದಲ್ಲಿ ಸೈ ಎನಿಸಿಕೊಂಡ ಹಿರಿಯ ಕಲಾವಿದ ಪಾತಾಳ ವೆ೦ಕಟರಮಣ ಭಟ್. ಸ್ತ್ರೀವೇಷಕ್ಕೆ ನಿರ್ದಿಷ್ಟ ವೇಷಭೂಷಣ ಪರಿಕಲ್ಪನೆ ಇಲ್ಲದಿದ್ದ ಕಾಲಕ್ಕೆ ಅಂತಃಪುರ ಗೀತೆಗಳನ್ನು ಗಮನಿಸಿ, ಶಿಲ್ಪಕಲೆಯಿಂದ ಪ್ರೇರಣೆ ಪಡೆದು ವೇಷಭೂಷಣ ಮಾಡಿದವರು. ಬೇಲೂರು-ಹಳೇಬೀಡಿಗೆ ಹೋಗಿ ಅಧ್ಯಯನ ನಡೆಸಿ ವಿವಿಧ ಬಗೆಯ ಆಭರಣ, ವಸ್ತ್ರ ವಿನ್ಯಾಸದ ಪ್ರಯೋಗ ನಡೆಸಿದವರು. ಭಂಗಿಗಳ ಅಧ್ಯಯನಕ್ಕಾಗಿ ಭರತನಾಟ್ಯವನ್ನು ಕಲಿತು ಯಕ್ಷಗಾನೀಯವಾಗಿ ಹೊಂದಿಸಿಕೊಂಡವರು. ಮೊದಲು ಬಡಗು ತಿಟ್ಟಿನ ವೇಷಧಾರಿಯಾಗಿ ರಂಗಕ್ಕೆ ಕಾಲಿಟ್ಟು; 1956ರ ನಂತರ ತೆಂಕುತಿಟ್ಟಿನ ಅಗ್ರಮಾನ್ಯ ಸ್ತ್ರೀ ವೇಷಧಾರಿಯಾಗಿ ಮೆರೆದ ಪಾತಾಳರ ಹೆಸರಿನಲ್ಲಿ ಈಗಾಗಲೇ ಪ್ರಶಸ್ತಿಯೊಂದನ್ನು ಅನುಭವಿ ಕಲಾವಿದರಿಗೆ ನೀಡುತ್ತಾ ಬರಲಾಗುತ್ತಿದೆ.
ಪೂರ್ಣಚಂದ್ರ ಎಂಬ ಅರ್ಪಿತಾ ಪ್ರಸಂಗ
`ಚಿಕ್ಕ ಪ್ರಾಯದ ಬಾಲೆ ಚದುರೆ , ಪ್ರಸಂಗವೊಂದ ಬರೆದೆಯೇನೇ! ` - ಧಿ-ಹಾಗಂತ ಥೇಟ್‌ ಯಕ್ಷಗಾನದ ಧಾಟಿಯಲ್ಲೇ ಕೇಳಬೇಕು. ಅಂಥ ಕೆಲಸವನ್ನು ಈ ಇಪ್ಪತ್ತರ ಬಾಲೆ ಅರ್ಪಿತಾ ಹೆಗಡೆ ಮಾಡಿದ್ದಾಳೆ. ಹೊಸಚಿಗುರು ಹಳೆಬೇರು, ಹಳೆ ತತ್ವ ಹೊಸಯುಕ್ತಿ ಒಂದಾಗುವುದು ಅಂದರೆ ಇದೇ. ಫೇಸ್‌ಬುಕ್‌ ಪ್ರಿಯೆ, ಅನಿಮೇಷನ್‌ ವಿದ್ಯಾರ್ಥಿನಿ, ಬರೆದದ್ದು ಯಕ್ಷಗಾನ ಪ್ರಸಂಗ. ಅದೇನು ಸುಲಭದ ಕೆಲಸವಲ್ಲ, ಕಂದಪದ್ಯದಿಂದ ಹಿಡಿದು ಷಟ್ಪದಿಗಳ ತನಕದ ಛಂದಸ್ಸು ಗೊತ್ತಿರಬೇಕು. ಬರೆದ ಪದ್ಯ ಯಾವ ತಾಳದಲ್ಲಿರಬೇಕು ಅನ್ನುವುದು ತಿಳಿದಿರಬೇಕು. ವೀರಾವೇಶದ ಪದ್ಯಗಳಿಂದ ಶೃಂಗಾರದ ಪದ್ಯಗಳ ತನಕ ಒಂದೊಂದಕ್ಕೂ ಒಂದೊಂದು ಧಾಟಿ. ವಿದೂಷಕನ ಶೈಲಿಯೇ ಬೇರೆ, ರಾಜಗಾಂಭೀರ್ಯ, ರಾಜಕುಮಾರಿಯ ವಯ್ನಾರ, ತಪಸ್ವಿಯ ಧೀಮಂತಿಕೆಗಳೆಲ್ಲ ಒಂದು ಪ್ರಸಂಗದೊಳಗೆ ಮೈಗೂಡುವಂತೆ ಬರೆಯುವುದು ಒಂದು ಸವಾಲು.
ಯಕ್ಷ ಅಭಿಮನ್ಯು ತೀರ್ಥಳ್ಳಿ ಚೌಕಿಮನೆಯಲ್ಲಿ
ಯಕ್ಷ ಅಭಿಮನ್ಯು ಎಂಬ ಬಿರುದು ಹೊಂದಿರುವ ಇವರಿಗೆ ಯಕ್ಷಗಾನ ಕಲೆ ಜನರನ್ನು ಖುಷಿಪಡಿಸುವುದಕ್ಕಾಗಿಯೇ ಇರುವುದೆಂಬ ಪ್ರಾಮಾಣಿಕ ನಂಬಿಕೆ. ಹಾಗಾಗಿ ಸಾಮಾಜಿಕ ಕತೆ ಅಥವಾ ಜನಪ್ರಿಯ ಸಿನಿಮಾ ಆಧರಿತ ಯಕ್ಷಗಾನಗಳು ಕಲೆಯನ್ನು ಕುಲಗೆಡಿಸುತ್ತಿದೆ ಎಂಬ ಗೊಣಗಾಟವೇ ಇಲ್ಲ. ಯಕ್ಷಗಾನದಲ್ಲಿ ಕೌಟಿಂಬಿಕ ಹಿನ್ನೆಲೆ ಇಲ್ಲದ ತನಗೆ, ಹೆಚ್ಚಿನ ಓದು ಸಾಧ್ಯವಾಗದಿದ್ದರೂ ತನ್ನ ಕೆಲಸ ನೋಡಿ ಜನ ಗುರುತಿಸಿದರು ಎಂಬ ಧನ್ಯತಾ ಭಾವ. `ತಿರುಗಾಟದ ಸಮಸ್ಯೆಯನ್ನು ರಂಗದಲ್ಲಿ ಮರೆತುಬಿಡುವುದು` ಎಂಬ ತತ್ವದಿಂದಾಗಿ ಮೇಳದ ಬದುಕಿನ ಅವ್ಯವಸ್ಥೆಗಳು, ಯಾವ್ಯಾವುದೋ ಊರಿಗೆ ಹೋದಾಗ ಅಲ್ಲಿನ ಗ್ರಾಮ ಚಾವಡಿಯಲ್ಲೇ ಮಲಗಿ ನಿದ್ರಿಸಬೇಕಾದ ಕಷ್ಟಗಳ ಬಗ್ಗೆ ಕಂಪ್ಲೇಂಟ್‌ಗಳೇ ಇಲ್ಲ. ತನ್ನ ಕೆಲಸ ಏನಿತ್ತೂ ರಂಗಸ್ಥಳದಲ್ಲಿ ಎಂದು ನಂಬಿ ತಿರುಗಾಟ ನಡೆಸಿದ್ದರಿಂದ, ರಂಗಸ್ಥಳದಿಂದ ಇಳಿದ ಮೇಲೆ ಯಕ್ಷಗಾನದ ಬಗ್ಗೆ ಹೇಳುವುದಕ್ಕೆ ಹೆಚ್ಚೇನೂ ಇಲ್ಲ.
ಕೆರೆಮನೆ ಶಿವಾನಂದ ಹೆಗಡೆ ಅವರ ಸಂದರ್ಶನ
ಸಿಂಗಪುರದ ಎಸ್‌ಪ್ಲನೇಡ್‌ನ ತೆರೆದ ಸಭಾಂಗಣದಲ್ಲಿ `ಕಲಾ-ಉತ್ಸವ 2012`ದ ಪ್ರಯುಕ್ತ ಒಟ್ಟು 8 ಯಕ್ಷಗಾನ ಕಿರುಪ್ರಸಂಗದ ಪ್ರದರ್ಶನಗಳನ್ನು ನೀಡಿದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆಯ ನಿರ್ದೇಶಕರಾದ ಕೆರೆಮನೆ ಶಿವಾನಂದ ಹೆಗಡೆ ಅವರ ಜೊತೆ ಒಂದು ಕಿರು-ಸಂದರ್ಶನ ನಡೆಸುವ ಭಾಗ್ಯ ನನಗೆ ದೊರೆತಿತ್ತು. ಈ ಸಂದರ್ಶನದ ತುಣುಕುಗಳು.
ಯಕ್ಷಗಾನದ ಬಗ್ಗೆ ಪ್ರಶ್ನೆಗಳಿಗೆ ಶ್ರೀ ಪ್ರಭಾಕರ ಜೋಷಿ ಅವರ ಉತ್ತರಗಳು
ಭಕ್ತಿಪ೦ಥದ ಪ್ರಚಾರಕ್ಕಾಗಿ 12 ನೇ ಶತಮಾನದಲ್ಲಿ ಕೇಳಿಕೆಯ ಪ್ರಸ್ತಾಪ ಇದೆ. ಯಕ್ಷಗಾನಕ್ಕೆ ಆಟ ಬಯಲಾಟ ಅಥವಾ ದಶಾವತಾರ ಎ೦ಬುದು ಎರಡೇ ಹೆಸರು. ಯಕ್ಷಗಾನ ಎನ್ನುವುದು ಪ್ರಭ೦ಧ ಜಾತಿಯ ಹೆಸರು. ಅ೦ದರೆ ಪ್ರಸ೦ಗ ಅಥವಾ ಪಟ್ಟಿಯಲ್ಲಿ ಇರುವ ಬರಹದ ಸಾಹಿತ್ಯ ಜಾತಿಗೆ `ಯಕ್ಷಗಾನ` ಎ೦ದು ಹೆಸರು. ಈ ಯಕ್ಷಗಾನ ಎ೦ಬ ಹೆಸರನ್ನು ಆಟಕ್ಕೆ ಬಳಸುವುದು ಸುಮಾರು 100-200 ವರ್ಷದಿ೦ದ ಇರಬಹುದು. ಪುರ೦ದರದಾಸರ ಅನಸೂಯ ಚರಿತ್ರೆ, ಪಾರ್ತಿಸುಬ್ಬನ ರಾಮಾಯಣ ಇತ್ಯಾದಿ. ತಿಟ್ಟುಗಳ ರಚನೆ ಆಗಿ ಸುಮಾರು ೩೦೦ ವರ್ಷ ಆಗಿರಬಹುದು. ಪಾರ್ತಿಸುಬ್ಬ ತೆ೦ಕಿನ ಮೂಲಪುರುಷ. ಮೂಲ ಇದು ರಾಮ ಕತೆಯ ಆಟ ಇರಬಹುದು. 30ಕ್ಕೂ ಹೆಚ್ಚು ವೃತ್ತಿಮೇಳಗಳಿವೆ,
ಯಕ್ಷಗಾನ ರಂಗದಲ್ಲಿ ಪ್ರಜ್ವಲಿಸುತ್ತಿರುವ ನಕ್ಷತ್ರ ಪ್ರಜ್ವಲ್ ಕುಮಾರ್
ಯುವ ಜನತೆ ಯಕ್ಷಗಾನ ಮೊದಲಾದ ಕಲಾ ಪ್ರಕಾರಗಳಿಂದ ದೂರ ಉಳಿಯುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿರುವ ಈ ದಿನಗಳಲ್ಲಿ, ಆ ಮಾತಿಗ ಅಪವಾದದಂತೆ ಯಕ್ಷಗಾನವನ್ನೇ ತನ್ನ ಜೀವಾಳವನ್ನಾಗಿಸಿ ಯಕ್ಷಗಾನ ರಂಗದಲ್ಲಿನ ಹೆಚ್ಚಿನ ಎಲ್ಲಾ ವೇಷ ಪ್ರಕಾರಗಳಲ್ಲೂ ಪಳಗಿರುವ ಅದರಲ್ಲೂ ಪ್ರಮುಖವಾಗಿ ಬಣ್ಣದ ವೇಷಗಳಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿರುವ 26 ವರ್ಷದ ತರುಣರೊಬ್ಬರು ನಮ್ಮ ನಿಮ್ಮೆಲ್ಲರ ಮಧ್ಯೆ ಇದ್ದಾರೆ. ಅವರೇ ಗುರುವಾಯನಕೆರೆಯ ಬೇಬಿ ಶೆಟ್ಟಿ ಹಾಗೂ ದಿವಂಗತ ಸಂಪ ಶೆಟ್ಟಿ ಅವರುಗಳ ಸುಪುತ್ರ ಪ್ರಜ್ಚಲ್ ಕುಮಾರ್ ಗುರುವಾಯನಕೆರೆ. ಆರ್ ಎನ್ ಎನ್ ಲೈವ್ ಜತೆ ತಮ್ಮ ಕಲಾಸಕ್ತಿಯ ಬಗೆಯನ್ನು ಹಂಚಿಕೊಂಡ ಅವರ ಮಾತುಗಳು ಇಲ್ಲಿವೆ.
ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ