ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಮೇಳಗಳು  

ಯಕ್ಷಗಾನ ಮೇಳಗಳು ಮೊದಲಿನಷ್ಟು ಇಲ್ಲದಿದ್ದರೂ ಇಂದು ಹಲವಾರು ಮೇಳಗಳು ತಿರುಗಾಟದಲಿದ್ದಾವೆ. ವೃತ್ತಿ ಮೇಳಗಳು ಕಡಿಮೆಯಾಗುತ್ತಿದ್ದರೂ, ಹರಕೆ ಮೇಳಗಳು ಇಂದು ಗಣನೀಯವಾಗಿ ಹರಕೆಗಳು ಹೆಚ್ಚುತ್ತಲೆ ಇದೆ. ಧಣಿದ ಮನಸ್ಸಿಗೆ ಮನೋರಂಜನೆ ನೀಡಲು ಕಲಾವಿದರು ನಿದ್ದೆ ಬಿಟ್ಟು ವಾಕ್ ಚಾತುರ್ಯದ ಮಾತಿನ ಮಂಟಪ, ಹಾಸ್ಯ, ಅಭಿನಯ, ನೃತ್ಯ, ಗಾಯನ, ತಾಳ-ಮೇಳಗಳು ಹೀಗೆ ಪೇಕ್ಷಕರಿಗೆ ರಾತ್ರಿ ಇಡಿ ಮನೋರಂಜನೆಯನ್ನು ನೀಡುತ್ತಾರೆ. ಇಂದು ಡೇರೆ ಮೇಳಗಳು ಪ್ರೇಕ್ಷಕರನ್ನು ಸೆಳೆಯಲು ಹಲವು ಪ್ರಯೋಗಗಳನ್ನು ಮಾಡುತ್ತಿರುವುದು ವಿಶೇಷ.

ಬಡಗು ತಿಟ್ಟಿನಲ್ಲಿ ದೇವಸ್ಥಾನಗಳ ಆಶ್ರಯದಲ್ಲಿ ಮಾರಣಕಟ್ಟೆ -೨, ಮಂದಾರ್ತಿ ೫, ಪೆರ್ಡೂರು ಮತ್ತು ಸಾಲಿಗ್ರಾಮ ಡೇರೆ ಮೇಳಗಳು ಸೇರಿ ೨೦ಕ್ಕೂ ಅಧಿಕ ಮೇಳಗಳು ಈ ವರ್ಷ ತಿರುಗಾಟಕ್ಕೆ ಇಳಿಯಲಿದೆ. ೧೫ ರಷ್ಟು ಮೇಳಗಳು ಪೌರಾಣಿಕ ಪ್ರಸಂಗಗಳನ್ನೇ ಆಡುತ್ತಾರೆ. ಇನ್ನುಳಿದ ಮೇಳಗಳು ಸಾಮಾಜಿಕ ಮತ್ತು ಪೌರಾಣಿಕ ಪ್ರಸಂಗಗಳನ್ನು ಆಡುತ್ತಾವೆ. ಮೇಳಗಳು ತಮ್ಮ ತಮ್ಮ ದೇವಸ್ಥಾನದಲ್ಲಿ ಗೆಜ್ಜೆ ಕಟ್ಟಿ ದೇವರ ಸೇವೆಯ ಆಟಗಳನ್ನು ಆಡಿ, ಆನೆಗುಡ್ಡೆಯಲ್ಲಿ ಕೂಡ ಹರಕೆ ರೂಪದಲ್ಲಿ ಸೇವೆಯನ್ನು ಮಾಡುತ್ತಾರೆ. ಬಳಿಕ ಭಕ್ತರ ಹರಕೆ ಆಟಗಳನ್ನು ಆಡಲು ಪ್ರಾರಂಭಿಸುತ್ತಾರೆ.

ಯಕ್ಷಗಾನದ ರಂಗದಲ್ಲಿ ಎರಡು ಮೇಳಗಳ ಆಟವು ಸುಸಂಬದ್ಧವಾಗಿ ಪ್ರದರ್ಶನಗೊಳ್ಳುತ್ತಿದ್ದವು, ಆಧುನಿಕತೆಯ ಪ್ರಭಾವವೋ ಅಥವಾ ಜನಾರ್ಕಷಣೆಯ ಕೇಂದ್ರ ಬಿಂದುವಾಗಿ ಹಳೆಯ ಶೈಲಿಯನ್ನು ಕೈಬಿಟ್ಟು ಹೊಸತನಕ್ಕೆ ತೆರೆದುಕೊಂಡಿದ್ದಾವೆ. ಹಿಂದೆ ಇಂಥ ಸ್ವರ್ಧೆಗಳು ಏರ್ಪಟ್ಟಾಗ ಎರಡು ಮೇಳಗಳ ನಡುವೆ, ಪ್ರೇಕ್ಷಕರ ನಡುವೆ ಹೊಕೈ ಆಗಿದ್ದುಂಟು. ಹಾಗಾಗೀ ಒಂದೇ ರಂಗಸ್ಥಳದಲ್ಲಿ ಪಾತ್ರಗಳನ್ನು ಎರಡು ಮೇಳದವರಿಗೆ ಹಂಚಿ ಪ್ರದರ್ಶನವನ್ನು ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹರಕೆ ಮೇಳಗಳು ಖರ್ಚಿನ ದಾರಿಯಾಗಿ ಪರಿಣಮಿಸಿದ್ದಾವೆ ಎನ್ನುವ ನೋವು ಭಕ್ತರಲ್ಲಿದೆ.


 ಶ್ರೀ ಮ೦ಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮ೦ಡಳಿ, ಧರ್ಮಸ್ಥಳ
ಈ ಮೇಳದ ವಿವರಗಳಿನ್ನೂ ಸೇರ್ಪಡೆಯಾಗಬೇಕಿದೆ. ಆಸಕ್ತರು ಲಭ್ಯ ಮಾಹಿತಿಗಳನ್ನು ಕಳುಹಿಸಿ.
 
 ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ದಶಾವತಾರ ಮ೦ಡಳಿ, ಕಟೀಲು
ಶ್ರೀ ಕಟೀಲು ದೇವಿಗೆ ಆಟವೆಂದರೆ ಇಷ್ಟ. ಹಾಗಾಗಿ ಶ್ರೀ ಕ್ಷೇತ್ರದ ಹರಕೆ ಆಟಗಳಿಗೆ ವಿಶೇಷ ಮಹತ್ವವಿದೆ. ಅರುಣಾಸುರನನ್ನು ಮರ್ಧಿಸಿ ನೆಲೆಯಾದ ಭ್ರಮರಾಂಬಿಕೆ ಖುದ್ದು ತಮ್ಮ ಮನೆಗೆ ಬರುತ್ತಾಳೆ ಎಂಬ ನಂಬಿಕೆಯಿಂದ ಬಹು ಶ್ರದ್ಧೆಯಿಂದ ಆಟ ಆಡಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ದಿನಂಪ್ರತಿ ಸರಾಸರಿ ಮೂರ‍್ನಾಲ್ಕು ಹರಕೆಯಾಟಗಳು ಬುಕ್ಕಿಂಗ್ ಆಗುತ್ತಿವೆ. ಇಪ್ಪತ್ತು ವರುಷಗಳಿಗೂ ಮಿಕ್ಕಿ ಆಟಗಳ ಬುಕ್ಕಿಂಗ್ ಆಗಿವೆ ಎಂದರೆ ಬಹುಶಃ ಮತ್ಯಾವ ಕಲೆಯೂ ಈ ಪರಿಯ ದಾಖಲೆ ಮಾಡಿರಲಿಕ್ಕಿಲ್ಲ. ಒಂದರ್ಥದಲ್ಲಿ ಇದು ಗಿನ್ನಿಸ್ ದಾಖಲೆ.
 
 ಶಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳ, ಮ೦ದಾರ್ತಿ
ಈ ಮೇಳದ ವಿವರಗಳಿನ್ನೂ ಸೇರ್ಪಡೆಯಾಗಬೇಕಿದೆ. ಆಸಕ್ತರು ಲಭ್ಯ ಮಾಹಿತಿಗಳನ್ನು ಕಳುಹಿಸಿ.
 
 ಶ್ರೀ ಇಡಗು೦ಜಿ ಮಹಾಗಣಪತಿ ಯಕ್ಷಗಾನ ಮ೦ಡಳಿ ಕೆರೆಮನೆ
ಕಳೆದ ೭೫ ವರ್ಷಗಳಿ೦ದ ಪೌರಾಣಿಕ ಪ್ರಸ೦ಗಗಳನ್ನು ಪ್ರಸ್ತುತ ಪಡಿಸುತ್ತಿರುವ ಬಡಗು ತಿಟ್ಟಿನ ಮೇರು ಮೇಳಗಳಲ್ಲಿ ’ಶ್ರೀ ಇಡಗು೦ಜಿ ಮಹಾಗಣಪತಿ ಯಕ್ಷಗಾನ ಮ೦ಡಳಿ ಕೆರೆಮನೆ’ ಮು೦ಚೂಣಿಯಲ್ಲಿದೆ. 1934ರಲ್ಲಿ ದಿವ೦ಗತ ಶ್ರೀ ಕೆರೆಮನೆ ಶಿವರಾಮ ಹೆಗಡೆಯವರಿ೦ದ ಸ್ಥಾಪಿಸಲ್ಪಟ್ಟ ಮೇಳವನ್ನು, ಹ೦ತ ಹ೦ತವಾಗಿ ಪ್ರವರ್ಧಮಾನಗೊಳ್ಳಲು ದಿವ೦ಗತ ಶ್ರೀ ಕೆರೆಮನೆ ಶ೦ಭು ಹೆಗಡೆಯರು ಕಾರಣೀಭೂತಗಿದ್ದಾರೆ. 8000ಕ್ಕೂ ಮಿಗಿಲಾಗಿ ದೇಶ ವಿದೇಶಗಳಲ್ಲಿ ಪ್ರದರ್ಶನಗಳನ್ನು ಸಾದರ ಪಡಿಸಿದ ಈ ಮೇಳವು, ಪ್ರಸ್ತುತ ಶ್ರೀ ಕೆರೆಮನೆ ಶಿವಾನ೦ದ ಹೆಗಡೆಯವರ ಮು೦ದಾಳತ್ವದಲ್ಲಿ ಮುನ್ನಡೆಯುತ್ತಿದೆ. ಈ ಮೇಳದಲ್ಲಿ ಸೇವೆ ಸಲ್ಲಿಸಿದ ಕಲಾವಿದರಲ್ಲಿ, ದಿವ೦ಗತ ಶ್ರೀ ಕೆರೆಮನೆ ಶಿವರಾಮ ಹೆಗಡೆ, ದಿವ೦ಗತ ಶ್ರೀ ಕೆರೆಮನೆ ಶ೦ಭು ಹೆಗಡೆ, ದಿವ೦ಗತ ಶ್ರೀ ಕೆರೆಮನೆ ಮಹಾಬಲ ಹೆಗಡೆ ಮತ್ತು ಭಾಗವತರಾದ ಶ್ರೀ ನೆಬ್ಬೂರು ನಾರಯಣ ಹೆಗಡೆಯವರು ಕೇ೦ದ್ರೀಯ ನಾಟಕ ಅಕಾಡೆಮಿ ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ. ಮು೦ದೆ ಓದಿ...
 
 ಶ್ರೀ ರಾಮಚ೦ದ್ರ ಕೃಪಾಪೋಷಿತ ಯಕ್ಷಗಾನ ಮ೦ಡಳಿ, ಹೊಸನಗರ
ಈ ಮೇಳದ ವಿವರಗಳಿನ್ನೂ ಸೇರ್ಪಡೆಯಾಗಬೇಕಿದೆ. ಆಸಕ್ತರು ಲಭ್ಯ ಮಾಹಿತಿಗಳನ್ನು ಕಳುಹಿಸಿ.
 
 ಶ್ರೀ ಅನ೦ತಪದ್ಮನಾಭ ಯಕ್ಷಗಾನ ಮ೦ಡಳಿ, ಪೆರ್ಡೂರು
ಈ ಮೇಳದ ವಿವರಗಳಿನ್ನೂ ಸೇರ್ಪಡೆಯಾಗಬೇಕಿದೆ. ಆಸಕ್ತರು ಲಭ್ಯ ಮಾಹಿತಿಗಳನ್ನು ಕಳುಹಿಸಿ.
 
 ಶ್ರೀ ಗುರುಪ್ರಸಾದಿತ ಯಕ್ಷಗಾನ ಮ೦ಡಳಿ, ಸಾಲಿಗ್ರಾಮ
ಈ ಮೇಳದ ವಿವರಗಳಿನ್ನೂ ಸೇರ್ಪಡೆಯಾಗಬೇಕಿದೆ. ಆಸಕ್ತರು ಲಭ್ಯ ಮಾಹಿತಿಗಳನ್ನು ಕಳುಹಿಸಿ.
 
 ಶ್ರೀ ಅಮೃತೇಶ್ವರಿ ದಶಾವತಾರ ಯಕ್ಷಗಾನ ಮ೦ಡಳಿ, ಕೋಟ
ಈ ಮೇಳದ ವಿವರಗಳಿನ್ನೂ ಸೇರ್ಪಡೆಯಾಗಬೇಕಿದೆ. ಆಸಕ್ತರು ಲಭ್ಯ ಮಾಹಿತಿಗಳನ್ನು ಕಳುಹಿಸಿ.
 
ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ