ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಹಾಂಗ್‌ಕಾಂಗ್‌ನಲ್ಲಿ ಕುಣಿಯಲಿದೆ ಉಪ್ಪಿನಕುದ್ರು ಗೊಂಬೆಗಳು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಒಕ್ಟೋಬರ್ 8 , 2015
ಒಕ್ಟೋಬರ್ 8, 2015

ಹಾಂಗ್‌ಕಾಂಗ್‌ನಲ್ಲಿ ಕುಣಿಯಲಿದೆ ಉಪ್ಪಿನಕುದ್ರು ಗೊಂಬೆಗಳು

ಉಡುಪಿ : ಜಾನಪದ ಕ್ಷೇತ್ರಕ್ಕೆ ಉಪ್ಪಿನಕುದ್ರು ಗೊಂಬೆಯಾಟ ತಂಡ ತನ್ನದೇ ಆದ ಕಾಯಕದಿಂದ ವಿಶಿಷ್ಟ ಸೇವೆ ಸಲ್ಲಿಸುತ್ತಿರುವುದಂತೂ ಸುಳ್ಳಲ್ಲಾ. ಇಲ್ಲಿಯ ಕಲಾ ಪರಂಪರೆ 350 ವರ್ಷಗಳ ಸುಧೀರ್ಘ ಇತಿಹಾಸದ ಹಿನ್ನೆಲೆಯಲ್ಲಿ ಇಂದು 6 ನೇ ತಲಾಂತರದಲ್ಲಿ ನಿರಂತರವಾಗಿ ಪ್ರವಹಿಸುತ್ತಿರುವುದು ಒಂದು ಗಿನ್ನಿಸ್ ದಾಖಲೆವೆನ್ನಬಹುದು.

ಈ ಎಲ್ಲಾ ಸಾಧನೆ ಸಂವರ್ಧನೆಗೆ ಮೂಲ ಕಾರಣ ಉಪ್ಪಿನಕುದುರಿನ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡ. ಸರಕಾರದ ಯಾವುದೇ ಸಹಾಯಧನ ನಿರೀಕ್ಷಿಸದೆ, ಸಾಂಘಿಕ ಪ್ರಯತ್ನದಿಂದ ಅಳಿವಿನಂಚಿನಲ್ಲಿರುವ ವಿಶಿಷ್ಟ ಅಷ್ಟೇ ಅಪರೂಪದ ಗೊಂಬೆಯಾಟ ಕಲೆಯನ್ನು ಪ್ರಪಂಚದಾದ್ಯಂತ 15-20 ಕ್ಕೂ ಹೆಚ್ಚು ಬಾರಿ ನಾನಾ ರಾಷ್ಟ್ರಗಳಿಗೆ ಪರಿಚಯಿಸಿದ ಕೀರ್ತಿ ಈ ತಂಡದ್ದು.

ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡ ಇಂದು ತನ್ನ ಸಾಧನೆಯ ಇನ್ನೊಂದು ಮೈಲಿಗಲ್ಲಿಗಾಗಿ ಸಿದ್ಧವಾಗುತ್ತಿರುವುದೊಂದು ವಿಶೇಷ. ರಾಜ್ಯ ಪ್ರಶಸ್ತಿ ವಿಜೇತ ಭಾಸ್ಕರ್ ಕೊಗ್ಗ ಕಾಮತರ ನೇತೃತ್ವದಲ್ಲಿ ಅಕ್ಟೋಬರ್ 8 ರಂದು (ನಾಳೆ) ಹಾಂಗ್ ಕಾಂಗ್ ದೇಶದಲ್ಲಿ ಪ್ರದರ್ಶನ ನೀಡಲು ಸಜ್ಜಾಗಿದೆ. ಒಂದು ವಾರದ ಕಾಲ ಅಲ್ಲಿ ಪ್ರದರ್ಶನ ನೀಡಲಿರುವ ಈ ತಂಡವನ್ನು ಹಾಂಗ್ ಕಾಂಗ್ ಕನ್ನಡ ಸಂಘ ಆಮಂತ್ರಿಸಿ ಆದರಾತಿಥ್ಯ ನೀಡುತ್ತಿದೆ.

ಹಾಗೇ ನಾಡಿನ ಮುಂಚೂಣಿ ಐ.ಟಿ. ದಿಗ್ಗಜ ಇನ್ಫೋಸಿಸ್ ನ ಡಾ. ಸುಧಾಮೂರ್ತಿಯವರು ಈ ಪ್ರವಾಸದ ಸಹಪ್ರಾಯೋಜಕತ್ವ ವಹಿಸಿರುವುದೊಂದು ವಿಶೇಷ.

ಕೃಪೆ : kannadigaworld


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು




ಪೂರಕ ಲೇಖನಗಳು



ತಾಜಾ ಲೇಖನಗಳು
     
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ