ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಕಲೆಯಲ್ಲಿ ಬದುಕು ನೇಯ್ದ ಕೂಡ್ಲು ಆನಂದರು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಒಕ್ಟೋಬರ್ 8 , 2015

ತೆಂಕುತಿಟ್ಟು ಯಕ್ಷಗಾನದ ಗತವೈಭವದ ಆಡುಂಬೊಲವಾದ ಕೂಡ್ಲು ಮೇಳದ ಕಲಾವಿದ, ಗಡಿನಾಡು ಕಾಸರಗೋಡಿನ ಹಿರಿಯ ಯಕ್ಷಗಾನ ಕಲಾವಿದ ಕೂಡ್ಲು ಆನಂದರವರು ಹಂತ ಹಂತವಾಗಿ ಬೆಳೆದವರು. ಅವರ ಶರೀರ, ಶಾರೀರಗಳೆರಡನ್ನೂ ಗಮನಿಸಿ ಮೇಳದಲ್ಲಿ ಅವರಿಗೆ ಸ್ತ್ರೀವೇಷದ ಪೆಟ್ಟಿಗೆ ಖಾಯಂ ಆಯಿತು. ಆ ಕಾಲದ ಸುಂದರ ಸ್ತ್ರೀವೇಷದ ಮೂಲಕ ಆನಂದರು ಕಲಾಪ್ರೇಮಿಗಳನ್ನು ಆನಂದ ಪುಳಕಿತರನ್ನಾಗಿಸುತ್ತಿದ್ದರು. ಅವರಿಗೆ ಸೆ. 13ರಂದು ಮಧೂರಿನ ಪರಕ್ಕಿಲದಲ್ಲಿ ಗೌರವ ಸಮ್ಮಾನ ಸಲ್ಲುತ್ತಿದೆ.

1945ರಲ್ಲಿ ಕೂಡ್ಲು ರಾಮದಾಸನಗರದಲ್ಲಿ ಕುಞ್ಞಮ್ಮ - ಚಾತು ಚೆಟ್ಟಿಯಾರ್‌ ದಂಪತಿಯ ಪುತ್ರನಾಗಿ ಜನಿಸಿದ ಆನಂದರಿಗೆ ಈಗ 70ರ ಹರೆಯ. ಅವರ ಸಪ್ತತಿಯ ಸಂದರ್ಭದಲ್ಲಿ ಅರ್ಹವಾಗಿಯೇ ಅವರಿಗೆ ಸಮ್ಮಾನ.

ಹಂತ ಹಂತವಾಗಿ ಬೆಳೆದು, ವಿಜೃಂಭಿಸಿದ ಆನಂದರು

ಅದು ಸ್ವಾತಂತ್ರ ದೊರಕಿದ ಆರಂಭದ ದಿನಗಳು. ಆಗ ಕೂಡ್ಲು ಮೇಳ ಮೆರೆಯುವ ಕಾಲ. ಕುತ್ಯಾಳ ಕ್ಷೇತ್ರ ದಂಗಳದಲ್ಲಿ ಪ್ರಖ್ಯಾತ ಕಲಾವಿದರ ಮೇಳೈಕೆಯಲ್ಲಿ ಯಕ್ಷಗಾನ ವಿಜೃಂಭಿಸುತ್ತಿತ್ತು. ಇಂಥ ಪರಿಸರದಲ್ಲಿ ಹುಟ್ಟಿ ಬೆಳೆದ ಆನಂದರು ಬಾಲ್ಯದುದ್ದಕ್ಕೂ ಕಂಡದ್ದು ಯಕ್ಷಗಾನವೊಂದೇ...

ಹೀಗಾಗಿ ರಂಗಸ್ಥಳದ ಮಾಯೆ ಅವರನ್ನೂ ಆಕರ್ಷಿಸಿತು. ತೆಂಕುತಿಟ್ಟಿನ ಪ್ರಥಮ ನಾಟ್ಯಾಚಾರ್ಯ ಕಾವು ಕಣ್ಣನವರು ಕೂಡ್ಲಿನಲ್ಲಿ ನಾಟ್ಯ ತರಬೇತಿ ನೀಡುತ್ತಿದ್ದಾಗ ಆನಂದರೂ ಅಲ್ಲಿ ಹೆಜ್ಜೆ ಕಲಿತರು, ಕಣ್ಣನವರ ಶಿಷ್ಯನಾದರು. ಆದರೆ ಘಟಾನುಘಟಿ ಕಲಾವಿದರಿದ್ದ ಕೂಡ್ಲು ಮೇಳದಲ್ಲಿ ಜಾಗ ಇರಲಿಲ್ಲ. ತರುವಾಯು ಕೂಡ್ಲು ಸಣ್ಣ ಮೇಳದಲ್ಲಿ ಬಾಲ ಕಲಾವಿದರಾಗಿ ಸೇರಿಕೊಂಡರು.

ಹಂತ ಹಂತವಾಗಿ ಬೆಳೆದರು. ಅವರ ಶರೀರ, ಶಾರೀರಗಳೆರಡನ್ನೂ ಗಮನಿಸಿ ಮೇಳದಲ್ಲಿ ಅವರಿಗೆ ಸ್ತ್ರೀವೇಷದ ಪೆಟ್ಟಿಗೆ ಖಾಯಂ ಆಯಿತು. ಆ ಕಾಲದ ಸುಂದರ ಸ್ತ್ರೀವೇಷದ ಮೂಲಕ ಆನಂದರು ಕಲಾಪ್ರೇಮಿಗಳನ್ನು ಆನಂದ ಪುಳಕಿತರನ್ನಾಗಿಸುತ್ತಿದ್ದರು.
ಕೂಡ್ಲು ಆನಂದ
ಜನನ ಸ್ಥಳ : ರಾಮದಾಸನಗರ, ಕೂಡ್ಲು
ಕಾಸರಗೋಡು ಜಿಲ್ಲೆ
ಕೇರಳ ರಾಜ್ಯ

ಕಲಾಸೇವೆ:
ಕೂಡ್ಲು, ಮಲ್ಲ, ಉಪ್ಪಳ ಹಾಗೂ ವಿವಿಧ ಮೇಳಗಳಲ್ಲಿ ಕಲಾಸೇವೆ
ಕಾರಣಾಂತರದಿಂದ ಸಣ್ಣ ಮೇಳ ನಿಂತಾಗ ಆನಂದರು ಪ್ರಸಿದ್ಧವಾದ ಕೂಡ್ಲು ಮೇಳಕ್ಕೆ ಸೇರಿದರು. ಅದು ನಿಲ್ಲುವ ತನಕ ಕಲಾಸೇವೆಗೈದರು. ಆ ಬಳಿಕ ಮಲ್ಲ, ಉಪ್ಪಳ ಮೇಳ ಸಹಿತ ನಾಡಿನುದ್ದಗಲ ಹವ್ಯಾಸಿ, ಅತಿಥಿ ಕಲಾವಿದನಾಗಿ ರಂಗ ತುಂಬಿದ ಇವರು ಒಂದಷ್ಟು ಕಾಲ ಕೆಲವೆಡೆ ನಾಟ್ಯ ತರಬೇತಿ ನೀಡಿದ್ದೂ ಇದೆ. ಸ್ತ್ರೀವೇಷಕ್ಕೇ ಸೀಮಿತರಾಗದೆ ಅಗತ್ಯಕ್ಕೆತಕ್ಕಂತೆ ಪುಂಡುವೇಷ, ಕಿರೀಟ ವೇಷಗಳನ್ನೂ ಮಾಡಿರುವ ಆನಂದರು ಯಕ್ಷಗಾನದ ಮೂಲಕ ಪ್ರಚಾರ ಪಡೆದವರಲ್ಲ.

ಯಕ್ಷಗಾನ ಮತ್ತು ಕಲಾವಿದರಿಗೆ ತಾರಾ ವರ್ಚಸ್ಸಿನ ಪ್ರಚಾರ ಯುಗ ಬರುವ ಮೊದಲೇ ರಂಗದಿಂದ ನೇಪಥ್ಯಕ್ಕೆ ಸರಿದು, ನೇಪಥ್ಯ ಕಲಾವಿದನಾಗಿ ವಸ್ತ್ರಾಲಂಕಾರ - ವರ್ಣಾಲಂಕಾರ ಮಾಡುತ್ತಾ ರಂಗದಲ್ಲಿ ಕಾಣಿಸಿಕೊಂಡ ಆನಂದರಂತಹ ಅನೇಕ ಕಲಾವಿದರ ಕುರಿತು ಕಲಾಜಗತ್ತಿನಲ್ಲಿ ದಾಖಲೆ ಗಳಿಲ್ಲದಿರುವುದು, ಉಲ್ಲೇಖವಾಗದಿರುವುದು ಶೋಚ ನೀಯ. ಇದನ್ನು ಗುರುತಿಸಿಕೊಂಡು ಮಧೂರಿನ ಯಕ್ಷಮಿತ್ರರು ನೀಡುತ್ತಿರುವ ಸಮ್ಮಾನ ಆನಂದರ ಕಲಾ ಜೀವನಕ್ಕೊಂದು ಅಂಗೀಕಾರ.

ನಾಟಕ ಕಲಾವಿದ

ಆನಂದರು ಕೇವಲ ಒಬ್ಬ ಯಕ್ಷಗಾನ ಕಲಾವಿದರಷ್ಟೇ ಅಲ್ಲ. ಕೂಡ್ಲು ಪರಿಸರ ದಲ್ಲಿ ಒಂದು ಕಾಲದಲ್ಲಿ ಸಕ್ರಿಯವಾಗಿದ್ದ ಕೂಡ್ಲು ಯುವಕ ವೃಂದದ ಮೂಲಕ ತುಳು, ಕನ್ನಡದ ಸಾಮಾಜಿಕ - ಚಾರಿತ್ರಿಕ ನಾಟಕದಲ್ಲಿ ನಟಿಸಿ ಜನ ಪ್ರಿಯತೆ ಪಡೆದವರು. ತನ್ನ ರಂಗಾನುಭವವನ್ನು ಕಿರಿಯರಿಗೆ ಧಾರೆಯೆರೆದವರು.

ಮಲಯಾಳಿ ಮನೆಮಾತಿನ ಆನಂದರು

ಮೂಲತಃ ಮಲಯಾಳ ಮನೆಮಾತಿನ ಆನಂದರು ಈ ಕಲಾ ಪ್ರೀತಿ ಕೂಡ್ಲು ಪರಿಸರದಿಂದ‌ ಪ್ರೇರಿತಧಿವಾದು‌ದು. ಅವರ ಕುಲಕಸುಬು ನೇಯ್ಗೆ. ನೇಯ್ಗೆ ಗೊತ್ತಿಧಿದ್ದರೂ ಅದಕ್ಕಷ್ಟೇ ಸೀಮಿತವಾಗದೆ ಕಲೆಯಲ್ಲಿ ಬದುಕನ್ನು ನೇಯ್ದು, ಕೂಡ್ಲು ಮತ್ತು ಕಾಸರಗೋಡು ಪರಿಸರದ ಮೇಳಗಳನ್ನು ಬಿಟ್ಟು ಬೇರೆಲ್ಲಿಗೂ ಹೋಗದ ಕಲಾನಿಷ್ಠೆ ಅವರದ್ದು.

ಹೋಗಿರುತ್ತಿದ್ದರೆ ಅವಕಾಶಗಳು ಒಲಿದು ಪ್ರಸಿದ್ಧಿಯ ಉತ್ತುಂಗವೇರುತ್ತಿದ್ದರೋ ಏನೋ..? ಆದರೆ ಕೂಡ್ಲಿನ ಮಣ್ಣಿನಲ್ಲೇ ಕಲಾವಿದನಾಗಿ ಹುಟ್ಟಿ, ಕೂಡ್ಲಿನಲ್ಲೇ ಕಲಾಸೇವೆಗೈದು, ಕೂಡ್ಲಿಗೆ ಕೀರ್ತಿತಂದ ಕಲಾನಿಷ್ಠ ಕಲಾವಿದನನ್ನು ಮರೆಯದೇ ಸಪ್ತತಿಯ ಸಂದರ್ಭದಲ್ಲಿ ಮಧೂರಿನ ಹೊಸ ಪೀಳಿಗೆಯ ತರುಣ ಕಲಾಭಿಮಾನಿ ಸಂಘಟಕರು ಸಮ್ಮಾನಿಸುತ್ತಿರುವುದು ಈ ನೆಲದ ಸತ್ಪರಂಪರೆಯೊಂದು ಮುಂದುವರಿಯುತ್ತಿರುವ ಲಕ್ಷಣ.

6ನೇ ವರ್ಷದ ಯಕ್ಷೋತ್ಸವದಲ್ಲಿ "ಯಕ್ಷಮಿತ್ರರು ಮಧೂರು' ಇದರ ಸಾರಥ್ಯದಲ್ಲಿ ಪರಕ್ಕಿಲ ಶ್ರೀ ಮಹಾದೇವ ದೇವಸ್ಥಾನದಲ್ಲಿ ನಡೆಧಿಯುವ ಅದ್ದೂರಿಯ ಯಕ್ಷಗಾನ ಬಯಲಾಟ ವೇದಿಕೆಧಿಯಲ್ಲಿ ಗಣ್ಯರ ಸಮಕ್ಷಮ ಸೆಪ್ಟೆ೦ಬರ್ 13, 2015ರ೦ದು ಗೌರವದ ಸನ್ಮಾನ ಅರ್ಪಿಸಲಾಯಿತು.

****************
ಕೃಪೆ : udayavani


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ