ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಹೊನ್ನಾವರ : ಪ್ರೇಕ್ಷಕರ ಮನಸೂರೆಗೊಂಡ ಯಕ್ಷಗಾನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಸೆಪ್ಟೆ೦ಬರ್ 28 , 2015
ಸೆಪ್ಟೆ೦ಬರ್ 28, 2015

ಹೊನ್ನಾವರ : ಪ್ರೇಕ್ಷಕರ ಮನಸೂರೆಗೊಂಡ ಯಕ್ಷಗಾನ

ಹೊನ್ನಾವರ : ತಾಲೂಕಿನ ಗುಣವಂತೆಯ ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗನ ಮಂಡಳಿ ಕರೆಮನೆ ಶಿವರಾಮ ಹೆಗಡೆ ರಂಗಮಂದಿರದಲ್ಲಿ ನಡೆಸುತ್ತ ಬಂದಿರುವ ಮಾಸದ ಆಟದ ಈ ವರ್ಷದ ಪ್ರಥಮ ಯಕ್ಷಗಾನ ಪ್ರದರ್ಶನ ದಕ್ಷಯಜ್ಞ ಪ್ರೇಕ್ಷಕರ ಮನ ಸೂರೆಗೊಂಡಿತು.

ಮುರ್ಡೇಶ್ವರದ ವನಮಾಲಾ ಆರ್. ಹೆಗಡೆ, ಶಂಭು ಎನ್. ಹೆಗಡೆ ಮತ್ತು ಮಹಾಬಲೇಶ್ವರ ಪಿ. ಭಂಡಾರಿ ಪ್ರಾಯೋಜಕತ್ವವ ವಹಿಸಿದ್ದರು. ಸಾರ್ವಜನಿಕರಿಗೆ ಉಚಿತವಾಗಿ ಯಕ್ಷಗಾನ ನೋಡಲು ಅವಕಾಶ ಕಲ್ಪಿಸಲಾಗಿತ್ತು.

ಹಿಮ್ಮೇಳದಲ್ಲಿ ಭಾಗವತರಾಗಿ ದಂತಳಿಗೆ ಅನಂತ ಹೆಗಡೆ, ಮದ್ದಲೆವಾದಕರಾಗಿ ತಾರೇಸರದ ಪರಮೇಶ್ವರ ಹೆಗಡೆ, ಚಂಡೆವಾದಕರಾಗಿ ಶಿರಸಿಯ ಪ್ರಸನ್ನ ಭಟ್, ಮುಮ್ಮೇಳದ ಕಲಾವಿದರಾಗಿ ಶಿರಸಿಯ ಪ್ರೊ. ಎಂ. ಎ. ಹೆಗಡೆ, ಕೆರೆಮನೆ ಶಿವಾನಂದ ಹೆಗಡೆ, ಶಿರಳಗಿ ತಿಮ್ಮಪ್ಪ ಹೆಗಡೆ, ಹಂಸಳ್ಳಿಯ ಈಶ್ವರ ಭಟ್ಟ, ಬ್ರಹ್ಮೂರಿನ ರಾಘವ ಹೆಗಡೆ, ಚಂದಶೇಖರ ಎನ್. ವಿನಾಯಕ ನಾಯ್ಕ ಗುಂಡಿಬೆಲು, ಸ್ತ್ರೀ ಪಾತ್ರದಲ್ಲಿ ಯಲ್ಲಾಪುರದ ಸದಾಶಿವ ಭಟ್ಟ, ಮಹಾವೀರ ಜೆನ್ ಪಾತ್ರ ನಿರ್ವಹಿಸಿದರು.

ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಮಾಸದ ಆಟದ ಪ್ರಾಯೋಜಕರಿಗೆ ವೇದಿಕೆಯಲ್ಲಿ ಗೌರವ ಅರ್ಪಿಸಿದರು.

ಕೃಪೆ : vijaykarnataka


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ