ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಅದ್ಭುತ ಪ್ರದರ್ಶನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಸೆಪ್ಟೆ೦ಬರ್ 19 , 2015
ಸೆಪ್ಟೆ೦ಬರ್ 19, 2015

ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಅದ್ಭುತ ಪ್ರದರ್ಶನ

ಕಾಸರಗೋಡು : ಕೇಂದ್ರ ಸಂಗೀತ ನಾಟಕ ಅಕಾಡೆಮಿ ಆಶ್ರಯದಲ್ಲಿ ಹೊಸದಿಲ್ಲಿಯಲ್ಲಿ ನಡೆದ 7ನೇ ರಾಷ್ಟ್ರೀಯ ಬೊಂಬೆಯಾಟ ಉತ್ಸವ "ಪುತುಲ್‌ ಯಾತ್ರಾ'ದಲ್ಲಿ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆ ಯಾಟ ಸಂಘದ "ನರಕಾಸುರ ವಧೆ' ಯಕ್ಷಗಾನ ಬೊಂಬೆಯಾಟ ಯಶಸ್ವಿ ಯಾಗಿ ಪ್ರದರ್ಶನಗೊಂಡಿತು. ದಿಲ್ಲಿಯ ರವೀಂದ್ರ ಭವನದ ಮೇಘದೂತ್‌ ಥಿಯೇಟರ್‌ನಲ್ಲಿ ಸೆ. 10ರಿಂದ 14ರ ವರೆಗೆ ರಾಷ್ಟ್ರೀಯ ಬೊಂಬೆಯಾಟ ಉತ್ಸವ ಜರ ಗಿದ್ದು, ಭಾರತದ ವಿವಿಧ ರಾಜ್ಯಗಳಿಂದ ಆಯ್ದ ತಂಡಗಳು ಭಾಗವಹಿಸಿ ಪ್ರದರ್ಶನ ನೀಡಿದವು.

ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆ ಯಾಟ ಸಂಘದ ನಿರ್ದೇಶಕ ಹಾಗೂ ಪ್ರಧಾನ ಸೂತ್ರಧಾರಿ ಕೆ.ವಿ. ರಮೇಶ್‌ ಅವರ ನೇತೃತ್ವದಲ್ಲಿ ನಡೆದ ಬೊಂಬೆಯಾಟ ಪ್ರದರ್ಶನದಲ್ಲಿ ಸೂತ್ರಧಾರಿಗಳಾದ ಡಾ| ಓಂಪ್ರಕಾಶ್‌ ಕೆ.ವಿ., ಸುದರ್ಶನ ಕೆ.ವಿ., ಕುಮಾರ ಸ್ವಾಮಿ, ಚಂದ್ರಶೇಖರ ವಿ., ಜಗದೀಶ್‌ ಕೂಡ್ಲು, ಮನೋರಮಾ ಕಲ್ಲುಗದ್ದೆ ಭಾಗವಹಿಸಿದರು. ಅಂತಾರಾಷ್ಟ್ರೀಯ ಬೊಂಬೆಯಾಟ ಕಲಾವಿದ ದಾದಿ ಪದಂಜಿ ಅವರು ಕಲಾವಿದರನ್ನು ಪರಿಚಯಿಸಿದರು. ರಾಷ್ಟ್ರೀಯ ಬೊಂಬೆಯಾಟ ಉತ್ಸವದ ಸಂಯೋಜಕಿ ಶುಭಾ ಸಕ್ಸೇನಾ ಅವರು ಕಾರ್ಯಕ್ರಮ ನಿರೂಪಿಸಿದರು.

ರಾಷ್ಟ್ರೀಯ ಬೊಂಬೆಯಾಟ ಉತ್ಸವವನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಗೌರವ ಸದಸ್ಯ ಪದ್ಮವಿಭೂಷಣ ಡಾ| ಕಪಿಲ ವಾತ್ಸಾéಯನ ಉದ್ಘಾಟಿಸಿದರು. ಅಕಾಡೆಮಿಯ ಕಾರ್ಯದರ್ಶಿ ಹೆಲೆನ್‌ ಆಚಾರ್ಯ ಕಲಾವಿದರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಿದರು.

ರಾಜಧಾನಿಯನ್ನು ನಡುಗಿಸಿದ ನರಕಾಸುರ ರಾಷ್ಟ್ರೀಯ ಬೊಂಬೆಯಾಟ ಉತ್ಸವದಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆ ಯಾಟ ಸಂಘ ಪ್ರದರ್ಶಿಸಿದ "ನರಕಾಸುರ ವಧೆ' ಬೊಂಬೆಯಾಟವು ಯಶಸ್ವಿಯಾಗಿ ಪ್ರದರ್ಶನಗೊಂಡು, ಕಲಾಭಿಮಾನಿಗಳ, ವ್ಯವಸ್ಥಾಪಕರ ಮೆಚ್ಚುಗೆಗೆ ಪಾತ್ರವಾಯಿತು. ರಾಷ್ಟ್ರೀಯ ಬೊಂಬೆಯಾಟ ಉತ್ಸವದಲ್ಲಿ ತೆರೆ ಮೇಲೆತ್ತುವಾಗಲೇ ಪ್ರೇಕ್ಷಕ ಸಮೂಹ ಕರತಾಡನ ಸೂತ್ರಧಾರರಲ್ಲಿ ನವಚೈತನ್ಯ ಮೂಡಿಸಿತು. ಪ್ರದರ್ಶನ ಮಧ್ಯೆ ಮಧ್ಯೆ ಪ್ರೇಕ್ಷಕರು ಪ್ರದರ್ಶನಕ್ಕೆ ಪೂರಕವಾಗಿ ಸ್ಪಂದಿಸಿ ಉತ್ಸವದಲ್ಲಿ ಉತ್ಸಾಹದ ವಾತಾವರಣವನ್ನು ಸೃಷ್ಟಿಸಿದರು. ಕಲಾವಿದರನ್ನು ಸಂಘ ಟಕರು ಸಮ್ಮಾನಿಸಿದ ಬಳಿಕ ದೇಶ ವಿದೇಶಗಳ ಪತ್ರಕರ್ತರು, ಕಲಾಭಿ ಮಾನಿಗಳು, ವಿವಿಧ ರಾಜ್ಯಗಳ ಬೊಂಬೆಯಾಟ ತಂಡದವರು ಯಕ್ಷ ಗಾನ ಬೊಂಬೆಗಳನ್ನು ವೀಕ್ಷಿಸಲು ಮತ್ತು ಸೂತ್ರಧಾರರ ಪ್ರತಿಭೆಯನ್ನು ಅರ್ಥೈಸಲು ಮುಗಿಬಿದ್ದರು. ಪರಂಪ ರಾಗತ ಬೊಂಬೆಯಾಟ ಕಲೆಯನ್ನು ಉಳಿಸುವ ಕುರಿತಾದ ಯೋಜನೆಗಳ ಬಗ್ಗೆ ತಿಳಿದುಕೊಂಡರು.

ಹೊಸದಿಲ್ಲಿಯ ಎಲ್ಲ ಮಾಧ್ಯಮ ಗಳಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಪ್ರದರ್ಶನದ ಚಿತ್ರ ವರದಿ ಪ್ರಕಟವಾಗಿದೆ. ದೇಶ ವಿದೇಶಗಳಲ್ಲಿ 3 ಸಾವಿರಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದ ಕೆ.ವಿ. ರಮೇಶ್‌ ನೇತೃತ್ವದ ತಂಡ 5ನೇ ಬಾರಿ ರಾಷ್ಟ್ರೀಯ ಬೊಂಬೆಯಾಟ ಉತ್ಸವಗಳಲ್ಲಿ ಭಾಗವಹಿಸುತ್ತಿರು ವುದು ಕಾಸರಗೋಡಿಗೆ ಅಭಿಮಾನದ ವಿಷಯವಾಗಿದೆ.

ಕೃಪೆ : udayavani

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ