ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನ ಮುಖವರ್ಣಿಕಾ ತರಬೇತಿ ಶಿಬಿರ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಸೆಪ್ಟೆ೦ಬರ್ 19 , 2015
ಸೆಪ್ಟೆ೦ಬರ್ 19, 2015

ಯಕ್ಷಗಾನ ಮುಖವರ್ಣಿಕಾ ತರಬೇತಿ ಶಿಬಿರ

ಮುಳಿಯಾರು : ಯಕ್ಷತೂಣೀರ ಸಂಪ್ರತಿಷ್ಥಾನ ( ರಿ ) ಕೋಟೂರು ಇವರ ವತಿಯಿಂದ ಮತ್ತು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಹಯೋಗದಲ್ಲಿ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ಸಭಾಭವನದಲ್ಲಿ 19.09.2015 ಶನಿವಾರದಂದು ಯಕ್ಷಗಾನ ಮುಖವರ್ಣಿಕಾ ತರಬೇತಿ ಶಿಬಿರ ಕಾರ್ಯಕ್ರಮವು ಸಂಪನ್ನಗೊಂಡಿತು. ಪೂರ್ವಾಹ್ನ ಗಂಟೆ 9 ರಿಂದ ಶಿಬಿರಾರ್ಥಿಗಳ ನೋಂದಾವಣೆಯೊಂದಿಗೆ ಶಿಬಿರವು ಆರಂಭವಾಯಿತು.

ಶ್ರೀ ಸತೀಶ ಪುಣಿಂಚಿತ್ತಾಯ ಅವರು ಯಕ್ಷಗಾನ ಪ್ರಾರ್ಥನೆಯನ್ನು ಹಾಡಿದರು . ಶ್ರೀ ರಾಘವೇಂದ್ರ ಉಡುಪುಮೂಲೆ ಅವರು ಮುಖವರ್ಣಿಕೆ ಬರೆಯುತ್ತಾ ಸಮಾರಂಭವನ್ನು ಉದ್ಘಾಟನೆ ಮಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ( ರಿ ) ಪೆರ್ಲ ಇದರ ದಿಗ್ದರ್ಶಕರೂ ಯಕ್ಷಗಾನ ನಾಟ್ಯ ಗುರುಗಳೂ ಆಗಿರುವ ಶ್ರೀ ಸಬ್ಬಣಕೋಡಿ ರಾಮ್ ಭಟ್ ಮತ್ತು ಶ್ರೀ ಮಾಧವ ನೀರ್ಚಾಲು ಅವರು ಸಮಪನ್ಮೂಲ ವ್ಯಕ್ತಿಗಳಾಗಿ ಮುಖವರ್ಣಿಕೆ ಬರೆಯುವ ಶಾಸ್ತೀಯ ವಿಧಾನವನ್ನು ಪ್ರಸ್ತುತಪಡಿಸಿದರು ಮತ್ತು ಶಿಬಿರಾರ್ಥಿಗಳು ಸ್ವಯಂ ಮುಖವರ್ಣಿಕೆಯನ್ನು ಬರೆದುಕೊಳ್ಳಲು ತರಬೇತಿ ನೀಡಿದರು.

ಶ್ರೀ ಪೆರಡಂಜಿ ಗೋಪಾಲಕೃಷ್ಣ ಭಟ್ ಪ್ರಾಸ್ಥಾವಿಕ ಭಾಷಣಮಾಡಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ಮೇನೇಜರ್ ಶ್ರೀ ಸೀತಾರಾಮ ಬಳ್ಳುಳ್ಳಾಯ ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರವನ್ನಿತ್ತು ಶುಭಹಾರೈಸಿದರು. ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕರಾದ ಯಂ. ನ. ಚಂಬಲ್ತಿಮಾರ್ ಅವರು ಸಲಹೆ ಸೂಚನೆಗಳನ್ನಿತ್ತು ಸಹಕರಿಸಿದರು. ಶ್ರೀ ಗೋವಿಂದ ಬಳ್ಳಮೂಲೆ ಅವರು ಪ್ರತಿಷ್ಠಾನದ ವಿವಿಧ ಕಾರ್ಯ ಯೋಜನೆಗಳ ಕುರಿತು ಮಾಹಿತಿಗಳನ್ನಿತ್ತರು. ಶ್ರೀ ಕೃಷ್ಣ ಭಟ್ ಅಡ್ಕ ಧನ್ಯವಾದವಿತ್ತರು.

ಅನುಪಮಾ ರಾಘವೇಂದ್ರ ಉಡುಪುಮೂಲೆ, ರಾಜೇಶ್ವರಿ, ಮುರಳಿಕೃಷ್ಣ ಸ್ಕಂದ, ಸುಬ್ರಹ್ಮಣ್ಯ ಭಟ್ ಅಡ್ಕ, ಈಶ್ವರ ಭಟ್ ಬಳ್ಳಮೂಲೆ, ಡಾ // ಶಿವಕುಮಾರ್ ಅಡ್ಕ, ಉಪಸ್ಥಿತರಿದ್ದರು. ಶಿಬಿರಾರ್ಥಿಗಳ ಸಕ್ರಿಯ ಭಾಗವಹಿಸುವೆಕೆಯಿಂದ ಶಿಬಿರವು ಸಂಪನ್ನವಾಯಿತು.

ಕೃಪೆ : facebook

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ