ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಬಡಗುತಿಟ್ಟಿನ ಗೀತ ನೃತ್ಯಾನುಸಂಧಾನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಆಗಸ್ಟ್ 31 , 2015
ಆಗಸ್ಟ್ 31, 2015

ಬಡಗುತಿಟ್ಟಿನ ಗೀತ ನೃತ್ಯಾನುಸಂಧಾನ

ಶಿರಸಿ : ಬಡಗು ತಿಟ್ಟಿನ ಭಾಗವತಿಕೆಯಲ್ಲಿ ಕ್ಲಿಷ್ಟವಾದ ಮಟ್ಟುಗಳ, ಈಗಾಗಲೇ ಭಾಗವತಿಕೆಯಲ್ಲಿರುವ ತೊಡಕು ಹಾಗೂ ಸಂಭಾವ್ಯ ಸಮಸ್ಯೆಗಳ ಕುರಿತು ಸಮಾಲೋಚನೆ, ಅಭ್ಯಾಸ ವರ್ಗ ಗೀತ ನೃತ್ಯಾನುಸಂಧಾನ ಸೆ.12ರಿಂದ ಮೂರು ದಿನಗಳ ಕಾಲ ಸ್ವರ್ಣವಲ್ಲೀಯಲ್ಲಿ ನಡೆಯಲಿದೆ.

ಈ ಕುರಿತು ನಗರದ ಯೋಗ ಮಂದಿರದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ಕಾರ್ಯಾಗಾರದ ಮುಖ್ಯಸ್ಥ ಎಂ.ಎ. ಹೆಗಡೆ ದಂಟಕಲ್‌, ಯಕ್ಷಗಾನ ಕ್ಷೇತ್ರದ ಪರಿಣಿತರು ಪಾಲ್ಗೊಳ್ಳಲಿರುವ ಕಾರ್ಯಾಗಾರದಲ್ಲಿ ಯಕ್ಷ ದೃಶ್ಯ ವೈಭವ, ಸನ್ಮಾನ ಕೂಡ ನಡೆಯಲಿದೆ ಎಂದರು.

ಸೆ.12ರಂದು ಮಧ್ಯಾಹ್ನ 3ಕ್ಕೆ ಯಕ್ಷನೃತ್ಯ ವೈಭವದ ಮೂಲಕ ಚಾಲನೆ ಪಡೆದುಕೊಳ್ಳಲಿದೆ. ಉದಯ ಕಡಬಾಳ, ಸುಬ್ರಹ್ಮಣ್ಯ ಯಲಗುಪ್ಪ, ಭಾಸ್ಕರ ಗಾಂವಕರ, ತಮ್ಮಣ್ಣ ಗಾಂವಕರ್‌ ನಡೆಸಿಕೊಡಲಿದ್ದಾರೆ. 4ಕ್ಕೆ ಸ್ವರ್ಣವಲ್ಲೀ ಗಂಗಾಧ ರೇಂದ್ರ ಸರಸ್ವ‌ತೀ ಶ್ರೀಗಳ ಸಾನ್ನಿಧ್ಯದಲ್ಲಿ ಉದ್ಘಾಟನೆ ನಡೆಯಲಿದ್ದು, ವಿಪ ಸದಸ್ಯ ಗಣೇಶ ಕಾರ್ಣಿಕ್‌, ಕರ್ನಾಟಕ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಶ್ರೀನಿವಾಸ ದೇಶಪಾಂಡೆ, ಭರತನಾಟ್ಯ ಕಲಾವಿದ ಅಶ್ವತ್‌ ಹರಿತಾಸ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಲಕ್ಷ್ಮೀನಾರಾಯಣ ಭಾಗವತ್‌ ಕಡತೋಕಾ ಹಾಗೂ ಶಂಕರ ಭಾಗವತ ಶಿಸ್ತಮುಡಿ ಅವರನ್ನು ಗೌರವಿಸಲಾಗುತ್ತಿದೆ. ಬಳಿಕ ಮತ್ತೆ ಯಕ್ಷ ದೃಶ್ಯ ವೈಭವ ನಡೆಯಲಿದ್ದು, ಹಿಮ್ಮೇಳದಲ್ಲಿ ಗಣಪತಿ ಭಟ್ಟ, ಕೇಶವ ಹೆಗಡೆ ಕೊಳಗಿ, ರಾಮಕೃಷ್ಣ ಹೆಗಡೆ ಹಿಲ್ಲೂರು, ಗಣಪತಿ ಭಾಗವತ್‌ ಕವ್ವಾಳೆ, ವಿಘ್ನೇಶ್ವರ ಕೆಸರಕೊಪ್ಪ ಹಾಗೂ ಮುಮ್ಮೇಳದಲ್ಲಿ ಶಶಿಕಾಂತ ಶೆಟ್ಟಿ, ಪ್ರಸನ್ನ ಶೆಟ್ಟಿಗಾರ, ಗಣಪತಿ ಮುದ್ದಿನಪಾಲು, ವೆಂಕಟ್ರಮಣ ಭಟ್ಟ ಹೀರೇಸರ ಸಹಕಾರ ನೀಡಲಿದ್ದಾರೆ.

13ರ ಸಂಜೆ 4:30ಕ್ಕೆ ಅಬ್ಬರ ಬಿಡ್ತಗೆ ಪ್ರದರ್ಶನವನ್ನು ಕವ್ವಾಳೆ ಗಣಪತಿ ಭಾಗವತ್‌ ನಡೆಸಲಿಕೊಡಲಿದ್ದು, 5ರಿಂದ ದಕ್ಷಯಜ್ಞ ತಾಳಮದ್ದಲೆ ನಡೆಯಲಿದೆ. ಸುಬ್ರಹ್ಮಣ್ಯ ಧಾರೇಶ್ವರ, ಕೆ.ಪಿ. ಹೆಗಡೆ, ನರಸಿಂಹ ಹೆಗಡೆ, ಎಂ.ಎ. ಹೆಗಡೆ, ಉಮಾಕಾಂತ ಭಟ್ಟ, ಶಶಿಕಾಂತ ಶೆಟ್ಟಿ, ಎಂ.ಎನ್‌.ಹೆಗಡೆ ಪಾಲ್ಗೊಳ್ಳಲಿದ್ದಾರೆ.

14ರ ಸಂಜೆ 3:30ಕ್ಕೆ ಯಕ್ಷ ಗಾನ ವೈವಿಧ್ಯ ನಡೆಯಲಿದ್ದು, ಸುಬ್ರಹ್ಮಣ್ಯ ಭಾಗವತ್‌, ಸುಬ್ರಾಯ ಭಾಗವತ್‌, ಗಣಪತಿ ಭಟ್ಟ ಮೊಟ್ಟೆಗದ್ದೆ, ಕೇಶವ ಹೆಗಡೆ, ರಾಮಕೃಷ್ಣ ಹಿಲ್ಲೂರು, ಕೆ.ಪಿ. ಹೆಗಡೆ, ತಿಮ್ಮಪ್ಪ ಭಾಗವತ್‌, ಸತೀಶ ಹೆಗಡೆ ದಂಟಕಲ್‌, ಸತೀಶ ಉಪಾಧ್ಯಾಯ, ನೆಬ್ಬೂರು ನಾರಾಯಣ ಭಾಗವತ್‌, ಅನಂತ ಹೆಗಡೆ ದಂತಳಿಕೆ, ಶಂಕರ ಭಾಗವತ್‌, ಗಣಪತಿ ಕವ್ವಾಳೆ, ನರಸಿಂಹ ಭಟ್ಟ ಪಾಲ್ಗೊಳ್ಳುವರು. ಸಮಾರೋಪ ಸಮಾರಂಭ 4:30ರಿಂದ ನಡೆಯಲಿದ್ದು, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿ.ಎಸ್‌. ಭಟ್ಟ ಮೈಸೂರು, ವಸಂತ ಭಾರಧ್ವಜ, ಹೊಸ್ತೋಟ ಮಂಜುನಾಥ ಭಾಗವತ್‌ ಪಾಲ್ಗೊಳ್ಳುವರು.

ಸುಬ್ರಹ್ಮಣ್ಯ ಧಾರೇಶ್ವರ ಅವರನ್ನು ಗೌರವಿಸಲಾಗುತ್ತಿದೆ. ಬಳಿಕ ಲವಕುಶ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಗೋಡೆ ನಾರಾಯಣ ಹೆಗಡೆ, ವಿನಾಯಕ ಕಲಗದ್ದೆ, ರಾಜೇಶ ಭಂಡಾರಿ, ಶ್ರೀಧರ ಹೆಗಡೆ ಚಪ್ಪರಮನೆ, ಗಣಪತಿ ಮುದ್ದಿನಪಾಲು, ಸಂತೋಷ ಕಡಕಿನಬೈಲು, ವೆಂಕಟ್ರಮಣ ಹೆಗಡೆ ಪಾಲ್ಗೊಳ್ಳುವರು ಎಂದು ತಿಳಿಸಿದರು.


ಕೃಪೆ : udayavani.com

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ