ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಅಕಾಡೆಮಿಯಿಂದ ಯಕ್ಷಗಾನ-ಬಯಲಾಟ ರಂಗ ಸಂಭ್ರಮ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಜನವರಿ 2 , 2015
ಜನವರಿ 2, 2015

ಅಕಾಡೆಮಿಯಿಂದ ಯಕ್ಷಗಾನ-ಬಯಲಾಟ ರಂಗ ಸಂಭ್ರಮ

ಶಿರಸಿ : ಯಕ್ಷಗಾನ ಕಲಾ ವಿಶೇಷತೆಗಳ ವಿಸ್ತಾರ ಮತ್ತು ಪ್ರಗತಿಗೆ ಸಂಬಂಧಿಸಿದ ಕಮ್ಮಟ, ಕಲಾ ಪ್ರದರ್ಶನಗಳನ್ನು ಒಳಗೊಂಡ ಯಕ್ಷಗಾನ-ಬಯಲಾಟ ರಂಗ ಸಂಭ್ರಮ ಕಾರ್ಯಕ್ರಮವನ್ನು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ನಗರದಲ್ಲಿ ಜ.9ರಿಂದ 11ರವರೆಗೆ ಹಮ್ಮಿಕೊಂಡಿದೆ.

ಅಕಾಡೆಮಿ ಸದಸ್ಯರಾದ ಪ್ರೊ.ವಿಜಯನಳಿನಿ ರಮೇಶ ಮತ್ತು ಹಿರಿಯ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಬುಧವಾರ ಇಲ್ಲಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂಥ ಕಾರ್ಯಕ್ರಮಗಳನ್ನು ಕಲಾ ಉತ್ಸವದ ರೀತಿಯಲ್ಲಿ ಯಕ್ಷಗಾನ ಬಯಲಾಟ ಅಕಾಡೆಮಿ ಹಮ್ಮಿಕೊಳ್ಳುತ್ತಿದೆ. ಕೆಲವು ಕಡೆ ಎರಡು ಜಿಲ್ಲೆಗಳಲ್ಲಿ ಒಂದರಂತೆ ಕಾರ್ಯಕ್ರಮ ಏರ್ಪಡಿಸುತ್ತಿದ್ದು ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಮೂರು ದಿನಗಳ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ಸಣ್ಣಾಟ, ಬಯಲಾಟ, ಮಹಿಳಾ ಯಕ್ಷಗಾನ ಸೇರಿ ಒಟ್ಟೂ ಐದು ಕಲಾ ಪ್ರದರ್ಶನಗಳು ಇರುತ್ತವೆ ಎಂದರು.

ವಿಶೇಷತೆಗಳ ಗೋಷ್ಠಿ

ಜ.9ರಂದು ಯುವ-ಮಹಿಳಾ ಯಕ್ಷ ಕಲಾವಿದರಲ್ಲಿ ಪಾತ್ರ-ಶ್ರುತಿಗೆ ತಕ್ಕ ಧ್ವನಿ-ಸಂಭಾಷಣೆ ಕುರಿತು ಕಮ್ಮಟವನ್ನು ಏರ್ಪಡಿಸಲಾಗಿದೆ. ಜ.10ರಂದು ಯಕ್ಷಗಾನ-ಬಯಲಾಟ ರಂಗ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಹೊಸ್ತೋಟ ಮಂಜುನಾಥ ಭಾಗವತ ಮತ್ತು ಜಿ.ಎಸ್.ಭಟ್ಟ ಮೈಸೂರು, ಅಕಾಡೆಮಿ ಅಧ್ಯಕ್ಷ ಬೆಳಗಲ್ಲು ವೀರಣ್ಣ, ಸದಸ್ಯ ಪಿ.ಕಿಶನ್ ಹೆಗ್ಡೆ ಪಾಲ್ಗೊಳ್ಳಲಿದ್ದು ಶಾಸಕ ವಿಶ್ವೇಶ್ವರ ಹೆಗಡೆ ಉದ್ಘಾಟಿಸುವರು.

ಮೊದಲ ಗೋಷ್ಠಿಯನ್ನು ಉತ್ತರ ಕನ್ನಡದ ಯಕ್ಷಗಾನ ವಿಶೇಷತೆಗಳು ವಿಷಯವಾಗಿ ಏರ್ಪಡಿಸಿದ್ದು ಪ್ರೊ.ಎಂ.ಎ.ಹೆಗಡೆ, ಕಾಶ್ಯಪ ಪರ್ಣಕುಟಿ, ಶ್ರೀಪಾದ ಭಟ್ಟ ಮತ್ತು ಕಡತೋಕಾ ಗೋಪಾಲಕಷ್ಣ ಭಾಗವತ ಪಾಲ್ಗೊಳ್ಳುವರು. ಉತ್ತರ ಕರ್ನಾಟಕದ ಬಯಲಾಟಗಳ ಕುರಿತು ಶ್ರೀಶೈಲ ಹುದ್ದಾರ ವಿಷಯ ಮಂಡಿಸುವರು. ಶ್ರೀಕಷ್ಣ ಪಾರಿಜಾತ, ಸಣ್ಣಾಟ ಮತ್ತು ಮಹಿಳಾ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಪ್ರೊ.ವಿಜಯನಳಿನಿ ರಮೇಶ ತಿಳಿಸಿದರು.

ಸಾಧ್ಯತೆ-ಸವಾಲುಗಳು

ಜ.11ರಂದು ಮಹಿಳಾ ಯಕ್ಷಗಾನದ ಸಾಧ್ಯತೆ ಮತ್ತು ಸವಾಲುಗಳು ವಿಷಯದ ಗೋಷ್ಠಿ ಏರ್ಪಡಿಸಿದ್ದು ಕಲಾವಿದರಾದ ಪ್ರೊ.ಗೋಪಾಲಕೃಷ್ಣ ಹೆಗಡೆ ಕುಮಟಾ, ವಿ.ದತ್ತಮೂರ್ತಿ ಭಟ್ಟ ಶಿವಮೊಗ್ಗ, ದಿವಾಕರ ಹೆಗಡೆ ಕೆರೆಹೊಂಡ ಮತ್ತು ಪ್ರಜ್ಞಾ ಮತ್ತಿಹಳ್ಳಿ ವಿಷಯ ಮಂಡನೆ-ಸಂವಾದಕರಾಗಿ ಪಾಲ್ಗೊಳ್ಳುವರು. ಅಂದು ದೊಡ್ಡಾಟ, ಮತ್ತು ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸಮಾರೋಪ ಸಮಾರಂಭದಲ್ಲಿ ಮುಂಬಯಿಯ ಯಕ್ಷಗಾನ ಪೋಷಕ ಎಚ್.ಬಿ.ಎಲ್.ರಾವ್, ಟಿಎಸ್‌ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೆಹಳ್ಳಿ, ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಶಾಸಕ ಶಿವರಾಮ ಹೆಬ್ಬಾರ, ಅಕಾಡೆಮಿ ಸದಸ್ಯ ರಾಮಚಂದ್ರ ಕೊಂಡದಕುಳಿ ಮುಂತಾದವರು ಪಾಲ್ಗೊಳ್ಳುವರು ಎಂದು ವಿವರಿಸಿದರು.

ಮೊದಲ ದಿನದ ಕಮ್ಮಟ ಮತ್ತು ಮತ್ತೆರಡು ದಿನದ ಗೋಷ್ಠಿಗಳಲ್ಲಿ ಪಾಲ್ಗೊಳ್ಳುವಂತೆ ಜಿಲ್ಲೆಯ ವಿವಿಧೆಡೆಯ ಯಕ್ಷಗಾನ ತರಬೇತಿ ಶಾಲೆ-ಕೇಂದ್ರಗಳು, ನಾನಾ ಯಕ್ಷ ಕಲಾ ಸಂಘಟನೆಗಳವರನ್ನು ಸಂಪರ್ಕಿಸಿ ಆಹ್ವಾನಿಸುತ್ತಿದ್ದೇವೆ ಎಂದು ಪ್ರೊ.ವಿಜಯನಳಿನಿ ತಿಳಿಸಿದರು. ಯಕ್ಷಗಾನ ಕಲಾವಿದರಾದ ಸುಬ್ರಾಯ ಹೆಗಡೆ ಕೆರೆಕೊಪ್ಪ ಮತ್ತು ನಾಗರಾಜ ಜೋಶಿ ಸೋಂದಾ ಉಪಸ್ಥಿತರಿದ್ದರು.ಕೃಪೆ : http://vijaykarnataka.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ