ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಒಂಟಿ ಕಾಲಲ್ಲಿ ಯಕ್ಷಗಾನ ಕುಣಿತ, ವಿಶೇಷ ಪ್ರತಿಭೆ ಅಗಣಿತ!

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಜನವರಿ 1 , 2015
ಜನವರಿ 1, 2015

ಒಂಟಿ ಕಾಲಲ್ಲಿ ಯಕ್ಷಗಾನ ಕುಣಿತ, ವಿಶೇಷ ಪ್ರತಿಭೆ ಅಗಣಿತ!

ಉಡುಪಿ : ನೀಲ ಗಗನದೊಳು ಮೇಘಗಳ ಕಂಡು, ನವಿಲು ಕುಣಿಯುತಿದೆ ನೋಡೆ...ಸಖಿ ನೋಡೇ...ಚಂಡೆ, ಮದ್ದಳೆಯ ನಾದದ ನಡುವೆ ಭಾಗವತರ ಕಂಠದಿಂದ ಹಾಡು ಮೊಳಗುತ್ತಿದ್ದಂತೆ ಈ ವಿಶೇಷ ವ್ಯಕ್ತಿ ತಮ್ಮ ಅಂಗ ವೈಕಲ್ಯವನ್ನೂ ಲೆಕ್ಕಿಸದೆ ಒಂಟಿ ಕಾಲಲ್ಲೇ ಕುಣಿದು ತಮ್ಮ ಪ್ರತಿಭೆ ತೋರಿದರು.

ಕಲ್ಸಂಕದ ರಾಯಲ್ ಗಾರ್ಡನ್‌ನಲ್ಲಿ ಉಡುಪಿ ಉತ್ಸವದಂಗವಾಗಿ ಕರ್ನಾಟಕ ರಾಜ್ಯ ವಿಕಲ ಚೇತನರ ಮಹಾಸಂಘಗಳ ಒಕ್ಕೂಟದ ವತಿಯಿಂದ ಕೆ. ಜಗದೀಶ್ ಭಟ್ ಅಂಬಲಪಾಡಿ ಮತ್ತು ಬಳಗದಿಂದ ಇತ್ತೀಚೆಗೆ 10 ನಿಮಿಷಗಳ ವನ ವಿಹಾರ ಯಕ್ಷಗಾನ ರೂಪಕ ಪ್ರದರ್ಶಿಸಲಾಯಿತು.

ಜಗದೀಶ್ ಭಟ್ ಅವರು ಮುಖತೋ ಪೂರ್ಣಚಂದ್ರಶ್ರೀ, ನೇತ್ರ ಪದ್ಮದಳಾಕೃತಿ ಹಾಡಿಗೂ ನರ್ತಿಸಿದರು. ಚಂದ್ರಕಾಂತ್ ಭಟ್(ಭಾಗವತಿಕೆ), ಶಶಿಕಾಂತ್ (ಮದ್ದಳೆ), ಸತೀಶ್ ಉಪಾಧ್ಯಾಯ (ಚಂಡೆ) ಸಹಕರಿಸಿದರು. ಅಷ್ಟಮಿ ಸಂದರ್ಭ ಹುಲಿ ವೇಷ ವನ್ನೂ ಹಾಕಿ ಕುಣಿದಿದ್ದ ಕೆ. ಜಗದದೀಶ್ ಭಟ್ , 15 ದಿನಗಳ ಕಾಲ ಸತೀಶ್ ಉಪಾಧ್ಯಾಯ ಅಂಬಲಪಾಡಿ ಅವರಿಂದ ಕುಣಿತ ಕಲಿತಿದ್ದರು.

ಕುಂದಾಪುರದ ವಾಗ್ಜ್ಯೋತಿ ಕಿವುಡ ಮತ್ತು ಮೂಗ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಈ ಹಿಂದೆ ಜಟಾಯು ಮೋಕ್ಷ ಯಕ್ಷಗಾನ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದರೆ, ಉಡುಪಿ ಮಾತ್ರವಲ್ಲ ರಾಜ್ಯದಲ್ಲೇ ಮೊದಲ ಬಾರಿಗೆ ವಿಕಲಚೇತನ ಕೆ. ಜಗದೀಶ್ ಭಟ್ ಯಕ್ಷಗಾನ ಪ್ರದರ್ಶಿಸಿದ್ದಾರೆ.ಕೃಪೆ : http://vijaykarnataka.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
pradeep b(1/11/2015)
well done jagadish bhat.really this is great news.. god bless you.
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ