ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಲಾರಿಯಲ್ಲಿ ಮೇಳವಿಸಿದೆ ಯಕ್ಷಗಾನದ ಮೊಬೈಲ್ ಚೌಕಿ

ಲೇಖಕರು :
ಜಾನ್‌ ಡಿಸೋಜ, ಕುಂದಾಪುರ
ಬುಧವಾರ, ಡಿಸೆ೦ಬರ್ 31 , 2014

ಅತ್ತ ತೀರ್ಥಹಳ್ಳಿಯ ಗುತ್ಯಮ್ಮ ಕೃಪಾಪೋಷಿತ ಯಕ್ಷಗಾನ ಮಂಡಳಿಯವರು ಲಾರಿಯಲ್ಲಿ ರಂಗಸ್ಥಳ ರೂಪಿಸಿ ಗಮನ ಸೆಳೆದಿದ್ದರೆ ಇತ್ತ ಕುಂದಾಪುರ ತಾಲೂಕಿನ ಆಜ್ರಿ ಚೋನಮನೆ ಶನೀಶ್ವರ ಕಪಾಪೋಷಿತ ಯಕ್ಷಗಾನ ಮಂಡಳಿಯವರು ಚೌಕಿಯನ್ನೇ ಲಾರಿಯಲ್ಲಿ ರೂಪಿಸಿ ಗಮನಸೆಳೆದಿದ್ದಾರೆ. ಇದೊಂದು ಸಂಚಾರಿ(ಮೊಬೈಲ್) ಚೌಕಿ ಎಂಬ ಖ್ಯಾತಿ ಸಂಪಾದಿಸಿದೆ. ಕರಾವಳಿಯ ಯಕ್ಷಗಾನ ವಲಯದಲ್ಲೇ ಮೊದಲ ಬಾರಿಗೆ ಯಕ್ಷಗಾನ ಮೇಳವೊಂದರ ಚೌಕಿ ಲಾರಿ ಮೇಲೇರಿಸಿದ ಕೀರ್ತಿಗೆ ಆಜ್ರಿ ಚೋನಮನೆ ಮೇಳ ಪಾತ್ರವಾಗಿದೆ.

ಆಕರ್ಷಕ ಚೌಕಿ

ಲಾರಿಯ ಹಿಂಬದಿ 20 ಅಡಿ ಅಗಲ ಮತ್ತು 30 ಅಡಿ ಉದ್ದದ ಚೌಕಿ ಕಟ್ಟಲಾಗಿದೆ. 5 ಅಡಿ ಎತ್ತರ ಬಾಡಿ ನಿರ್ಮಿಸಲಾಗಿದೆ. ಚೌಕಿ ಮೇಲೇರಲು ಮೆಟ್ಟಿಲು ರೂಪಿಸಲಾಗಿದೆ. ಮೂರುವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ರೂಪಿಸಲಾದ ಚೌಕಿ ವಿಶಿಷ್ಟವಾಗಿ ಮೂಡಿಬಂದಿದೆ. ರಾತ್ರಿ ಯಕ್ಷಗಾನ ಪ್ರದರ್ಶನಕ್ಕೆಂದು ಹಗಲಿಡೀ ಗುಟ್ಟ ಹುಗಿದು ಚೌಕಿ ಕಟ್ಟುವ ಪ್ರಮೇಯ ತಪ್ಪಿದೆ. ಕೇವಲ ಅರ್ಧ ತಾಸಿನೊಳಗೆ ಚೌಕಿ ರೆಡಿ. ಚೌಕಿಯಲ್ಲಿ ಸಿಸಿ ಟಿವಿ ಕ್ಯಾಮರಾ ಕೂಡ ಅಳವಡಿಸಲಾಗಿದೆ.

ಪ್ರಧಾನ ವೇಷಧಾರಿಯಿಂದ ಹಿಡಿದು ಹಾಸ್ಯಗಾರನ ತನಕ ಚೌಕಿಯಲ್ಲಿ ಕುಳಿತುಕೊಳ್ಳಲು ವಿಶೇಷ ಏರ್ಪಾಟು ಮಾಡಲಾಗಿದೆ. ಲಾರಿಯ ಸ್ಟೇರಿಂಗ್ ಹಿಂಬದಿಯಲ್ಲಿ ಗಣಪತಿ ಹಾಗೂ ಕ್ಷೇತ್ರದ ದೇವರ ವಿಗ್ರಹ ಇಡಲಾಗಿದೆ. ಯಕ್ಷಗಾನ ಆಟ ಆಡಿಸುವವರು, ಭಕ್ತರು ಲಾರಿ ಹಿಂಬದಿಯ ಚೌಕಿಯನ್ನು ಏರಿ ಪ್ರಸಾದ ಪಡೆಯಲು ಸುಗಮ ವ್ಯವಸ್ಥೆ ಮಾಡಲಾಗಿದೆ.

`` ದಿನ ನಿತ್ಯ ಚೌಕಿ ಕಟ್ಟಲು ಪ್ರಸ್ತುತ ಕೂಲಿಯಾಳುಗಳ ಅಭಾವವಿದೆ. ತ್ರಾಸದಾಯಕ ಕೆಲಸ ಕೂಡ ಹೌದು. ಇಡೀ ದಿನ ಚೌಕಿ ಕಟ್ಟಲು ಹೋಗುತ್ತದೆ. ಗಾಳಿ ಅಬ್ಬರಕ್ಕೆ ಕೆಲವೊಮ್ಮೆ ಚೌಕಿ ಅಸ್ತವ್ಯಸ್ತ ಆಗುವುದೂ ಉಂಟು. ಯಕ್ಷಗಾನ ಪ್ರದರ್ಶನ ಆಗುತ್ತಿರುವಂತೆಯೇ ಕಲಾಭಿಮಾನಿಗಳು ಬಣ್ಣ ಹಚ್ಚುವುದನ್ನು ನೋಡುವ ತವಕದಲ್ಲಿ ಚೌಕಿ ಬೇಧಿಸುವುದು ನಡೆಯುತ್ತದೆ. ಲಾರಿಯಲ್ಲಿ ಚೌಕಿ ಕಟ್ಟಿದ ಬಳಿಕ ಈ ಎಲ್ಲ ಸಮಸ್ಯೆಗಳು ದೂರವಾಗಿದೆ. ಇದೊಂದು ಶಾಶ್ವತ ವ್ಯವಸ್ಥೆ ಕೂಡ ಹೌದು. ಚೌಕಿಯಲ್ಲಿ ಕಲಾವಿದರು ಶಿಸ್ತಿನಿಂದ ಬಣ್ಣ ಹಚ್ಚಲು ಸಹಕಾರಿಯಾಗಿದೆ. ಗಾಳಿ, ಬೆಳಕು, ಸಿಸಿ ಟಿವಿ ಕ್ಯಾಮರಾ ಹೀಗೆ ಪ್ರತಿಯೊಂದು ಸೌಕರ್ಯವು ಚೌಕಿ ಒಳಗೊಂಡಿದೆ.`` - ಚೋನಮನೆ ಅಶೋಕ ಶೆಟ್ಟಿ, ಮೇಳದ ಯಜಮಾನ.

ಏಳವೇ ವರ್ಷದ ತಿರುಗಾಟ

7ನೇ ವರ್ಷದ ತಿರುಗಾಟದಲ್ಲಿರುವ ಆಜ್ರಿ ಚೋನಮನೆ ಶ್ರೀ ಶನೀಶ್ವರ ಯಕ್ಷಗಾನ ಮೇಳ ಈ ಭಾಗದ ಪ್ರಸಿದ್ಧ ಮೇಳಗಳ ಪೈಕಿ ಒಂದು. 33 ಕಲಾವಿದರು ಸೇರಿದಂತೆ ಒಟ್ಟು 40 ಮಂದಿ ಮೇಳದಲ್ಲಿ ದುಡಿಯುತ್ತಿದ್ದಾರೆ. ಆಜ್ರಿ ಚೋನಮನೆ ಶನೀಶ್ವರ ಕ್ಷೇತ್ರದಿಂದ ಹೊರಡುವ ಈ ಮೇಳ ಹರಕೆ ಬಯಲಾಟಕ್ಕೆ ಖ್ಯಾತಿವೆತ್ತಿದೆ. ತಿರುಗಾಟದ ಲಾರಿಯ ಹಿಂಬದಿ ಚೌಕಿ ಆಗಿ ಮಾರ್ಪಾಟ್ಟ ಬಳಿಕ ಕಲಾವಿದರು ಕುಶಿಯಾಗಿದ್ದಾರೆ. ಬಣ್ಣದ ಪೆಟ್ಟಿಗೆ, ಪರಿಕರ ಶಿಸ್ತುಬದ್ಧವಾಗಿ ನಿಲುಕುವಂತಾಗಿದೆ.ಕೃಪೆ : http://www.vijaykarnataka.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ