ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ವ್ಯಕ್ತಿ ವಿಶೇಷ
Share
ಹೊಸತನದ ಅನ್ವೇಷಕ, ಕ್ರಿಯಾಶೀಲ ಸಾಧಕ - ರಮೇಶ್ ಬೇಗಾರ್

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಬುಧವಾರ, ನವ೦ಬರ್ 19 , 2014

ಮಲೆನಾಡಿನ ಸೊಬಗಿನ ಶಾರದಾಮಾತೆ ನೆಲೆನಿಂತ ಪುಣ್ಯಭೂಮಿ ಶೃಂಗೇರಿಯ ಮಣ್ಣಿನಲ್ಲಿ ಜನಿಸಿ ರಂಗಭೂಮಿ ಕಿರುತೆರೆ, ಯಕ್ಷಗಾನ, ಪತ್ರಿಕೋದ್ಯಮ, ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಹಾಗೆ ಎಲ್ಲಾ ಕ್ಷೇತ್ರಗಳಲ್ಲು ಕೈಯಾಡಿಸಿ ಕ್ರೀಯಾಶೀಲ ವ್ಯಕ್ತಿತ್ವವನ್ನು ಬೆಳೆಸಿಕೊ೦ಡ ಸನ್ಮಿತ್ರ ರಮೇಶನವರ ಬಣ್ಣದ ಬದುಕಿನ 25 ಸಂವಸ್ಸರದ ಕಾಲಘಟ್ಟದಲ್ಲಿ ಅವರ ಒಡನಾಡಿಯಾಗಿ, ಕೆಲವೊಮ್ಮೆ ಅವರ ಸಲಹೆಗಾರನಾಗಿ ಎರಡು ವಾಕ್ಯ ದಾಖಲಿಸಲು ಹೆಮ್ಮೆ ಎಣಿಸುತ್ತದೆ.

ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸದಾ ಹೊಸತನವನ್ನು ನೀಡುತ್ತಾ ಬಂದಿರುವ ಇವರು ಕ್ರೀಯಾಶೀಲತೆಗೆ ಮಾದರಿ. 1986ರಿಂದ ಮೊದಲ್ಗೊಂಡು ಇಂದಿನವರೆಗೆ ತನ್ನ ಸೃಜನ ಶೀಲತೆ ಮೂಲಕ ಮಲೆನಾಡಿನಲ್ಲಿ ಒಂದು ಸಾಂಸ್ಕತಿಕ ತಲೆಮಾರನ್ನು ರೂಪಿಸಿದ ಕೀರ್ತಿ ಇರುವ ಇವರಿಗೆ ಅವರ ಪ್ರತಿಭೆಯಷ್ಟು ಪ್ರಚಾರ ಸಿಗಲಿಲ್ಲ ಎನ್ನುವುದು ಆಕಾಶದಷ್ಟು ಸತ್ಯ. ಅವರ ಈ ಸಾಧನೆಗೆ ಎಂದೋ ರಾಷ್ಟ್ರ ಮಟ್ಟದ ರಾಜ್ಯ ಮಟ್ಟದ ಪುರಸ್ಕಾರಗಳು ಬರಬೇಕಿತ್ತು. ಏನು ಮಾಡುವ ನಮ್ಮ ಸಮಕಾಲೀನ ವ್ಯವಸ್ಥೆಯೇ ಹಾಗಿದೆ.

ಮಹಾನ್ ಭಾಗವತರ ದ್ವನಿಸುರುಳಿಗಳು

ರಮೇಶ್ ಬೇಗಾರ್ ರವರ ಬೇರೆಲ್ಲಾ ಕ್ಷೇತ್ರದ ಚಟುವಟಿಕೆಯನ್ನು ಬದಿಗಿರಿಸಿ ಅವರ ಯಕ್ಷಗಾನ ಸಂಬಂಧಿ ಸಾಧನೆಯನ್ನು ಮಾತ್ರ ನಾನಿಲ್ಲಿ ಪ್ರಸ್ತಾಪಿಸುತ್ತೇನೆ. ಅದರಲ್ಲಿ ಬಹು ಮುಖ್ಯವಾಗಿ ಯಕ್ಷಗಾನದ ಮಹಾನ್ ಕಲಾವಿದರನ್ನು ಕ್ಯಾಸೆಟ್ ಎಂಬ ಮಾಯ ಲೋಕಕ್ಕೆ ಪರಿಚಯಿಸಿದ್ದು. ಮಹಾನ್ ಭಾಗವತರ ಪ್ರಥಮ ಧ್ವನಿಸುರುಳಿ ಇವರ ನಿರ್ದೇಶನದಲ್ಲಿಯೇ ಆಗಿದೆ ಎನ್ನುವುದು ಇವರಿಗೊಂದು ಹೆಮ್ಮೆ. ಕಾಳಿಂಗ ನಾವಡರ ಅಮೃತಮತಿ, ಇರಬಹುದು, ಸದಾಶಿವ ಅಮೀನರ ಮೀನಾಕ್ಷಿ ಕಲ್ಯಾಣ, ಹಿರಿಯಣ್ಣಾಚಾರ್ಯರ ಚಂದ್ರಾವಳಿ ವಿಲಾಸ, ದಾರೇಶ್ವರರ ಸೂರ್ಯದೀಪ, ಸುರೇಶ ಶೆಟ್ಟರ ಕೃಷ್ಣ ಗಾರುಡಿ, ಶಬರಾಯರ ಬೇಡರ ಕಣ್ಣಪ್ಪ, ರಾಘವೇಂದ್ರ ಮಯ್ಯರ ಸಾಕಷ್ಟು ದ್ವನಿಸುರುಳಿಗಳು ಇವರ ನಿರ್ದೇಶನದಲ್ಲಿ ಬೆಳಕು ಕಂಡಿವೆ.


ತಾನೇ ಸ್ವತಹ ಭಾಗವತಿಕೆ ನಿರ್ವಹಿಸಿ ಯಾಜಿ, ಹಳ್ಳಾಡಿ, ಡಿ. ಜಿ. ಹೆಗಡೆ, ಸಾಮಗ ಮುಂತಾದ ಮಹಾನ್ ಕಲಾವಿದರ ಭೂಮಿಕೆ ಇರುವ ಪಾರಿಜಾತ, ಸಾಲ್ವ ಶೃಂಗಾರ, ಉತ್ತರನ ಪೌರುಷ ಮುಂತಾದ ದ್ವನಿಸುರುಳಿ ಅಲ್ಲದೆ ಹಾಸ್ಯ ಕಥಾವಸ್ತು, ಕುಂದಾಪುರ ಕನ್ನಡ, ಹವ್ಯಕ ಕನ್ನಡ ಬಳಸಿ ಹೊರತಂದ ಹುಲಿಯಾದ ಕಾಳ, ತಾಂಪನ ಹೆಂಡ್ತಿ, ನಾಗ-ಕಾಳ-ಭೈರವ, ಪೆದ್ದ ಗೆದ್ದ, ತರಕಾರಿ ರುಕ್ಕಮ್ಮ ಮುಂತಾದ ದ್ವನಿಸುರುಳಿಗಳು ಕ್ಯಾಸೆಟ್ ಲೋಕದಲ್ಲಿ ದಾಖಲೆಯ ಮಾರಾಟ ಕಂಡಿವೆ.

ರಮೇಶ್ ಬೇಗಾರ್
ಜನನ ಸ್ಥಳ : ಬೇಗಾರು , ಶೃ೦ಗೇರಿ ತಾಲೂಕು
ಚಿಕ್ಕಮಗಳೂರು ಜಿಲ್ಲೆ
ಕರ್ನಾಟಕ ರಾಜ್ಯ

ವೃತ್ತಿ, ಪ್ರವೃತ್ತಿ, ಸಾಧನೆ:
ರಂಗಭೂಮಿ, ಕಿರುತೆರೆ, ಯಕ್ಷಗಾನ, ಪತ್ರಿಕೋದ್ಯಮ ಹೀಗೆ ಸಾಹಿತ್ಯದ ವಿವಿಧ ಮಗ್ಗುಲುಗಳಲ್ಲಿ ಕೃಷಿ ಮಾಡುತ್ತಿರುವ ಕ್ರಿಯಾಶೀಲ ಸಾಧಕ.

ಮಲೆನಾಡ ಕಲಾವಿದರ ದಾಖಲೀಕರಣ

ಯಕ್ಷಗಾನ ಕ್ಷೇತ್ರದಲ್ಲಿ ರಮೇಶ್ರ ಬಹುಮುಖ್ಯ ಸಾದನೆಗಳಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜನೆಯೊಂದಿಗೆ ಹಮ್ಮಿಕೊಂಡ ಮಲೆನಾಡ ಕಲಾವಿದರ ದಾಖಲೀಕರಣ. ಶೃಂಗೇರಿಯಲ್ಲಿ ಮೂರು ದಿನ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಮಲೆನಾಡು ಪರಿಸರದ ಅಳಿದ ಮತ್ತು ಉಳಿದ ಕಲಾವಿದರ ದಾಖಲೀಕರಣ ಒಂದು ಉಪಯುಕ್ತ ಕಾರ್ಯಕ್ರಮ ನಾನದರಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದೆ ಅನ್ನಲು ಹೆಮ್ಮೆ ಅನಿಸುತ್ತದೆ. ಅಂದು ಮಲೆನಾಡ ಪರಿಸರದ ಸುಮಾರು 50 ಕಲಾವಿದರ ಸಾಧನೆಯನ್ನು ಪ್ರಬಂಧ ರೂಪದಲ್ಲಿ ಮಂಡಿಸಿದ್ದೇನೆ.

ರಮೇಶ್್ ಬೇಗಾರ್ ರವರ ಬಹುಮುಖ್ಯ ಸಾಧನೆಗಳಲ್ಲಿ ಒಂದು ಬಡಗುತಿಟ್ಟಿನ ನಡುಪ್ರಾಂತ್ಯದ ಹಿರಿಯ ಕಲಾವಿದರನ್ನು ಒಟ್ಟುಗೂಡಿಸಿ ಹೊರತಂದ ಕುಂಜಾಲು ಶೈಲಿಯ ``ಕರ್ಣಾರ್ಜುನ ಕಾಳಗ`` ಧ್ವನಿಮುದ್ರಿಕೆ. ಅದರಲ್ಲಿರುವ ಹೆಚ್ಚಿನ ಕಲಾವಿದರು ಇಂದು ನಮ್ಮೊಂದಿಗಿಲ್ಲ. ಅದು ಅವರೆಲ್ಲರ ಮೊದಲ ಮತ್ತು ಕೊನೆಯ ಸಿ. ಡಿ. ಸಹ ಹೌದು. ದಿ. ನೆಲ್ಲೂರು ಮರಿಯಪ್ಪಾಚಾರರ ಭಾಗವತಿಕೆಯಲ್ಲಿ ಕೌರವನಾಗಿ ಬಾಗವಹಿಸಿದ ಹಾರಾಡಿ ಮಹಾಬಲ ಗಾಣಿಗರು, ಅರ್ಜುನನಾಗಿ ನೀಲಾವರ ಮಹಾಬಲ ಶೆಟ್ಟರು ಅವರಾರು ಇಂದು ನಮ್ಮೊ೦ದಿಗಿಲ್ಲ. ಈ ಸಿ. ಡಿ. ಅಗಲಿದ ಕಲಾವಿದರಿಗೆ ಅರ್ಪಿಸಿದ ಶ್ರಧ್ಧಾ೦ಜಲಿ ಎಂದು ಪರಿಗಣಿಸಲಾಗಿದೆ. ಕಾಕತಾಳಿಯವಾಗಿ ಮಹಾಬಲ ಶೆಟ್ಟರ ಸಂಸ್ಮರಣೆಯಂದು ಅತಿಥಿಗಳಿಗೆ ಸ್ಮರಣಿಕೆಯಾಗಿ ಇದನ್ನೇ ನೀಡಲಾಯಿತು. ಹೀಗೆ ಈ ಕೆಲಸ ಸಾರ್ಥಕತೆಯನ್ನು ಪಡೆಯಿತು.

ನಾಟಕ ನಿರ್ದೇಶನದಲ್ಲೂ ಸೈ

ನಾಟಕ ನಿರ್ದೇಶನದಲ್ಲೂ ರಮೇಶ್ರು ಅತ್ತಿದ ಕೈ. `ಪ್ರಶ್ನೆ`, `ಗುಡುಗು ಹೇಳಿದ್ದೇನು?`, `ಗಂಟು`, `ಸಿಡಿಲು`, `ಪುಟ್ಟಕ್ಕನ ಮೆಡಿಕಲ್ ಕಾಲೇಜು` ಮುಂತಾದ ಸಣ್ಣ ಕಥೆಗಳನ್ನು ರೂಪಾಂತರಿಸಿ ನಿರ್ದೇಶಿಸಿದ ನಾಟಕಗಳು ದೂರದರ್ಶನದ ಮೂಲಕ ಪ್ರಚಾರ ಪಡೆದಿವೆ. ಅನೇಕ ಕಿರುತೆರೆಯ ದಾರಾವಾಹಿಗಳನ್ನು ನಿರ್ದೇಶಿದ ಇವರ `ಏಕೆ ಹೀಗೆ ನಮ್ಮ ನಡುವೆ`, `ಮಲೆನಾಡ ಮಡಿಲಿಂದ`, `ಪರಿಧಿ`, `ಪರಿಬ್ರಮಣ ಯಕ್ಷ ಪ್ರಪಂಚ` ಎಂಬ ಹಲವಾರು ದಾರಾವಾಹಿಗಳು ಕಿರುತೆರೆಯಲ್ಲಿ ಪ್ರಸಾರಗೊಂಡಿವೆ.

ಅವರೇ ಸ್ವತಹ ರಚಿಸಿ ನಿರ್ದೇಶಿಸಿದ ನಾಟಕಗಳು ಹಲವಾರು. `ಕ್ರಾಂತಿ ಮತ್ತು ರಾಜಕೀಯ ಭೂತಗಳು`, `ಆ ಹುಡುಗ`, `ಪರಿವರ್ತನೆ`, `ನಿರ್ಮಲಾ`, `ಸಿಡಿದವಳು` ಮುಂತಾದವುಗಳು ಸ್ವತಹ ಅವರ ನಾಟಕಗಳು. ಹಲವಾರು ಸಾಕ್ಷ್ಯಚಿತ್ರಗಳನ್ನು ನಿರ್ದೇಸಿದ ಇವರ `ಶೃಂಗೇರಿ ನವರಾತ್ರಿ`, `ಚಿನ್ನದ ರಥ ಸಮರ್ಪಣೆ`, `ಕುದುರೆಮುಖ ಕಂಪೆನಿ ರಜತ ವರ್ಷ ಕಳಸದಲ್ಲಿ `ಗಿರಿಜಾ ಕಲ್ಯಾಣ`, `ಹಾಲಾಡಿ ಮರ್ಲು ಚಿಕ್ಕು ದರ್ಶನ ಸನ್ನಿದಾನ`, `ಶೃಂಗೇರಿ ಜಗದ್ಗುರುಗಳ ಜೀವನ ಚರಿತ್ರೆ` ಮುಂತಾದ ಸಾಕ್ಶ್ಯಚಿತ್ರಗಳು ದೂರದರ್ಶನದಲ್ಲಿ ತೆರೆಕಂಡಿದೆ.

ಪತ್ರಿಕೋದ್ಯಮದಲ್ಲೂ ಕೃಷಿ

ಪತ್ರಿಕೋದ್ಯಮದಲ್ಲೂ ಕೈಯಾಡಿಸಿದ ಇವರು ಶೃಂಗೇರಿ ಪತ್ರಿಕೆ, ರತ್ನಗಿರಿಯ ಗರ್ಭದಲ್ಲಿ, ಧಾರಾವಾಹಿ, ಮಲೆನಾಡು ಕಲಾಬಾರತಿ, ಸಹ್ಯಾದ್ರಿ ವಾರ್ತೆ, ತುಂಗಾ ವಾರ್ತೆ ಮುಂತಾದ ಪತ್ರಿಕೆಯಲ್ಲೂ ಕೆಲಸ ಮಾಡಿದ್ದಾರೆ. ಹೀಗೆ ಸಮಾಜ ಸಂಸ್ಕ್ರತಿಯ ಎಲ್ಲಾ ವಿಭಾಗಗಳಲ್ಲೂ ಕೈಯಾಡಿಸಿದ್ದಾರೆ ಮಲೆನಾಡಿನ ತರುಣನ ಸಾಧನೆಗೀಗ ಇಪ್ಪತ್ತೈದರ ರಜತ ಸಂಬ್ರಮ, ನಮ್ಮ ಪ್ರೀತಿಯ ತರುಣನು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಡಲಿ ಎಂದು ಶೃಂಗೇರಿ ಶಾರದಾಂಬ, ಮಂದಾರ್ತಿ ದುರ್ಗಾಪರಮೇಶ್್ವರಿಯಲ್ಲಿ ನಾವೆಲ್ಲರೊಂದಾಗಿ ಪ್ರಾರ್ಥಿಸುವ. ಅಲ್ಲವೇ?

*********************




ಕಾಳಿ೦ಗ ನಾವಡರೊಡನೆ ರಮೇಶ್್ ಬೇಗಾರ್




ಹಿರಿಯ ಚಲನಚಿತ್ರ ನಟ/ನಿರ್ದೇಶಕ ದ್ವಾರಕೀಶರಿ೦ದ ಸನ್ಮಾನಿಸಲ್ಪಡುತ್ತಿರುವುದು




ಸನ್ಮಾನ ಸಮಾರ೦ಭವೊ೦ದರಲ್ಲಿ







Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
umesha shetty kerady(11/20/2014)
good
shankar shastri(11/20/2014)
olleya praytna..




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ