ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಪ್ರಸ೦ಗ
Share
ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ

ಲೇಖಕರು :
ಯಕ್ಷ ಸೌರಭ
ಗುರುವಾರ, ಜೂನ್ 19 , 2014

ಪ್ರಸ೦ಗ ಕತೃ : ಡಾ. ವೈ. ಚಂದ್ರಶೇಖರ ಶೆಟ್ಟಿ

ರಜತಗಿರಿಯಲ್ಲಿ ಶಿವನ ಸಭೆಯೊಂದಿಗೆ ಕಥಾಹಂದರವು ಪ್ರಾರಂಭವಾಗುತ್ತದೆ. ಆಗ ಶಿವನು ಜಗತ್ತಿನ ಕಲ್ಯಾಣದ ಕುರಿತು ಸಂದೇಹಗಳಿದ್ದರೆ ಅದನ್ನು ಪ್ರಶ್ನಾರೂಪವಾಗಿ ಮಂಡಿಸಿದರೆ ಸಮರ್ಪಕ ಉತ್ತರ ಕೊಡುವುದಾಗಿ ಹೇಳುತ್ತಾನೆ. ಆಗ ಸ್ಕಂದನು ಜಗತ್ತಿನೆಲ್ಲಾ ದೇವಿ ಶಕ್ತಿಗಳಿಗಿಂತಲೂ ಕೊಲ್ಲೂರಿನ ದೇವಿ ಶಕ್ತಿಯು ಅದ್ವಿತೀಯವಾದುದ್ದು ಏಕೆ? ಹಾಗೂ ಶ್ರೀ ಕ್ಷೇತ್ರ ಕೊಲ್ಲೂರಿಗೂ ಮತ್ತು ಶ್ರೀ ಕ್ಷೇತ್ರ ಮಾರಣಕಟ್ಟೆಗೂ ಇರುವ ನಿಕಟ ಸಂಭಂದವೇನು? ಎನ್ನುವ ಪ್ರಶ್ನೆಗಳನ್ನು ಶಿವನ ಮುಂದಿಡುತ್ತಾನೆ. ಇದಕ್ಕೆ ಉತ್ತರವಾಗಿ ಶಂಕರನು ಕ್ಷೇತ್ರದ ಮಹಿಮೆಯನ್ನು ವಿವರಿಸುತ್ತಾನೆ.

ಒಂದು ದಿನ ಮಹಾರಣ್ಯಪುರದ ಅಧಿಕಾರಿ ಕಂಹಾಸುರನ ಸಹೋದರಿ ಮಹಿದಾನವಿ ಕಾನನದಲ್ಲಿ ಸಂಚರಿಸುತ್ತಿರುವಾಗ ತಪಸ್ಸಿನಲ್ಲಿ ಲೀನವಾಗಿರುವ, ದಿವ್ಯ ತೇಜಸ್ಸಿನಿಂದ ಹೊಳೆಯುತ್ತಿದ್ದ ಕೋಲಮುನಿಯನ್ನು ನೋಡಿ ಆಕರ್ಷಿತಳಾಗುತ್ತಾಳೆ. ತ್ರಿಕಾಲ ಜ್ಞಾನಿಯಾದ ಕೋಲಮುನಿಯು ತನ್ನನ್ನು ಬಯಸಿ ಬಂದ ಹೆಣ್ಣು ಮಹಿದಾನವಿ ಎಂಬುದನ್ನು ಅರ್ಥೆಸಿಕೊಳ್ಳುತ್ತಾನೆ. ಕೋಪಗೊಂಡು ಅಸುರ ಕುಲವೇ ನಶಿಸಲಿ ಎಂಬ ಶಾಪವನ್ನು ಕೊಡುತ್ತಾನೆ. ಹತಾಶೆಯಿಂದ ಮಹಿದಾನವಿ ಕೋಲಮುನಿಯು ತನ್ನನ್ನು ಬಯಸಿ ಬಂದ ಎಂಬುದಾಗಿ ಕಂಹಾಸುರನಲ್ಲಿ ಸುಳ್ಳನ್ನು ಹೇಳುತ್ತಾಳೆ. ಕೋಪಗೊಂಡ ಕಂಹಾಸುರ ತನ್ನ ಸಹಚರರೊಂದಿಗೆ ಕೋಲಮುನಿಯನ್ನು ಕೊಲ್ಲಲು ಮುಂದಾಗುತ್ತಾನೆ. ಕಂಹಾಸುರನ ವರಬಲವನ್ನು ಅರಿತ ಕೋಲಮುನಿ ತಪ್ಪಿಸಿಕೊಂಡು ಕೊಡಚಾದ್ರಿಯ ಚಿತ್ರಮೂಲಕ್ಕೆ ತೆರಳುತ್ತಾನೆ.

ಇತ್ತ ಕಂಹಾಸುರನು ಅಸುರರನ್ನು ಕೂಡಿಕೊಂಡು ಇಂದ್ರನನ್ನು ಸೋಲಿಸಿ ದೇವಲೋಕವನ್ನು ವಶಪಡಿಸಿಕೊಳ್ಳುತ್ತಾನೆ. ದಿಕ್ಕು ತೋಚದಂತಾದ ದೇವತೆಗಳು ವಿಷ್ಣುವಿನ ಸಹಾಯದ ಮೊರೆ ಹೋಗುತ್ತಾರೆ. ಕಂಹಾಸುರನ ವರಬಲವನ್ನು ಅರಿತ ಮಹಾವಿಷ್ಣು ತ್ರಿಶಕ್ತಿಯರಾದ ಉಮೆ, ರಮೆ, ವಾಣಿಯರಲ್ಲಿ ಕಂಹಾಸುರನನ್ನು ಸಂಹರಿಸುವಂತೆ ಹೇಳುತ್ತಾನೆ. ಇತ್ತ ಕಂಹಾಸುರನು ಮತ್ತೆ ವರವನ್ನು ಪಡೆಯಲು ಪರಮೇಶ್ವರನನ್ನು ಕುರಿತು ತಪಸ್ಸನ್ನು ಆಚರಿಸುತ್ತಾನೆ. ಇದರಿಂದ ಆಗಬಹುದಾದ ಅನಾಹುತವನ್ನು ಮನಗಂಡ ವಿಷ್ಣುವು ವಾಗ್ದೇವಿಯನ್ನು ಕರೆದು ಕಂಹಾಸುರನು ವರ ಕೇಳದಂತೆ ತಡೆಯಲು ಹೇಳುತ್ತಾನೆ. ಇದರಿಂದಾಗಿ ಕಂಹಾಸುರನು ಮೂಕನಾಗುತ್ತಾನೆ. ಇತ್ತ ಹರಿ, ಹರ, ಬ್ರಹ್ಮರು ದೇವತೆಗಳೊಂದಿಗೆ ಕೋಲವನದಲ್ಲಿ ದೇವಿಯನ್ನು ಪ್ರಾರ್ಥಿಸುತ್ತಾರೆ. ದೇವತೆಗಳಿಗೆ ಅಭಯವನ್ನು ನೀಡಿ ಜಗನ್ಮಾತೆಯು ಸಿಂಹವಾಹಿನಿಯಾಗಿ ಕಂಹಾಸುರನನ್ನು ಸಂಹರಿಸಲು ಬರುತ್ತಾಳೆ. ಆಕೆಯ ಬರುವಿಕೆಯನ್ನು ನೋಡಿ ಕಂಹಾಸುರನು ತನ್ನ ಸಾವು ಸಮೀಪಿಸಿದೆ ಎಂಬುದನ್ನು ಅರಿತು ಮರಣ ಹೊಂದುವ ಮೊದಲು ಮಾತನಾಡುವ ಶಕ್ತಿಯನ್ನು ಅನುಗ್ರಹಿಸುವಂತೆ ಕೇಳುತ್ತಾನೆ.

ಆತನ ಇಚ್ಚೆಯಂತೆಯೆ ತಾಯಿ ಕಂಹಾಸುರನಿಗೆ ಮಾತನಾಡುವ ಶಕ್ತಿಯನ್ನು ಅನುಗ್ರಹಿಸುತ್ತಾಳೆ. ತನ್ನ ದುರುಳ ತನ್ನಕ್ಕೆ ಪಶ್ಚಾತಾಪ ಪಟ್ಟು ಕಂಹಾಸುರನು ಮೋಕ್ಷಕ್ಕಾಗಿ ಪ್ರಾರ್ಥಿಸುತ್ತಾನೆ. ಹಾಗೆಯೇ ತನ್ನ ಕೀರ್ತಿಯು ಅಳಿದುಹೋಗಬಾರದು, ತನ್ನ ಹೆಸರು ಆಚಂದ್ರಆರ್ಕವಾಗಿ ಉಳಿಯುವಂತೆ ಅನುಗ್ರಹಿಸುವಂತೆ ಕೇಳುತ್ತಾನೆ. ಅದಕ್ಕೆ ದೇವಿಯು ಈ ಯುದ್ಧ ನಡೆದ ಸ್ಥಳವು ಮುಂದೆ ಮಾರಣಕಟ್ಟೆಯಾಗಿ ಪ್ರಸಿದ್ದಿ ಪಡೆಯುತ್ತದೆ. ಅಲ್ಲಿ ಬ್ರಹ್ಮಶಿಲೆಯಾಗಿ ಬಿದ್ದಿರುವ ನಿನ್ನನ್ನು ಯೋಗಿಯೊರ್ವನು ಪ್ರತಿಷ್ಟಾಪನೆ ಮಾಡುತ್ತಾನೆ ಎನ್ನುವುದಾಗಿ ಭರವಸೆ ಕೊಟ್ಟು ಕಂಹಾಸುರನನ್ನು ಸಂಹರಿಸುತ್ತಾಳೆ.

ಹಲವು ಸಮಯದ ನಂತರ ಅದ್ವೈತ ಮತ ಸ್ಥಾಪಕರಾದ ಶ್ರೀ ಶಂಕರಾಚಾರ್ಯರು ಕೋಲವನಕ್ಕೆ ಬಂದು ಜ್ಯೋತಿರ್ಲಿಂಗವನ್ನು ಪೂಜಿಸುತ್ತಾರೆ. ಭಕ್ತಿಗೆ ಒಲಿದ ದೇವಿ ಪ್ರತ್ಯಕ್ಷವಾಗಿ ಪಂಚಲೋಹದ ವಿಗ್ರಹವನ್ನು ತಯಾರಿಸಿ ಜ್ಯೋತಿರ್ಲಿಂಗದ ಬಳಿ ಪ್ರತಿಷ್ಟಾಪಿಸಲು ಹೇಳುತ್ತಾಳೆ. ಅಂತೆಯೇ ಮಾರಣಕಟ್ಟೆಯಲ್ಲಿರುವ ಬ್ರಹ್ಮಶಿಲೆಯನ್ನು ಪ್ರತಿಷ್ಟಾಪಿಸುವಂತೆ ಸೂಚಿಸುತ್ತಾಳೆ. ತಾಯಿಯ ಆಜ್ಞೆಯಂತೆ ಶಂಕರಾಚಾರ್ಯರು ಮಾರಣಕಟ್ಟೆಗೆ ಬರುತ್ತಾರೆ. ತಡರಾತ್ರಿ ಬ್ರಹ್ಮಗುಂಡಿಯ ಸನಿಯ ಮಲಗಿರಲು ಭೂತ ಪ್ರೇತಗಳ ಕಾಟಕ್ಕೆ ಒಳಗಾಗುತ್ತಾರೆ. ಅವುಗಳ ಮನದ ಇಂಗಿತವನ್ನು ಅರಿತ ಶಂಕರಾಚಾರ್ಯರು ಮುಂದೊಂದು ದಿನ ಧರಣಿಪಾಲಕನೊಬ್ಬ ಬ್ರಹ್ಮಲಿಂಗೇಶ್ವರನಿಗೆ ದೇಗುಲವನ್ನು ಕಟ್ಟಿಸುತ್ತಾನೆ, ಪರಿವಾರ ಗಣಗಳಾದ ನಿಮಗೆಲ್ಲರಿಗೂ ಗುಡಿಯನ್ನು ಕಟ್ಟಿಸುತ್ತಾನೆ ಎಂಬ ಆಶ್ವಾಸನೆ ನೀಡುತ್ತಾರೆ.

ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ

ಪ್ರಮುಖ ಪಾತ್ರಗಳು

ಈಶ್ವರ
ಪಾರ್ವತಿ
ಕೊಲ್ಲಾ೦ಬಿಕೆ
ಕೋಲಮುನಿ
ಶ೦ಕರಾಚಾರ್ಯ
ಮೂಕಾಸುರ
ಮೂಕಾ೦ಬಿಕೆ
ಮ೦ಜು
ಮ೦ಜಿ
ಬ್ರಹ್ಮಲಿ೦ಗ
ಸ್ಕ೦ದ
ಕ೦ಹಾಸುರ
ದೇವೇ೦ದ್ರ
ಮ೦ಜಯ್ಯ ಶೆಟ್ಟಿ
ಚ೦ದ್ರಯ್ಯ ಶೆಟ್ಟಿ
ಮಹಿದಾನವಿ

ಇತರ ಪಾತ್ರಗಳು

ಬ್ರಹ್ಮ ,ಯಮ
ಸರಸ್ವತಿ, ವಿಷ್ಣು
ಲಕ್ಷ್ಮಿ, ನಾರದ
ನ೦ದಿ, ಮ೦ಜರು
ಸಿ೦ಹ, ವೀರಭದ್ರ
ಹ೦ಡಾಸುರ, ಹು೦ಡಾಸುರ
ದೇವದೂತ, ಅಗ್ನಿ
ವಾಯು, ಕುಬೇರ, ವಾಗ್ದೇವಿ
ಭೂತ, ಯಕ್ಷಿ, ಹ್ರಾಗುಳಿ
ಚಿಕ್ಕು, ಹುಲಿ
ಆಳ್ವ, ಕಳ್ಳರು
ರವಿಕೀರ್ತಿ, ಶಶಿಕೀರ್ತಿ
ಹಲವು ವರ್ಷಗಳ ನಂತರ ಚಿತ್ತೂರಿನಲ್ಲಿ ಬಂಟ ಸಮುದಾಯದ ಚಂದಯ್ಯ ಶೆಟ್ಟಿ ಅಧಿಕಾರಕ್ಕೆ ಬರುತ್ತಾನೆ. ತನ್ನ ಕೆಲಸದಾಳುಗಳಿಂದ ಬ್ರಹ್ಮಗುಂಡಿಯ ಪಕ್ಕದಲ್ಲಿ ಉದ್ಭವಿಸಿರುವ ಕಲ್ಲಿನ ಮೇಲೆ ಕಪಿಲೆ ಎಂಬ ದನವು ಹಾಲನ್ನು ಸುರಿಸುದನ್ನು ನೋಡುತ್ತಾನೆ. ಬ್ರಾಹ್ಮಣರಿಂದ ಸ್ಥಳದ ಮಹಿಮೆಯನ್ನು ಅರಿತು ಯೋಗ್ಯವಾದ ದೇಗುಲವನ್ನು ಕಟ್ಟುತ್ತಾನೆ.

ಒಂದು ದಿನ ಚಂದಯ್ಯ ಶೆಟ್ಟಿಯ ಸೊಸೆ ಕೊಲ್ಲಾಂಬಿಕೆ ಬೇಟೆಗೆಂದು ಕಾಡಿಗೆ ಹೋದಾಗ ರುದ್ರನೆಂಬ ಕಳ್ಳ ಆಕೆಯನ್ನು ಬಲಾತ್ಕರಿಸಲು ಮುಂದಾಗುತ್ತಾನೆ. ಆಗ ಬ್ರಹ್ಮಲಿಂಗನು ಯಕ್ಷಿ, ಹೈಗುಳಿ ಮುಂತಾದ ದೈವಗಳನ್ನು ಬಳಸಿಕೊಂಡು ರುದ್ರನನ್ನು ಸಂಹರಿಸುತ್ತಾನೆ.

ಇಂದಿಗೂ ಸಾವಿರಾರು ಭಕ್ತರು ದೇವರಿಗೆ ಇಷ್ಟವಾದ ಬೆಳಕಿನ ಸೇವೆ, ರಂಗಪೂಜೆ ಮುಂತಾದ ಸೇವೆಗಳ ಮೂಲಕ ಇಷ್ಟಾರ್ಥ ಸಿದ್ದಿಸಿಕೊಳ್ಳುತ್ತಾರೆ. ಪ್ರತಿವರ್ಷವು ಮಕರ ಸಂಕ್ರಮಣದಂದು ಕ್ಷೇತ್ರದಲ್ಲಿ ವಿಶೇಷ ಪೂಜೆ ನಡೆಯುತ್ತದೆ.


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
-(1/1/2016)
thumba olleya mahithi
prasanna(7/6/2014)
thumba channagi baredidira danyavadagalu
ಪ್ರಸ೦ಗಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ