ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಕೊಂಕಣಿ ನಾರಿಯರ ಯಕ್ಷಧ್ವನಿ

ಲೇಖಕರು : ಉದಯವಾಣಿ
ಮ೦ಗಳವಾರ, ಏಪ್ರಿಲ್ 15 , 2014
ಎಪ್ರಿಲ್ 15, 2014

ಕೊಂಕಣಿ ನಾರಿಯರ ಯಕ್ಷಧ್ವನಿ

ಮಂಗಳೂರು : ಕೊಂಕಣಿ ಭಾಷಿಕರು ಯಕ್ಷಗಾನ ಆಟ, ತಾಳಮದ್ದಲೆ ಪ್ರದರ್ಶನಗಳ ಮೂಲಕ ಯಕ್ಷರಂಗದಲ್ಲಿ ಅನೂಹ್ಯ ಛಾಪು ಮೂಡಿಸುತ್ತಿರುವುದು ತಿಳಿದ ವಿಚಾರ. ಆದರೆ, ಜಿಎಸ್‌ಬಿ ಮಹಿಳೆಯರ ತಂಡವೊಂದು ಯಕ್ಷಮಾತೆಯ ಸೇವೆ ಮಾಡಿ ಯಕ್ಷರಂಗವನ್ನು ನಿಬ್ಬೆರಗಾಗುವಂತೆ ಮಾಡುವಲ್ಲಿ ಸಫ‌ಲವಾಗಿದೆ. ಅದು ಶಿವಮೊಗ್ಗೆಯ ವಾಗೆªàವಿ ಕೊಂಕಣಿ ಮಹಿಳಾ ಯಕ್ಷರಂಗ.

ಶಿವಮೊಗ್ಗದಲ್ಲಿ ಕಿರಣ್‌ ಪೈ ಮತ್ತು ಪ್ರತಿಮಾ ನಾಯಕ್‌ಅವರ ನೇತೃತ್ವದ ಈ ತಂಡ ಹುಟ್ಟಿದ್ದು 2009ರಲ್ಲಿ. ಪ್ರಾರಂಭದಲ್ಲಿ ಕನ್ನಡದಲ್ಲಿ ಪ್ರದರ್ಶನ ನೀಡಿ ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಯಿತು. ಒಮ್ಮೆ ಈ ತಂಡದ ಪ್ರದರ್ಶನ ಕಂಡು ಸಂತೋಷಗೊಂಡ ಜಿಎಸ್‌ಬಿ ಸಮಾಜದ ಹಿರಿಯ ಕಲಾಪ್ರೇಮಿ ಬಸ್ತಿ ವಾಮನ ಶೆಣೈ ಮತ್ತು ಎಚ್‌. ಸುಬ್ರಾಯ ಮಲ್ಯರು ಕೊಂಕಣಿ ಭಾಷೆಯಲ್ಲಿ ಪ್ರದರ್ಶನ ನೀಡುವಂತೆ ಈ ತಂಡವನ್ನು ಹುರಿದುಂಬಿಸಿ, ಉತ್ತಮ ಫ‌ಲಿತಾಂಶ ಪ್ರಾಪ್ತವಾಗುವಂತೆ ಮಾಡಿದರು.

ತದನಂತರ ತಂಡ ಹಿಂದಿರುಗಿ ನೋಡಲೇ ಇಲ್ಲ. ವ್ಯಾಪಕ ಪ್ರೋತ್ಸಾಹದಿಂದಾಗಿ ಬಂಟ್ವಾಳ, ಪಾಣೆ ಮಂಗಳೂರು, ಸುಳ್ಯ, ಬೆಂಗಳೂರು, ಕಾಸರಗೋಡು, ಮುಂಬೈ, ಚೆನ್ನೈ ಮುಂತಾದೆಡೆ ಪ್ರದರ್ಶನ ನೀಡಿ, ಕಲಾಸಕ್ತರನ್ನು ಮಂತ್ರಮುಗ್ಧಗೊಳಿಸತೊಡಗಿತು.

ರುಕ್ಮಿಣೀ ಸ್ವಯಂವರ, ವೀರ ಅಭಿಮನ್ಯು, ಸೀತಾಕಲ್ಯಾಣ, ವೀರ ಸುಧನ್ವ ತಂಡ ಪ್ರದರ್ಶನ ನೀಡುವ ಕೆಲ ಪ್ರಸಂಗಗಳು. ಹಿಮ್ಮೇಳವನ್ನು ವೃತ್ತಿಪರ ಅಥವಾ ಹವ್ಯಾಸಿ ಪುರುಷ ಕಲಾವಿದರು ನಿಭಾಯಿಸುತ್ತಾರೆ. ತಂಡದಲ್ಲಿ ಗೃಹಿಣಿಯರೊಂದಿಗೆ ಉದ್ಯೋಗಿ ಮಹಿಳೆಯರೂ ಇರುವುದು ವಿಶೇಷ.

ಪರಿಪೂರ್ಣ ಮಹಿಳಾ ತಂಡ, ಯಕ್ಷಮಾತೆಯ ಸೇವೆ, ಕೊಂಕಣಿಯಲ್ಲಿ ಯಕ್ಷಗಾನ ಅಭಿರುಚಿ ಮೂಡಿಸುವಿಕೆ ಮುಂತಾದ ಆಶಯಗಳನ್ನು ಹೊಂದಿರುವ ತಂಡದ ಹುಟ್ಟು, ಸಾಧನೆ, ಬೆಳವಣಿಗೆ ಗಮನಾರ್ಹ. ಇನ್ನು, ತಂಡವನ್ನು ಎತ್ತರಕ್ಕೇರಿಸುವ ಜವಾಬ್ದಾರಿ, ಮಾತೃಭಾಷಾ ಪ್ರೇಮಿ ಕಲಾಸಕ್ತರ ಮೇಲಿದೆ. "ವಾಗೆªàವಿ ಕೊಂಕಣಿ ಮಹಿಳಾ ಯಕ್ಷರಂಗ' ನಮ್ಮ ಯಕ್ಷರಂಗದಲ್ಲಿ ಅಪೂರ್ವ ಸಾಧನೆ ಮಾಡಲಿ ಎಂಬುದು ಸಹೃದಯರ ಹಾರೈಕೆ.

ಕೃಪೆ : www.udayavani.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ