ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಜನಮೆಚ್ಚುಗೆಯ ಯುವ ಭಾಗವತ- ಸತೀಶ್ ಶೆಟ್ಟಿ ಬೋಂದೆಲ್

ಲೇಖಕರು :
ಜಗನ್ನಾಥ ಶೆಟ್ಟಿ ಬಾಳ
ಗುರುವಾರ, ಫೆಬ್ರವರಿ 20 , 2014

ಯಕ್ಷಗಾನದತ್ತ ಯುವಜನತೆ ಮುಖ ಮಾಡುತ್ತಿಲ್ಲ ಎಂಬ ಆರೋಪ ಎಲ್ಲೆಡೆ ಕೇಳಿಬರುತ್ತಿರುವ ಹೊತ್ತಿನಲ್ಲೇ ಹಲವು ಪ್ರತಿಭಾನ್ವ್ವಿತ ಕಲಾವಿದರು ಯಕ್ಷಗಾನದಲ್ಲಿ ಗುರುತಿಸಿಕೊಳ್ಳುತ್ತಾ ಮೇಲಿನ ಆರೋಪ ಸುಳ್ಳು ಎಂದು ಸಾಬೀತು ಮಾಡು ತ್ತಿದ್ದಾರೆ. ಅದರಲ್ಲೂ ಭಾಗವತರಾಗಿ ಸತೀಶ್ ಶೆಟ್ಟಿ ಪಟ್ಲ ಅವರು ಪಡೆದಿರುವ ಜನಪ್ರಿಯತೆ, ಗಳಿಸುತ್ತಿರುವ ಅಭಿಮಾನಿ ವೃಂದ ದೊಡ್ಡ ಪ್ರಮಾಣದಲ್ಲಿದ್ದು, ಆಶ್ಚರ್ಯ ಮೂಡಿಸುತ್ತಿದೆ. ಅದೇ ಸಾಲಿಗೆ ಮತ್ತೊಂದು ಸೇರ್ಪಡೆ ಎಂದು ಹೇಳಬಹುದಾದ ಹೆಸರು ಸತೀಶ್ ಶೆಟ್ಟಿ ಬೋಂದೆಲ್.

ಯಕ್ಷಗಾನ ರಂಗದಲ್ಲಿ ಸುಮಾರು 17 ವರ್ಷಗಳ ಅನುಭವ ಇರುವ ಸತೀಶ್ ಶೆಟ್ಟಿ ಬೋಂದೆಲ್ ಅವರು ಪ್ರಸ್ತುತ ಬಪ್ಪನಾಡು ಮೇಳದಲ್ಲಿ ಪ್ರಧಾನ ಭಾಗವತರು. 37ರ ಹರೆಯದ ಅವರು ತನ್ನ ಹಾಡಿನ ಮೋಡಿಯ ಮೂಲಕ ಈಗಾಗಲೇ ಅಭಿಮಾನಿ ಬಳಗವನ್ನು ಸೃಷ್ಟಿಸಿದ್ದಾರೆ.

ರಾಮಣ್ಣ ಶೆಟ್ಟಿ-ರತ್ನಾ ಶೆಟ್ಟಿ ದಂಪತಿ ಮಗನಾಗಿರುವ ಸತೀಶ್ ಶೆಟ್ಟಿ ಬೋಂದೆಲ್ ಅವರಿಗೆ ಎಳವೆಯಲ್ಲೇ ಯಕ್ಷಗಾನದ ಆಸಕ್ತಿಯಿತ್ತು. ಅದರಲ್ಲೂ ಹಾಡುಗಾರಿಕೆ ಬಗ್ಗೆ ಸೆಳೆತವಿದ್ದ ಅವರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಮತ್ತು ಪದ್ಯಾಣ ಗಣಪತಿ ಭಟ್ ಅವರಿಂದ ಭಾಗವತಿಕೆ ಯನ್ನು ಕಲಿತುಕೊಂಡರು. ಮುಂದೆ ಡಿ. ಮನೋಹರ್ ಕುಮಾರ್ ಅವರ ಮಾಲಿಕತ್ವದಲ್ಲಿದ್ದ ಕದ್ರಿ ಮೇಳದಲ್ಲಿ ಮೂರು ವರ್ಷ ಕಾಲ ಸಂಗೀತಕಾರನಾಗಿ ಸೇವೆ ಸಲ್ಲಿಸಿದ್ದಾರೆ. ಮುಂದಕ್ಕೆ ಭಾಗವತರಾಗಿ ಪದೋನ್ನತಿ ಹೊಂದಿದ ಅವರು ಸಸಿಹಿತ್ಲು ಮೇಳದಲ್ಲಿ ಆರು ವರ್ಷ ಕಾಲ ದುಡಿದು, ಪ್ರಸ್ತುತ ಎಂಟು ವರ್ಷದಿಂದ ಬಪ್ಪನಾಡು ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದಾರೆ.

ಪಿಯುಸಿ ಶಿಕ್ಷಣವನ್ನು ಹೊಂದಿರುವ ಸತೀಶ್ ಶೆಟ್ಟಿ ಅವರು ಈಗ ಐದು ಭಾಷೆ ಗಳಲ್ಲಿ ಭಾಗವತಿಕೆ ಮಾಡುವ ವಿಶೇಷ ಪ್ರತಿಭೆ. ಕನ್ನಡ, ತುಳು, ಹಿಂದಿ, ಮಲ ಯಾಳಂ ಮತ್ತು ಸಂಸ್ಕೃತ ಭಾಷೆಯಲ್ಲಿ ಭಾಗವತಿಕೆ ಮಾಡುತ್ತಿರುವ ಅವರಿಗೆ ಉಡುಪಿ ಶ್ರೀಗಳು ಪಂಚಭಾಷಾ ಭಾಗವತ ಎಂಬ ಬಿರುದು ನೀಡಿ ಸಮ್ಮಾನಿಸಿದ್ದಾರೆ. ಉಡುಪಿಯಲ್ಲಿ ನಡೆದಿರುವ ಭಾಗವತಿಕೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಕೊಂಡಿರುವ ಅವರು ಕಾರ್ಕಳದಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಿಯಾಗಿ ಗಮನ ಸೆಳೆದಿದ್ದಾರೆ.

ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಜರಗಿದ ಸ್ಪರ್ಧೆ ಯಲ್ಲಿ ಪ್ರಥಮ ತಂಡ ಪ್ರಶಸ್ತಿಗೂ ಇವರು ಭಾಜನರಾಗಿದ್ದರು. ಕಟೀಲು ಮತ್ತು ಬೆಳ್ಳಾರೆಯಲ್ಲಿ ನಡೆದಿದ್ದ ಮತ್ತೆರಡು ಪ್ರತ್ಯೇಕ ಸ್ಪರ್ಧೆಯಲ್ಲಿ ಅವರು ಪ್ರಥಮ ಸ್ಥಾನ ಗಳಿಸುವ ಮೂಲಕ ತನ್ನ ಪ್ರತಿಭೆಯನ್ನು ಮೆರೆದಿದ್ದಾರೆ. ಹಲವಾರು ಪ್ರಸಂಗಗಳನ್ನು ನಿರರ್ಗಳವಾಗಿ ಬಾಯಿಪಾಠ ಮಾಡಿ ಕೊಂಡಿರುವ ಅವರು ಸುಲಲಿತವಾಗಿ ಹಾಡುವ ಮೂಲಕ ತನ್ನ ಅನುಭವ ಮತ್ತು ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.

ಬೋಂದೆಲ್ ಸತೀಶ್ ಶೆಟ್ಟಿ
ಜನನ : 1977
ಜನನ ಸ್ಥಳ : ಬೋಂದೆಲ್,
ಮ೦ಗಳೂರು ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಕಳೆದ 17 ವರ್ಷಗಳಿ೦ದ ಹಲವಾರು ಮೇಳಗಳಲ್ಲಿ ಭಾಗಗವತರಾಗಿ ದುಡಿಮೆ

ಪ್ರಶಸ್ತಿಗಳು:
ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ

ಅದರಲ್ಲೂ ಶನೈಶ್ವರ ಮಹಾತ್ಮೆ ಪ್ರಸಂಗಕ್ಕೆ ಇವರಷ್ಟು ಸೂಕ್ತ ಭಾಗವತರು ಬೇರೊಬ್ಬರಿಲ್ಲ ಎಂದು ಹೇಳುವವರ ಸಂಖ್ಯೆ ದೊಡ್ಡದಿದೆ. ಶನೈಶ್ವರ ಮಹಾತ್ಮೆ ತಾಳ ಮದ್ದಳೆಗೆ ಇವರನ್ನೇ ಭಾಗವತರಾಗಿ ಮಾಡಲು ಅಭಿಮಾನಿಗಳು ಪೈಪೋಟಿ ನಡೆಸುತ್ತಿದ್ದಾರೆ. ಶಿವರಾಮ ಜೋಗಿ, ಅರುವ ಕೊರಗಪ್ಪ ಶೆಟ್ಟಿ, ಡಿ.ಮನೋಹರ್ ಕುಮಾರ್, ಸರಪಾಡಿ ಅಶೋಕ್ ಶೆಟ್ಟಿ, ಸಂಜಯಕುಮಾರ್ ಮುಂತಾದ ಯಕ್ಷಗಾನದ ಘಟಾನುಘಟಿ ಕಲಾವಿದರಿಗೆ ಭಾಗವತಿಕೆ ಮಾಡಿರುವ ಹೆಮ್ಮೆ ಸತೀಶ್ ಶೆಟ್ಟಿಯವರಿಗಿದೆ. ಈಗ ಇವರ ಹಾಡಿಗೆ ಯುವ ಯಕ್ಷಗಾನಾ ಸಕ್ತರು ಸೇರಿದಂತೆ ಎಲ್ಲ ಯಕ್ಷ ಕಲಾಭಿ ಮಾನಿಗಳಿಂದ ಉತ್ತಮ ಪ್ರೋತ್ಸಾಹ ಶ್ಲಾಘನೆ ಕಂಡುಬರುತ್ತಿದೆ. ಇದರ ಪರಿಣಾಮ ಸಹಜವಾಗಿಯೇ ಬೇಡಿಕೆಯೂ ಹೆಚ್ಚುತ್ತಿದೆ.

****************

ಸತೀಶ್ ಶೆಟ್ಟಿಯವರ ಕೆಲವು ಭಾವಚಿತ್ರಗಳು (ಕೃಪೆ : ಅ೦ತರ್ಜಾಲದ ಮಿತ್ರರು)




ಅಬಿಮಾನಿಗಳಿ೦ದ ಸನ್ಮಾನ




ಕಟೀಲು ಮೇಳದಲ್ಲಿ ಭಾಗವತಿಕೆ








ಕೃಪೆ : http://www.jayakirana.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಧನಂಜಯ್ , ನೆಲ್ಯಾಡಿ(5/24/2014)
ಮಾನ್ಯರೇ, ಬೋಂದೇಲ್ ಸತೀಶ ಶೆಟ್ಟಿಯವರ ಭಾಗವತಿಕೆಯನ್ನು ಕೆಲವಾರು ವರ್ಷಗಳ ಹಿಂದೆಯೇ ಮಂಗಳೂರಿನಲ್ಲಿರುವಾಗ ಅನುಭವಿಸಿದ್ದೆ. ಭರವಸೆಯ ಆಶಾಕಿರಣವನ್ನು ಮೂಡಿಸಿದ್ದರು. ಕದ್ರಿ ಹವ್ಯಾಸೀ ಬಳಗದ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರು. ಪೊಳಲಿ ದಿವಾಕರ ಆಚಾರ್ ಅವರದ್ದು ಮತ್ತು ಬೋಂದೇಲ್ ಅವರದ್ದು ಸೇವೆ ನಡೆಯುತ್ತಿತ್ತು. ಅವರ ಬಗ್ಗೆ ವಿವರಗಳನ್ನು ನೀಡಿ ಉಪಕಾರ ಮಾಡಿದ್ದೀರಿ. ನಾವೆಲ್ಲರೂ ಅವರಿಗೆ ಉತ್ತಮ ಆಯುರಾರೋಗ್ಯ ಸಕಲ ಸಂಪದ ಭಾಗ್ಯವನ್ನು ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ. ಚಿತ್ರಗಳೊಂದಿಗೆ ಭಾಗವತಿಕೆ ಧ್ವನಿಯನ್ನೂ ಒದಗಿಸುವ ಕೃಪೆ ಮಾಡಬೇಕಾಗಿತ್ತು. ಪ್ರಯತ್ನಿಸಿರಿ. ವಂದನೆಗಳು.




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ