ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಪ್ರಸ೦ಗ
Share
ಮಂದಾರ್ತಿ ಕ್ಷೇತ್ರ ಮಹಾತ್ಮೆ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಬುಧವಾರ, ಜನವರಿ 8 , 2014

ಪ್ರಸ೦ಗ ಕತೃ : ಶ್ರೀ ಸೀತಾನದಿ ಗಣಪಯ್ಯ ಶೆಟ್ಟಿ

ಧರಣೀ ದೇವಿಯ ವಜ್ರಕೀರೀಟದಂತ ಹಿಮಾಲಯ ಪರ್ವತ ಶ್ರೇಣಿಗೆ ಅಲಂಕಾರ ಪ್ರಾಯವಾದ ರಜತಾದ್ರಿಯಲ್ಲಿ ಶಿವಪಾರ್ವತಿಯರು ನೆಲೆನಿಂತಿದ್ದರು. ಆ ಸಮಯದಲ್ಲಿ ನಾಗಲೋಕದ ಒಂದು ಬಾಗಕ್ಕೆ ಅದಿಕಾರಿಯೂ ಮಹಾಶೇಷನ ಮಿತ್ರನೂ ಆದ ನಾಗಲೋಕವನ್ನು ಆಳುತಿದ್ದ ಶಂಖಚೂಡನಿಗೆ ಹಲವು ವರ್ಷಗಳ ಕಾಲ ಮಕ್ಕಳಾಗದೇ ಶಿವನ ಕುರಿತು ಘೋರ ತಪವನ್ನು ಮಾಡಿ ಮೊರೆಹೋದಾಗ ಶಿವಾನುಗ್ರಹದಿಂದ ಐದು ಮಂದಿ ಹೆಣ್ಣುಮಕ್ಕಳಾಗುತ್ತಾರೆ. ಶಿವನ ಅನುಗ್ರಹದಿಂದ ಹುಟ್ಟಿದ ಕಾರಣ ಮುದ್ದಿನಿಂದ ಸಾಕಿ ಅವರಿಗೆ ದೇವರತಿ,ನಾಗರತಿ,ಚಾರುರತಿ,ಮಂದರತಿ,ನೀಲರತಿ ಎಂದು ನಾಮಕರಣ ಮಾಡುತ್ತಾನೆ. ಶಂಖಚೂಡನ ತನ್ನ ಐವರು ಪುತ್ರಿಯರ ವಿವಾಹವನ್ನು ಶಿವಕುಮಾರ ಸುಬ್ರಮಣ್ಯನೊಂದಿಗೆ ಮಾಡಬೇಕೆಂಬ ಇಚ್ಚೆಯನ್ನು ವ್ಯಕ್ತಪಡಿಸುತ್ತಿರುವಾಗಲೇ ಹೃದಯಾಘಾತದಿಂದ ನಿಧನ ಹೊಂದುತ್ತಾನೆ. ಹೆಣ್ಣು ಮಕ್ಕಳೇ ಮುಂದೆ ನಿಂತು ತಂದೆಯ ಅಂತ್ಯ ಸಂಸ್ಕಾರ ಮಾಡಿ ಹಿರಿಯಲಾದ ದೇವರತಿ ನಾಡಿನ ಅರಸಾಗುತ್ತಾಳೆ.

ತಂದೆಯ ಆಸೆಯನ್ನು ನೆರವೇರಿಸಲೋಸುಗ ಐವರೂ ಸೇರಿ ಕೈಲಾಸಗಿರಿಗೆ ಷಣ್ಮುಖನನ್ನು ನೋಡಲು ಹೋಗುತ್ತಾರೆ. ದ್ವಾರದಲ್ಲಿದ್ದ ನಂದಿಕೇಶನು ಅಕಾಲದಲ್ಲಿ ಶಿವನನ್ನು ನೋಡಬಾರದೆಂದು ಅವರನ್ನು ತಡೆಯುತ್ತಾನೆ. ವಾದ ವಿವಾದಗಳಾಗಿ ಕ್ರೋಧದಿಂದ ನಾಗಕನ್ಯೆಯಯರು ನಂದಿಕೇಶನಿಗೆ ಕೈಲಾಸದಲ್ಲಿ ನೀನಿರಲು ಯೋಗ್ಯನಲ್ಲ, ಭೂಲೋಕದಲ್ಲಿ ರಕ್ಕಸನಾಗಿ ಜನಿಸೆಂದು ಶಪಿಸುತ್ತಾರೆ. ಕೋಪಗೊಂಡ ನಂದಿಯು ನೀವು ಯಾರನ್ನು ನಿರೀಕ್ಷೆ ಇಟ್ಟು ಬಂದಿರೋ ಅದು ಪಲಿಸದೇ ಭೂಲೋಕದಲ್ಲಿ ಬೇರೆ ಬೇರೆಯಾಗ ಬಿದ್ದಿರಿ ಎಂದು ಶಪಿಸುತ್ತಾನೆ. ಪ್ರತ್ಯಕ್ಷರಾದ ಶಿವ ಪಾರ್ವತಿಯರು ಯಾರ ಶಾಪವೂ ಹುಸಿಯಾಗದು ಹೆಣ್ಣು ಮಕ್ಕಳಾದ ನಿಮಗೆ ಷಣ್ಮುಖನೊಂದಿಗೆ ಮದುವೆಯಾಗದು. ಆದರೆ ಅವನೊಂದಿಗೆ ಪ್ರತ್ಯ ಪ್ರತ್ಯೇಕವಾಗಿ ಭೂಲೋಕದಲ್ಲಿ ಜನಿಸುವಿರಿ ಎನ್ನುತ್ತಾನೆ. ಪಾರ್ವತಿಯು ನಂದಿಗೆ ಅಭಯನೀಡಿ ಭೋಲೋಕದಲ್ಲಿ ರಕ್ಕಸನಾಗಿ ಹುಟ್ಟಿದ ನಿನಗೆ ನಾನೇ ಮು೦ದೆ ಮೋಕ್ಷ ನೀಡುತ್ತೇನೆ ಎನ್ನುತ್ತಾಳೆ.

ಭೂಲೋಕದಲ್ಲಿ ವಾಘ್ರಪಾದನೆಂಬ ಮುನಿಯೋರ್ವನಿಂದ ಪುನಹ ಶಾಪಗ್ರಸ್ತರಾಗಿ ಬಿದಿರ ಬಲೆಯಲ್ಲಿ ಕಾಡ್ಗಿಚ್ಚಿಗೆ ಸಿಲುಕಿ, ರತ್ನಾಕ್ಯನೆಂಬವನಿಂದ ರಾಜ್ಯ ಬ್ರಷ್ಟನಾದ ಸಾತ್ವಿಕ ದೊರೆ ದೇವವರ್ಮನಿಂದ ರಕ್ಷಿಸಲ್ಪಟ್ಟು ಅವನು ಐವರನ್ನು ಉತ್ತರೀಯದಲ್ಲಿ ಕಟ್ಟಿಕೊಂಡು ಹೋಗುತ್ತಿರುವಾಗ ದೇವರತಿಯು ಅರಸಮ್ಮನ ಕಾಡು ಎಂಬಲ್ಲಿ ಕಾಣೆಯಾಗುತ್ತಾಳೆ. ಅದೀಗ ಅರ್ಸಮ್ಮನ ಕಾನು ಎಂದು ಪ್ರಸಿದ್ದಿ ಪಡೆದಿದೆ.

ನಾಗರತಿ ನಾಗೇರ್ತಿ ಎಂಬಲ್ಲಿ, ಚಾರುರತಿ ಚೋರಾಡಿ ಎಂಬಲ್ಲಿ ಕಾಣೆಯಾಗುತ್ತಾರೆ. ಮಂದಗಮನೆಯಾದ ಮಂದರತಿ ಮಂದರ್ತಿಯಲ್ಲೂ ನೀಲರತಿ ಸೀತಾನದಿಯ ತಟ ನೀಲಾವರದಲ್ಲಿ ಕಾಣೆಯಾಗುತ್ತಾರೆ. ಅಲ್ಲೆಲ್ಲವೂ ದೇವಾಲಯ ನಿರ್ಮಾಣವಾಗಿದೆ ನೀಲಾವರವನ್ನು ಮಂದಾರ್ತಿಯ ತಂಗಿ ಎಂಬ ಪ್ರತೀತಿ ಇಂದಿಗೂ ಇದೆ. ದೇವಿಯ ಅಪ್ಪಣೆ ಮೇರೆಗೆ ದೇವವರ್ಮನು ವರಾಹಿ ತಟದಲ್ಲಿರುವ ದೇವಿ ವಿಗ್ರಹವನ್ನು ಮಂದಾರ್ತಿಗೆ ತಂದು ಪ್ರತಿಷ್ಟಾಪಿಸುತ್ತಾನೆ. ಕಳೆದುಕೊಂಡ ರಾಜ್ಯವನ್ನೂ ಪಡೆಯುತ್ತಾನೆ. ಸುಂದರವಾದ ಮಂದಿರವನ್ನು ನಿರ್ಮಿಸುತ್ತಾನೆ.

ನಾಗದೋಷಕ್ಕೊಳಗಾದ ಸುದೇವನೆಂಬ ಬ್ರಾಹ್ಮಣ ನಾಗಶಾಪ ಪರಿಹಾರಕ್ಕಾಗಿ ಮಂದಾರ್ತಿಯಲ್ಲಿರುವ ನಾಗತೀರ್ಥದಲ್ಲಿ ಸ್ನಾನ ಮಾಡಿ ರೋಗವಾಸಿಯಾದಾಗ ದೇವಿ ಪೂಜೆಯ ಕೈಂಕರ್ಯಗೊಳ್ಳುತ್ತಾನೆ.

ಶಾಪಗ್ರಸ್ತನಾದ ನಂದಿಯು ಕಿರಾತ ಕನ್ಯೆ ಮತ್ತು ವ್ಯಾಘ್ರಪಾದ ಮುನಿಗಳ ಸಮಾಗಮದಿಂದ ಮಹಿಷಾಖ್ಯನಾಗಿ ಹುಟ್ಟಿ,ದುಷ್ಟನಾಗಿ ಬೆಳೆಯತೊಡಗುತ್ತಾನೆ. ದೇವಿಯಿಂದ ವದಿಸಲ್ಪಟ್ಟುಮೋಕ್ಷ ಪಡೆಯುತ್ತಾನೆ. ದೇವಿಯು ವೀರನಾದ ಮಹಿಷನ ವಧೆಗೆ ಬೊಬ್ಬರ್ಯ, ಕೆಂಡ ಹೈಗುಳಿ, ಕಲ್ಲುಕುಟ್ತಿಗ ದೈವವನ್ನು ಬಳಸಿಕೊಳ್ಳುತ್ತಾಳೆ. ಆ ದಿನವನ್ನು ಇಂದಿಗೂ ಕೆಂಡಸೇವೆಯನ್ನಾಗಿ ಆಚರಿಸುತ್ತಾರೆ. ಸುಮಂಗಲೆಯರು ರಾತ್ರಿ ಕೆಂಡ ಹಾರುವುದು ಬಹು ಪ್ರಸಿದ್ದ ಹರಕೆ. ಪ್ರತೀ ವರ್ಷ ಕುಂಭ ಸಂಕ್ರಮಣದಂದು ಸಾವಿರಾರು ಮುತ್ತೈದೆಯರು ಈ ಹರಕೆಯಲ್ಲಿ ಪಾಲ್ಗೋಂಡು ತಮ್ಮ ಇಷ್ಟಾರ್ಥ ಸಿದ್ದಿಸಿಕೊಳ್ಳುತ್ತಾರೆ. ಮಹಿಷನನ್ನು ಕೊಂದ ದೇವಿಗೆ ಮುನಿಗಳು ಹರಿವಾಣದಿಂದ ನೈವೇದ್ಯ ಮಾಡುತ್ತಾರೆ.ಮಂದಾರ್ತಿ ಕ್ಷೇತ್ರ ಮಹಾತ್ಮೆ
ಪ್ರಮುಖ ಪಾತ್ರಗಳು : ಶಿವ
ಪಾರ್ವತಿ
ದೇವರತಿ
ನಾಗರತಿ
ಚಾರುರತಿ
ಮಂದರತಿ
ನೀಲರತಿ
ನಂದಿಕೇಶ
ಮಹಿಷಾಖ್ಯ
ದೇವಿ ದುರ್ಗಾಪರಮೇಶ್ವರಿ
ಬೊಬ್ಬರ್ಯ,
ಕೆಂಡ ಹೈಗುಳಿ
ಕಲ್ಲುಕುಟ್ತಿಗ ದೈವ
ದೇವವರ್ಮ
ಸುದೇವ
ಸೂರ್ಗೋಳಿ ಅಂತು
ಚಾಮು೦ಡೇಶ್ವರಿ
ಕಿರಾತ ಪಡೆ
ಜಲಜಲಕ್ಷ್ಮಿ
ಕ್ಷೇತ್ರ ಪಾಲ

ಅನೇಕ ರಕ್ಕಸರ ಮರ್ಧನ ಮಾಡಿ, ಭಕ್ತರನ್ನು ರಕ್ಷಿಸಿ ಶ್ರೀದೇವಿಯು ಪ್ರಸಿದ್ದಿಯನ್ನು ಪಡೆಯುತ್ತಾಳೆ. ಸೂರ್ಗೋಳಿ ಅಂತು ಎನ್ನುವ ಕಳ್ಳ ಶ್ರೀಮಂತರ ಹಾಗೂ ದೇವಸ್ಥಾನದ ಕಳ್ಳತನವನ್ನು ಮಾಡಲು ತಂಡವನ್ನು ನಿರ್ಮಿಸಿಕೊಂಡಿದ್ದ. ಆನೆಗುಡ್ಡೆಯ ವಿನಾಯಕ ದೇವಸ್ಥಾನಕ್ಕೆ ಹೊದಾಗ ಯಾವ ರೀತಿ ಪ್ರಯತ್ನ ಮಾಡಿದರೂ ಒಳಗಡೆ ಪ್ರವೇಶ ಮಾಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಪ್ರಯತ್ನ ಪಟ್ಟಾಗ ಅಶರೀರವಾಣಿಯಂತೆ ಒಳಗಡೆ ಪ್ರವೇಶ ಮಾಡಿದಾಗ ಯಾವ ವಸ್ತು ಕಣ್ಣಿಗೆ ಕಾಣುತ್ತದೋ ಅದನ್ನು ತೆಗೆದುಕೊಂಡು ಹೋಗು ಎನ್ನುವ ನುಡಿಯನ್ನು ಕೇಳಿ, ಕೈಗೆ ಸಿಕ್ಕಿದ ಬೆತ್ತದ ಬುಟ್ಟಿಯನ್ನು ಹೊತ್ತು ತರುತ್ತಾರೆ. ನಡೆದುಕೊಂಡು ಬರುವಾಗ ಪೆಟ್ಟಿಗೆ ಭಾರವಾಗುವುದಕ್ಕೆ ಪ್ರಾರಂಭವಾಗಿ ಬಂಡೆಕಲ್ಲಿನ ಮೇಲೆ ಇಟ್ಟು ವಿಶ್ರಾಂತಿ ಪಡೆದು, ಪುನಃ ಅಲ್ಲಿಂದ ತೆಗೆಯಲು ಸಾಧ್ಯವಾಗದೇ ಪೆಟ್ಟಿಗೆ ಬಿಚ್ಚಿನೋಡುತ್ತಾರೆ. ಅಲ್ಲಿದ್ದ ಗಣಪತಿ ಮೂರ್ತಿಯನ್ನು ಅಲ್ಲಿಯೇ ಪ್ರತಿಷ್ಠಾಪಿಸಿ, ಭಾರವಾಗಿ ಇಳಿಸಿದ ಕಾರಣ ಭಾರಾಳಿ ಎನ್ನುವ ಹೆಸರಿಟ್ಟು ಖ್ಯಾತಿ ಪಡೆಯಿತು. ಉಳಿದ ಬೆಳ್ಳಿಯ ಗೆಜ್ಜೆಯನ್ನು ಹಿಡಿದು ಮಂದಾರ್ತಿ ಸ್ಥಳಕ್ಕೆ ಬಂದಾಗ ಗೆಜ್ಜೆ ಹಿಡಿದವರು ನರ್ತಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ಆಗ ದೇವರ ನುಡಿಯಂತೆ, ಸೂರ್ಗೋಳಿ ಅಂತುವಿನಿಂದ ಪ್ರಾರಂಭವಾದ ಗೆಜ್ಜೆ ಸೇವೆ ಅಥವಾ ಬೆಳಕಿನ ಸೇವೆ ಇಂದು ಭಕ್ತರ ಹರಕೆಯನ್ನು ತೀರಿಸುತ್ತ ಬಂದಿದೆ.

ಫೊಟೊ ಕೃಪೆ : ನಾಗೇಶ್ ಆಚಾರ್ಯ
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಶಂಕರನಾರಾಯಣ ಉಪಾಧ್ಯಾಯ(2/23/2016)
ಬಹಳ ಉತ್ತಮ ಪ್ರಯತ್ನ. ಸಾಧ್ಯವಿದ್ದಲ್ಲಿ ಅಪರೂಪದ ಪೌರಾಣಿಕ ಪ್ರಸಂಗಗಳು ನಿಮ್ಮಿಂದ ಈ ರೂಪದಲ್ಲಿ ಹೊರಬರಲಿ. ಧನ್ಯವಾದಗಳು
Swathi Poojary(3/6/2014)
Superb...
ಪ್ರಸ೦ಗಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ