ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ವಾದನಗಳ ಸಮ್ಮಿಶ್ರಣ.. ಕಲಾಸಕ್ತರಿಗೆ ರಸದೌತಣ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಡಿಸೆ೦ಬರ್ 22 , 2013
ಡಿಸೆ೦ಬರ್ 22, 2013

ವಾದನಗಳ ಸಮ್ಮಿಶ್ರಣ.. ಕಲಾಸಕ್ತರಿಗೆ ರಸದೌತಣ

ಶಿರಸಿ ಮದ್ದಲೆ, ಚಂಡೆ, ಕೊಳಲು, ತಬಲಾ, ಹೀಗೆ ವಿವಿಧ ವಾದನಗಳ ಸಮ್ಮಿಶ್ರಣ ಜತೆಯಲ್ಲಿ ಯಕ್ಷಗಾನದ ಭಾಗವತಿಕೆ ದ್ವಂದ್ವ ಹಾಡುಗಳನ್ನು ಒಳಗೊಂಡ ಯಕ್ಷನಾದ ವೆಭವ ಕಾರ್ಯಕ್ರಮ ಕಲಾ ಪ್ರಕಾರದ ಹೊಸದೊಂದು ರಸದೌತಣ ನೀಡುವಲ್ಲಿ ಯಶಸ್ವಿಯಾಯಿತು. ತಾಲೂಕಿನ ಯಡಳ್ಳಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಇಂಥದ್ದೊಂದು ಅಪರೂಪದ ಕಾರ್ಯಕ್ರಮ ಏರ್ಪಾಟಾಗಿತ್ತು.

ಒಂದೇ ವೇದಿಕೆಯಲ್ಲಿ ಒಂದೇ ಸಮಯದಲ್ಲಿ ಈ ಎಲ್ಲ ಕಲಾ ಪ್ರಕಾರಗಳ ಕಲೆ ಸವಿ ಸವಿಯಲು ಕಲಾಸಕ್ತರಿಗೆ ಅವಕಾಶವಾಯಿತು. ಶ್ರೀಪಾದರಾವ್ ಕಲ್ಗುಂಡಿಕೊಪ್ಪ ಫೌಂಡೇಶನ್, ಜನನಿ ಮ್ಯೂಸಿಕ್ ಸಂಸ್ಥೆ, ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ಸಹಯೋಗದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.

ಯಕ್ಷಗಾನ ಭಾಗವತಿಕೆಯ ದಿಗ್ಗಜರಾದ ಸುಬ್ರಹ್ಮಣ್ಯ ಧಾರೇಶ್ವರ ಹಾಗೂ ಕೊಳಗಿ ಕೇಶವ ಹೆಗಡೆಯವರ ಸುಮಧುರ ಕಂಠದಲ್ಲಿ ಭಾಗವತಿಕೆಯೊಂದಿಗೆ ಆರಂಭಗೊಂಡ ಯಕ್ಷನಾದ ವೆಭವದಲ್ಲಿ ಸಂದರ್ಭಕ್ಕೆ ತಕ್ಕಂತೆ ಕೊಳಲಿನ ಸುಮಧುರತೆ ಹರಡಿದವರು ಕಲ್ಲಾರೆಮನೆ ಪ್ರಕಾಶ ಹೆಗಡೆ. ಆ ಸುಮಧುರತೆಗೆ ತಾಳ ಲಯದಲ್ಲಿ ಎರಿಳಿತಗಳ ಬೊಲ್‌ಗಳನ್ನು ತಬಲಾದಲ್ಲಿ ಖ್ಯಾತ ತಬಲಾವಾದಕ ಲಕ್ಷ್ಮೀಶ್ ರಾವ್ ಕಲ್ಗುಂಡಿಕೊಪ್ಪ ನುಡಿಸಿದರು. ಮದ್ದಲೆ ವಾದನದಲ್ಲಿ ಮೂರು ಮದ್ದಲೆಗಳೊಂದಿಗೆ ಸಹಕರಿಸಿದವರು ಮದಂಗ ವಾದನ ಖ್ಯಾತಿಯ ಯಲ್ಲಾಪುರ ಶಂಕರ ಭಾಗವತರು. ಚಂಡೆ ವಾದನದಲ್ಲಿ ಮೆನವಿರೇಳಿಸುವಂತೆ ನುಡಿಸಿದವರು ಇಡಗುಂಜಿ ಕಷ್ಣಯಾಜಿ. ಇವೆಲ್ಲ ಸೇರಿದ್ದ ಪ್ರೇಕ್ಷಕರು ವಿನೂತನ ಕಲಾ ವಿಶೇಷತೆಯ ಸೊಬಗನ್ನು ಸವಿದರು.

ಯಕ್ಷನಾದ ವೆಭವವದ ಪೂರ್ವಭಾವಿಯಾಗಿ ಯುವಗಾಯಕಿ ಬೆಂಗಳೂರಿನ ಅಮತಾರಾವ್ ಸಂಗೀತ ಕಛೇರಿ ನಡೆಸಿಕೊಟ್ಟು ಜನಮನ ಗೆದ್ದರು. ಆರಂಭದಲ್ಲಿ ರಾಗ್-ಭೀಮ್‌ಪಲಾಸ್‌ನ್ನು ಪ್ರಸ್ತುತಗೊಳಿಸಿ ನಂತರ ಭಜನ್ ಹಾಗೂ ವಚನಗಳನ್ನು ಹಾಡಿದರು. ಇದೇ ಸಂದರ್ಭದಲ್ಲಿ ಹಾರ್ಮೋನಿಯಂನಲ್ಲಿ ಭರತ ಹೆಗಡೆ ಹೆಬ್ಬಲಸು ಹಾಗೂ ತಬಲಾದಲ್ಲಿ ವಿಜಯೇಂದ್ರ ಹೆಗಡೆ ಅಜ್ಜೀಬಳ ಸಾಥ್ ನೀಡಿದರು. ಇದಕ್ಕೂ ಪೂರ್ವದಲಿ ್ಲನಡೆದ ಸಿತಾರ ವಾದನದಲ್ಲಿ ಸಿತಾರ್ ವಾದಕ ಶೀಗೆಹಳ್ಳಿಯ ಭಾರ್ಗವ ಹೆಗಡೆ ಆರಂಭದಲ್ಲಿ ರಾಗ್ ಮಧುವಂತಿಯನ್ನು ಪ್ರಸ್ತುತ ಗೊಳಿಸಿ, ನಂತರ ರಾಗ್ ಮಿಶ್ರ ಶಿವರಂಜಿನಿಯಲ್ಲಿ ದುನ್‌ನ್ನು ಸಾದರ ಪಡಿಸಿದರು. ಸಂಘಟಕ ಗಿರಿಧರ ಕಬ್ನಳ್ಳಿ ನಿರೂಪಿಸಿದರು.

ಕೃಪೆ : http://www.vijaykarnataka.com

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ