ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಮಹಿಳೆಯರ ಶ್ರೀದೇವಿ ಮಹಾತ್ಮೆ ಶ್ಲಾಘನೀಯ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ನವ೦ಬರ್ 25 , 2013
ನವ೦ಬರ್ 25 , 2013

ಮಹಿಳೆಯರ ಶ್ರೀದೇವಿ ಮಹಾತ್ಮೆ ಶ್ಲಾಘನೀಯ

ಮಂಗಳೂರು : ಯಕ್ಷಗಾನವನ್ನು ಗಂಡು ಕಲೆ ಎಂದು ಕರೆಯುವುದು ರೂಢಿ. ಆದರೆ ಅತಿ ಹೆಚ್ಚು ಗಂಡು ಪಾತ್ರಗಳಿರುವ ಶ್ರೀ ದೇವಿ ಮಹಾತ್ಮೆಯನ್ನು ಯಕ್ಷಾರಾಧನಾ ಕೇಂದ್ರದ ಮಹಿಳೆಯರೇ ಅತ್ಯಂತ ಉತ್ಕೃಷ್ಟ ರೀತಿಯಲ್ಲಿ ನಿರ್ವಹಿಸಿ ಮನ್ನಣೆಗೆ ಪಾತ್ರರಾಗಿರುವುದು ಅಚ್ಚರಿಯ ವಿಷಯ ಎಂದು ಭಾಗವತ ಪಟ್ಲ ಸತೀಶ ಶೆಟ್ಟಿ ಹೇಳಿದರು.

ಬ್ರಹ್ಮರಕೂಟ್ಲು ಶ್ರೀ ರಾಮ ಭಜನಾ ಮಂದಿರದಲ್ಲಿ ಮಹಿಳೆಯರ ಶ್ರೀ ದೇವಿಮಹಾತ್ಮೆ ಯಕ್ಷಗಾನ ಡಿವಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯಕ್ಷಾರಾಧನಾ ಕಲಾ ಕೇಂದ್ರ ಉರ್ವ ಇದರ ಐದನೆ ವರ್ಪಾಚರಣೆ ಪ್ರಯುಕ್ತ ಸಂಸ್ಥೆಯ ಮಹಿಳಾ ಕಲಾವಿದೆಯರಿಂದ ಶ್ರೀ ದೇವಿ ಮಹಾತ್ಮೆ ಆಟ ಜರುಗಿದ್ದು, ಇದೀಗ ಸಿಡಿ ರೂಪದಲ್ಲಿ ಬರುತ್ತಿದೆ. ಯಕ್ಷಗಾನ ಬಯಲಾಟ ಅಕಾಡೆಮಿ ಇದರ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್ ಬಿಡುಗಡೆ ಮಾಡಿ, ಮಹಿಳೆಯರ ಯಕ್ಷಗಾನ ಪ್ರದರ್ಶನವನ್ನು ತಾವು ಸಂಪೂರ್ಣ ಕುಳಿತು ನೋಡಿದ್ದು, ಕಲಾವಿದೆಯರಿಗೆ ಇದೊಂದು ಸವಿ ನೆನಪಾಗಲಿದೆ ಎಂದು ಬಣ್ಣಿಸಿದರು.

ಜ್ಯೋತಿಗುಡ್ಡೆಯ ತರಿಕಿಟ ಕಲಾ ಕಮ್ಮಟ ಇದರ 96ನೇ ತಿಂಗಳ ಇರುಳು ಕಾರ್ಯಕ್ರಮದಲ್ಲಿ ಡಿವಿಡಿ ಬಿಡುಗಡೆ ಏರ್ಪಡಿಸಲಾಗಿತ್ತು. ಕಲಾ ಪೋಷಕರಾದ ಟಿ.ಕೆ.ರಾವ್, ವೀಣಾ ಕೆ. ರಾವ್, ತರಿಕಿಟ ಕಲಾ ಕಮ್ಮಟದ ಉದಯ ಜ್ಯೋತಿಗುಡ್ಡೆ, ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಶಶಿಧರ ಬ್ರಹ್ಮರಕೂಟ್ಲು, ಯಕ್ಷಾರಾಧನಾ ಕಲಾ ಕೇಂದ್ರದ ಟ್ರಸ್ಟಿ ರತ್ನಾಕರ ರಾವ್, ಗೋವಿಂದ ದಾಸ ಯಕ್ಷಗಾನ ಕಲಾಕೇಂದ್ರದ ಗುರು ಪೂರ್ಣಿಮಾ ವೈ. ರೈ ಉಪಸ್ಥಿತರಿದ್ದರು.

ಯಕ್ಷಾರಾಧನಾ ಕಲಾ ಕೇಂದ್ರದ ಅಧ್ಯಕ್ಷೆ ವಿದುಷಿ ಸುಮಂಗಲಾ ರತ್ನಾಕರ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀನಾಥ ವಾಮದಪದವು ವಂದಿಸಿದರು. ನಂತರ ಗೋವಿಂದ ದಾಸ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಶಶಿಪ್ರಭಾ ಪರಿಣಯ ಯಕ್ಷಗಾನ ಕಾರ್ಯಕ್ರಮ ನಡೆಯಿತು

ಕೃಪೆ : http://vijaykarnataka.com


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ