ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಇಂದಿನಿಂದ `ಯಕ್ಷಗಾನ ಜ್ಞಾನಯಜ್ಞ` ಸಪ್ತಾಹ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ನವ೦ಬರ್ 17 , 2013
ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆ ನೀಗಿಸುವ ವಿನೂತನ ಪ್ರಯತ್ನಕ್ಕೆ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಮುಂದಾಗಿದ್ದಾರೆ.

'ಯಕ್ಷಗಾನ ಜ್ಞಾನಯಜ್ಞ' ಎಂಬ ತಾಳಮದ್ದಳೆ ಸಪ್ತಾಹವನ್ನು ನವೆಂಬರ್ 15ರಿಂದ 21ರವರೆಗೆ ಆಯೋಜಿಸಿದ್ದಾರೆ.

ಯಕ್ಷಪ್ರೇಮಿಗಳೇ ಇದಕ್ಕೆ ದಾತಾರರು. ನಾಗೂರು ಸಮೀಪದ ಶ್ರೀ ಗೋಪಾಲಕೃಷ್ಣ ಕಲಾಮಂದಿರಲ್ಲಿ ನಿರ್ಮಿಸಿರುವ ದಿ.ತೆಕ್ಕಟೆ ಆನಂದ ಮಾಸ್ತರ್ ಸ್ಮರಣ ವೇದಿಕೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕಿರಿಮಂಜೇಶ್ವರ, ನಾಗೂರು ಹಾಗೂ ಸುತ್ತಲಿನ ಪ್ರದೇಶಗಳ ನಾಗರಿಕರೇ ಈ ಪ್ರಯತ್ನಕ್ಕೆ ಸಹಕಾರಿಗಳಾಗಿ ನಿಂತಿದ್ದಾರೆ.

ನವೆಂಬರ್ 15ರಂದು ಸಾಯಂಕಾಲ 5 ಗಂಟೆಗೆ ಸಪ್ತಾಹ ಆರಂಭಗೊಳ್ಳಲಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಿರಿಮಂಜೇಶ್ವರ ಅಗಸ್ತ್ಯೇಶ್ವರ ದೇಗುಲದ ಮೊಕ್ತೇಸರ ಕೆ.ಉಮೇಶ ಶ್ಯಾನಭೋಗ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ತೆಂಕು-ಬಡಗು ತಿಟ್ಟಿನ ಖ್ಯಾತ ಯಕ್ಷನುಡಿಗಾರ ಸಿದ್ದಕಟ್ಟೆ ಚನ್ನಪ್ಪ ಶೆಟ್ಟಿ, ತೆಕ್ಕಟೆಯವರ ಸ್ಮರಣೀಯನುಡಿಯಾಡಲಿದ್ದಾರೆ.

ಪ್ರಸಂಗ-ಕಲಾವಿದರು : ನವೆಂಬರ್ 15, ಸಾಯಂಕಾಲ 5ರಿಂದ ರಾತ್ರಿ 8 ಕೃಷ್ಣಸಂಧಾನ. ಹಿಮ್ಮೇಳದಲ್ಲಿ ಧಾರೇಶ್ವರ, ರಾಘವೇಂದ್ರ ಮಯ್ಯ, ಶಂಕರ ಭಾಗವತ, ಶಿವಾನಂದ ಕೋಟ. ಮುಮ್ಮೇಳದಲ್ಲಿ ಸಿದ್ದಕಟ್ಟೆ ಚನ್ನಪ್ಪ ಶೆಟ್ಟಿ, ಗಣಪತಿ ಭಟ್ ಸುಂಕದಗುಂಡಿ, ಆರ್ಗೋಡ್ ಮೋಹನದಾಸ್ ಶೆಣೈ. ನವೆಂಬರ್ 16, ರಾವಣವಧೆ. ಸಂಜೆ 4.30ರಿಂದ ರಾತ್ರಿ 7.30. ಹಿಮ್ಮೇಳದಲ್ಲಿ ಧಾರೇಶ್ವರ, ಸರ್ವೇಶ್ವರ ಹೆಗಡೆ ಮೂರೂರು, ಶಂಕರ ಭಾಗವತ, ಶಿವಾನಂದ ಕೋಟ. ಮುಮ್ಮೇಳದಲ್ಲಿ ಮೇಲುಕೋಟೆ ಉಮಾಕಾಂತ ಭಟ್ ಕೆರೆಕೈ, ಜಬ್ಬಾರ್ ಸಮೋ, ಆರ್ಗೋಡ್ ಮೋಹನ್ದಾಸ್ ಶೆಣೈ, ವೈಕುಂಠ ಹೇರಳೆ ಸಾಲಿಗ್ರಾಮ.

ನವೆಂಬರ್ 17, ಸಂಜೆ, 4.30ರಿಂದ 7.30 ವಾಲಿಮೋಕ್ಷ. ಹಿಮ್ಮೇಳದಲ್ಲಿ ಧಾರೇಶ್ವರ, ಸುರೇಶ್ ಶೆಟ್ಟಿ, ಶಂಕರ ಭಾಗವತ, ಶಿವಾನಂದ ಕೋಟ.ಮುಮ್ಮೇಳದಲ್ಲಿ ಡಾ.ಎಂ.ಪ್ರಭಾಕರ ಜೋಶಿ, ಮೇಲುಕೋಟೆ ಉಮಾಕಾಂತ ಭಟ್, ಅಶೋಕ್ ಭಟ್ ಉಜಿರೆ, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ. ನವೆಂಬರ್ 18, ಸಂಜೆ 5ರಿಂದ 8 ಕರ್ಣಪರ್ವ. ಹಿಮ್ಮೆಳದಲ್ಲಿ ವಿದ್ವಾನ್ ಗಣಪತಿ ಭಟ್, ಸುನೀಲ ಭಂಡಾರಿ ಕಡತೋಕ, ರಾಮಕೃಷ್ಣ ಮಂದಾರ್ತಿ. ಮುಮ್ಮೇಳದಲ್ಲಿ ರಾಮಚಂದ್ರ ನಿಸ್ರಾಣಿ, ಅಶೋಕ ಭಟ್ ಉಜಿರೆ, ಸಿದ್ದಕಟ್ಟೆ ವಿಶ್ವನಾಥಶೆಟ್ಟಿ,ವೈಕುಂಠ ಹೇರಳೆ.

ನ.19 ಸಂಜೆ 5ರಿಂದ 8 ಅಂಗದ ಸಂಧಾನ. ಹಿಮ್ಮೇಳದಲ್ಲಿ ಹೆರಂಜಾಲ ಗೋಪಾಲ ಗಾಣಿಗ, ಶಂಕರ ಭಟ್ ಬ್ರಹ್ಮೂರು, ಪರಮೇಶ್ವರ ಭಂಡಾರಿ ಕರ್ಕಿ, ರಾಮಕೃಷ್ಣ ಮಂದಾರ್ತಿ. ಮುಮ್ಮೇಳದಲ್ಲಿ ಡಾ.ಎಂ.ಪ್ರಭಾಕರ ಜೋಶಿ, ವಿಶ್ವೇಶ್ವರ ಭಟ್ ಸುಣ್ಣಂಬಳ, ಆರ್ಗೋಡ್ ಮೋಹನ್ದಾಸ್ ಶೆಣೈ. ನ.20 ಸಂಜೆ 5ರಿಂದ ರಾತ್ರಿ 8 ಭೀಷ್ಮಾಭಿದಾನ. ಹಿಮ್ಮೇಳದಲ್ಲಿ ಸುರೇಶ್ ಶೆಟ್ಟಿ, ಪರಮೇಶ್ವರ ಭಂಡಾರಿ, ರಾಮದಾಸ ಮರವಂತೆ. ಮುಮ್ಮೇಳದಲ್ಲಿ ರಾಧಾಕೃಷ್ಣ ಕಲ್ಚರ, ವಾಸುದೇವ ರಂಗ ಭಟ್, ವೈಕುಂಠ ಹೇರಳೆ. ಸುಜಯೀಂದ್ರ ಹಂದೆ.

ನ21 ಸಪ್ತಾಹದ ಕೊನೆಯ ದಿನವಾಗಿದ್ದು ಸಂಜೆ 4ರಿಂದ ರಾತ್ರಿ8ರವರೆಗೆ ಸುಧನ್ವ ಮೋಕ್ಷ.

ಹಿಮ್ಮೇಳದಲ್ಲಿ ಧಾರೇಶ್ವರ, ರಾಘವೇಂದ್ರ ಮಯ್ಯ, ಪರಮೇಶ್ವರ ಭಂಡಾರಿ, ಶಿವಾನಂದ ಕೋಟ. ಮುಮ್ಮೇಳದಲ್ಲಿ ಡಾ.ಎಂ.ಪ್ರಭಾಕರ ಜೋಶಿ, ಅಶೋಕ ಭಟ್ ಉಜಿರೆ, ವಾಸುದೇವ ರಂಗಭಟ್, ಸದಾನಂದ ಇಡುವಾಣಿ ಪಾಲ್ಗೊಳ್ಳಲಿದ್ದಾರೆ. ನವೆಂಬರ್ 17ರಂದು ತೆಕ್ಕಟೆ ಆನಂದ ಮಾಸ್ತರ ಅವರ ಪತ್ನಿ ಸುನಂದ ಶೆಣೈ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಭಾಗವಹಿಸುವರು.

ಕಾರ್ಯಕ್ರಮದ ಹೆಚ್ಚಿನ ಮಾಹಿತಿಗೆ. ಸುಬ್ರಹ್ಮಣ್ಯ ಧಾರೇಶ್ವರ- 9448321871, 9986162144ಗೆ ಸಂಪರ್ಕಿಸಬಹುದು.



ಕೃಪೆ : http://www.kannadaprabha.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ