ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ವ್ಯಕ್ತಿ ವಿಶೇಷ
Share
ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಸೆಪ್ಟೆ೦ಬರ್ 24 , 2013

ಆತ್ಮೀಯ ವಲಯದಲ್ಲಿ ಮತ್ತು ಯಕ್ಷಗಾನ ಕಲಾವಿದರ ಗಡಣದಲ್ಲಿ ``ಉದಯಣ್ಣ`` ಎಂದೇ ಚಿರಪರಿಚಿತರಾದ ಪ್ರೋ. ಎಸ್. ವಿ ಉದಯ ಕುಮಾರ ಶೆಟ್ಟರು ಬಹುಮುಖ ಪ್ರತಿಭೆಯವರು. ವ್ರತ್ತಿಯಲ್ಲಿ ಮಣಿಪಾಲದ ಪ್ರತಿಷ್ಟಿತ ತಾಂತ್ರಿಕ ಕಾಲೇಜಾದ ಎಂ. ಐ. ಟಿ ಯಲ್ಲಿ ಪ್ರಾದ್ಯಾಪಕರಾದ ಇವರು ಪ್ರವ್ರತ್ತಿಯಲ್ಲಿ ಯಕ್ಷಗಾನ ಭಾಗವತರು. ವೇಷದಾರಿ, ಚಂಡೆವಾದಕರು, ಸ್ವತಹ ಯಕ್ಷಗಾನ ಲೇಕಕರು ಚಿಂತಕಕರು ಮತ್ತು ವಿಮರ್ಶಕರು. ಎತ್ತಣ ಮಾಮರ ಎತ್ತಣ ಕೋಗಿಲೆ ಅಂದಹಾಗೆ ಇಂಜಿನೀಯರಿಂಗ್ ನಲ್ಲಿ ಸ್ನಾತಕೊತ್ತರ ಎಂ. ಟೆಕ್. ಪದವಿ ಪಡೆದ ಇವರು ಒಂದಕೊಂದು ಸಂಬಂದವಿಲ್ಲದ ಯಕ್ಷಗಾನ ಕ್ಷೇತ್ರದಲ್ಲಿ ಕೃಷಿ ಮಾಡಿದ್ದು ಒಂದು ವಿಶೇಷತೆ. ಅವಿಭಜಿತ ದ. ಕ. ಜಿಲ್ಲೆಯಲ್ಲಿ ಇಂಜಿನೀಯರೊಬ್ಬರು ಯಕ್ಷಗಾನ ಕ್ಷೇತ್ರದಲ್ಲಿ ಈ ಮಟ್ಟದ ಸಾದನೆ ಮಾಡಿದ್ದು ಬೇರೆಲ್ಲಿಯೂ ಇಲ್ಲ ಎನ್ನ ಬಹುದಾಗಿದೆ. ಬಡಗುತಿಟ್ಟಿನ ಹವ್ಯಾಸಿ ಯಕ್ಷಗಾನ ರಂಗಭೂಮಿಯ ದಶಾವತಾರಿ ಎಂದು ಜನ ಇವರನ್ನು ಗುರುತಿಸಿದ್ದಾರೆ.

ಬಾಲ್ಯ , ಶಿಕ್ಷಣ

ಉಡುಪಿ ಜಿಲ್ಲೆ ಮಂದಾರ್ತಿ ಸಮೀಪ ಶಿರೂರಿನಲ್ಲಿ ವಿದ್ಯಾವಂತ ಬಂಟ ಕುಟುಂಬದಲ್ಲಿ 1965ರಲ್ಲಿ ಜನಿಸಿದ ಇವರು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಮತ್ತು ಬಾರಕೂರಿನ ನ್ಯಾಷನಲ್ ಜ್ಯೂನಿಯರ್ ಕಾಲೇಜಿನಲ್ಲಿ ವಿದ್ಯಾಬ್ಯಾಸ ಮಾಡಿ 1983ರಲ್ಲಿ ಪಿ. ಯು. ಸಿ. ಯಲ್ಲಿ ವಿಜ್ನಾನ ವಿಭಾಗದಲ್ಲಿ ಶೇ. 98 ಅಂಕ ಪಡೆದು ದಾವಣಗೆರೆಯ ಸರ್ಕಾರಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನೀಯರಿಂಗ್ ನಲ್ಲಿ ಪ್ರವೇಶ ಪಡೆದುಕೊಂಡರು. ಬಳಿಕ ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂ. ಟೆಕ್. ಪದವಿ ಪಡೆದು ಕಳೆದ 25 ವರ್ಷದಿಂದ ಮಣಿಪಾಲದ ಎಂ. ಐ. ಟಿ. ಕಾಲೇಜಿನಲ್ಲಿ ಮೆಕ್ಯಾನಿಕಲ್, ಇಂಜಿನೀಯರಿಂಗ್ ವಿಭಾಗದಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತಿದ್ದಾರೆ. ಪ್ರಾಥಮಿಕ ಶಾಲಾ ಅದ್ಯಾಪಕರಾದ ಇವರ ತಂದೆಯವರ ಆರು ಮಂದಿ ಮಕ್ಕಳಲ್ಲಿ ಕೊನೆಯವರಾದ ಇವರ ಅಣ್ಣಂದಿರೆಲ್ಲ ಉನ್ನತ ಶಿಕ್ಷಣ ಪಡೆದು ಆ ಕಾಲದಲ್ಲೇ ವಿದೇಶದಲ್ಲಿ ನೆಲೆ ನಿಂತವರು ಆದರೆ ಇವರು ಮಾತ್ರ ಯಕ್ಷಗಾನ ಕಲೆ ಮತ್ತು ಬಾರತೀಯ ಸಂಸ್ಕ್ರತಿಯ ಮೇಲಿನ ಪ್ರೀತಿಯಿಂದ ಬೆಂಗಳೂರಿನಲ್ಲಿ ದೊರೆತ ಉನ್ನತ ಹುದ್ದೆಯನ್ನು ಬಿಟ್ಟು ಊರಿಗೆ ಸಮೀಪ ನೆಲೆ ನಿಲ್ಲುವ ಇರಾದೆಯಿಂದ ಇಂದಿಗೂ ಮಣಿಪಾಲದಲ್ಲೇ ನೆಲೆಸಿದ್ದಾರೆ.

ಕಲೆಯ ಪ್ರಬಾವ ಕೆಲವರಿಗಾದರೆ ಕಲೆಯ ಆಕರ್ಷಣೆ ಹೆಚ್ಚಿನವರಿಗೆ. ಉದಯ ಕುಮಾರ ಶೆಟ್ಟರ ಮೇಲೆ ಯಕ್ಷಗಾನ ಪ್ರಬಾವ ಬೀರಿತೋ ಅಥವಾ ಇವರೇ ಇದರಿಂದ ಆಕರ್ಷಿಸಿತರಾದರೋ ಒಟ್ಟಂತೂ ಶೆಟ್ಟರಿಗೂ ಯಕ್ಷಗಾನಕ್ಕೂ ಇಂದು ಬಹಳ ನಂಟು. ಶೆಟ್ಟರ ಹೆಸರನ್ನು ಹೇಳಿದಾಗ ಇವರೊಬ್ಬ ಇಂಜಿನೀಯರ್ ಭಾಗವತರೆಂದು ಬಹಳಷ್ಟು ಮಂದಿ ಗುರುತಿಸುತ್ತಾರೆ. ಇವರ ತಂದೆ ಅದ್ಯಾಪಕರಾಗಿದ್ದು ಹವ್ಯಾಸಿ ಭಾಗವತರು ಬಹಳಷ್ಟು ಬಡಗುತಿಟ್ಟಿನ ಕಲಾವಿದರಿಗೂ ಇವರ ಮನೆ ಆಶ್ರಯತಾಣವಾಗಿತ್ತು. ಮಂದಾರ್ತಿ ಪರಿಸರದಲ್ಲಿ ಹುಟ್ಟಿದ ಇವರಿಗೆ ಸಹಜವಾಗಿ ಯಕ್ಷಗಾನ ನೋಡುವ ಆಸಕ್ತಿ ಮೂಡಿತು. 5ನೇ ತರಗತಿಯಲ್ಲೇ 1975ರಲ್ಲಿ ಹಳ್ಳಾಡಿ ಸುಬ್ರಾಯ ಮಲ್ಯರ ನಿರ್ದೇಶನದಲ್ಲಿ ಕರ್ಣಾರ್ಜುನ ಕಾಳಗದ ಕರ್ಣನಾಗಿ ಬಾಲ ಕಲಾವಿದನಾಗಿ ಗಮನ ಸೆಳೆದರು. ಬಳಿಕ ಸ್ರೀವೇಷದಾರಿಯಾಗಿ ಗುರುತಿಸಿಕೊಂಡ ಇವರು ಪ್ರಮೀಳೆ, ಮೀನಾಕ್ಷಿ, ಶಶಿಪ್ರಭೆ ಮುಂತಾದ ಕಸೆವೇಷಗಳಲ್ಲಿ ರಂಜಿಸಿದರು. ಕುಂಜಾಲು ಶೈಲಿಯ ಪ್ರಮುಖ ಭಾಗವತರಾದ ದಿ. ನೆಲ್ಲೂರು ಮರಿಯಪ್ಪಾಚಾರ್ ಅವರ ಭಾಗವತಿಕೆಯಿಂದ ಪ್ರೇರೇಪಿತರಾದ ಇವರು ಭಾಗವತಿಕೆ ಕಲಿಯಬೇಕೆಂಬ ಹಂಬಲಿಕೆಯನ್ನು ಉಡುಪಿ ಯಕ್ಷಗಾನ ಕೇಂದ್ರದ ಅಂದಿನ ವಿದ್ಯಾರ್ಥಿಯಾಗಿದ್ದ ಸಂಜೀವ ಸುವರ್ಣರ ಮುಂದಿಟ್ಟರು. ಇವರ ಆಸಕ್ತಿಯನ್ನು ಗಮನಿಸಿದ ಸುವರ್ಣರು ಶೆಟ್ಟರನ್ನು ಆಗ ವಯೋವೃಧ್ಧ್ದರಾದ ನೀಲಾವರ ರಾಮಕ್ರಷ್ಣಯ್ಯರ ಮನೆಗೆ ದಾರಿತೋರಿಸಿದರು. ಕೇವಲ ಒಂದು ತಿಂಗಳು ಮಣಿಪಾಲದಿಂದ ಬಾರಕೂರಿನ ಗುರುಗಳ ಮನೆಗೆ ಹೋಗಿ ತಾಳಗಳನ್ನು ಅಬ್ಯಾಸ ಮಾಡಿದರು. ಉಳಿದದ್ದೆಲ್ಲಾ ಕಂಡು ಕೇಳಿದ್ದೇ ಅನುಭವ.

ವೃತ್ತಿ , ಪ್ರವೃತ್ತಿ ಹಾಗೂ ಕಲಾಸೇವೆ

ಸಂಜೀವ ಸುವರ್ಣ, ಗೋರ್ಪಾಡಿ ವಿಠಲ ಪಾಟೀಲ್, ನೀಲಾವರ ರಾಮಕ್ರಷ್ಣಯ್ಯನವರನ್ನು ಕೃತಜ್ಞತೆಯಿ೦ದ ನೆನೆಯುವ ಶೆಟ್ಟರ ಭಾಗವತಿಕೆಯಲ್ಲಿ ನೆಲ್ಲೂರು ಮರಿಯಪ್ಪಾಚಾರ್ ಮತ್ತು ಹರಾಡಿ ಅಣ್ಣಪ್ಪ ಗಾಣಿಗರ ಭಾಗವತಿಕೆಯ ಛಾಯೆಯನ್ನು ಗುರುತಿಸ ಬಹುದು. ಆಕರ್ಷಕ ಮುಖ. ನೀಳಕಾಯದ ಅವರು ಭಾಗವತಿಕೆಗೆ ಕುಳಿತರೆಂದರೆ ಅದೊಂದು ಆಕರ್ಷಣೆ. ಮಂಗಳೂರು ಆಕಾಶವಾಣಿ, ಬೆಂಗಳೂರು ದೂರದರ್ಶನದಲ್ಲಿ ಇವರ ಭಾಗವತಿಕೆ ಪ್ರಸಾರವಾಗಿದೆ. ಬೆಂಗಳೂರು ದೂರದರ್ಶನದಲ್ಲಿ 1990ರಲ್ಲಿ ನೆಲ್ಲೂರು ಮರಿಯಪ್ಪಾಚಾರ್ ರೊಂದಿಗೆ ಬೀಷ್ಮವಿಜಯದಲ್ಲಿ ಇವರ ದ್ವಂದ್ವ ಭಾಗವತಿಕೆ ಪ್ರಸಾರವಾಗಿತ್ತು. ಹಿರಿಯ ಕಲಾವಿದರಾದ ಎಮ್. ಎಲ್. ಸಾಮಗ, ಡಿ. ಜಿ. ಹೆಗಡೆ. ಅರಾಟೆ ಮಂಜುನಾಥ, ನಾವುಂದ ಮಹಾಬಲಗಾಣಿಗರಂತ ಹಿರಿಯ ಕಲಾವಿದರು ಭಾಗವಹಿಸಿದ್ದರು. 1995ರಲ್ಲಿ ಪುನಹ ಐರೋಡಿ ಗೋವಿಂದಪ್ಪ, ರಾಮ ನಾಯರಿ, ಗೋಪಾಲಾಚಾರ್ ಒಂದಿಗೆ ಇವರ ಭಾಗವತಿಕೆಯ ರಾಜಾಯಯಾತಿ ಪ್ರಸಾರವಾಗಿತ್ತು. ಹಳೆಯ ಪೌರಾಣಿಕ ಪ್ರಸಂಗಗಳಲ್ಲಿ ಅಪಾರ ಹಿಡಿತ ಇವರ ಪದ್ಯಗಳಲ್ಲಿ ಗಮನಿಸಬಹುದಾಗಿದೆ.

ಬಡಗುತಿಟ್ಟಿನ ವಿಶೇಷ ಪ್ರಬೇದವಾದ ಜೋಡಾಟಗಳಲ್ಲಿ ಕಳೆದ 25 ವರ್ಷದಿಂದ ಎಂ. ಏಮ್. ಹೆಗ್ಡೆ, ಶ್ರೀದರ ಹಂದೆ, ಕಂದಾವರ ರಘುರಾಮ ಶೆಟ್ಟಿ, ಹಂದಾಡಿ ಸುಬ್ಬಣ್ಣ ಭಟ್ ರೊಂದಿಗೆ ಪ್ರಮುಖ ತೀರ್ಪುಗಾರರಾಗಿ ಭಾಗವಹಿಸಿ ಎರಡು, ಮೂರು, ಏಳು ಮೇಳಗಳ ಜೋಡಾಟದಲ್ಲಿ ಯಾವ ಮೇಳಕ್ಕೂ ಅನ್ಯಾಯವಾಗದಂತೆ ತೀರ್ಪುನೀಡಿ ಪತ್ರಿಕೆಗಳಲ್ಲಿ ವಿಮರ್ಶೆ ನೀಡಿದ್ದಾರೆ. ಯಕ್ಷಗಾನದ ಇತಿಹಾಸದಲ್ಲೇ ಪ್ರಥಮವೆಂಬಂತೆ ಭಾಗವತ ನಗರ ಸುಬ್ರಹ್ಮಣ್ಯ ಆಚಾರ್ ರೊಂದಿಗೆ ಮನೆ ಮನೆಗಳಿಗೆ ಹೋಗಿ ಯಕ್ಷಗಾನ ಹಾಡುಗಳನ್ನು ಹಾಡಿ ರಂಜಿಸಿ ಪ್ರಥಮ ಮಳೆಗಾಲದಲ್ಲೇ ನೂರು ಪ್ರಯೋಗ ಕಂಡು ಶತದಿನವನ್ನು ಆಚರಿಸಿ ದಾಖಲೆ ಮಾಡಿದ್ದಾರೆ.

ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟಿ
ಜನನ : ಜುಲೈ 15, 1965
ಜನನ ಸ್ಥಳ : ಶಿರೂರು ಗ್ರಾಮ, ಮ೦ದಾರ್ತಿ
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ : ಯಕ್ಷಗಾನ ಭಾಗವತರು. ವೇಷದಾರಿ, ಚಂಡೆವಾದಕರು, ಯಕ್ಷಗಾನ ಲೇಖಕರು , ಚಿಂತಕಕರು ಮತ್ತು ವಿಮರ್ಶಕರು.
ಪ್ರಶಸ್ತಿಗಳು:
  • 2009ರ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
  • ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ
  • ಬೈಕಾಡಿ ಕ್ರಷ್ಣಯ್ಯ ಸ್ಮಾರಕ ಯಕ್ಷಶ್ರೀ ಪ್ರಶಸ್ತಿ
  • ಹಲವಾರು ಸಂಘಸಂಸ್ಥೆ ಮತ್ತು ಮೇಳಗಳ ವೇದಿಕೆಯಲ್ಲಿ ಸನ್ಮಾನ
ಕಛೇರಿ ವಿಳಾಸ:
Dept of Mechanical, Automobile and Aero Engg M.I.T Manipal.

ಮನೆ ವಿಳಾಸ:
MANDIRA Mangala colony, Manipal

ಈ-ಮೇಲ್ : svuk_shiroor@yahoo.com
ಮೊಬೈಲ್ : 9449367729
ಸ್ಥಿರ ದೂರವಾಣಿ : 0820-2571630
ಸ್ವತ: ಲೇಖಕರಾದ್ ಇವರ ಯಕ್ಷಗಾನ ಸಂಬಂದಿ ಲೇಖನಗಳು ವಿವಿದ ಸ್ಮರಣ ಸಂಚಿಕೆಯ ಪುಟಗಳನ್ನು ಅಲಂಕರಿಸಿವೆ. ಯಕ್ಷಗಾನ ವಿಮರ್ಶಾಲೇಖನಗಳು ನಾಡಿನ ಹಲವು ಪ್ರಮುಖ ಪತ್ರಿಕೆಗಳಲ್ಲಿ ಪ್ರಸಾರವಾಗಿವೆ. ಸುಮಾರು 90ಕ್ಕೂ ಅದಿಕ ಬಡಗುತಿಟ್ತಿನ ಹಿರಿಯ ಕಲಾವಿದರ ಪರಿಚಯ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಳೆದ 25 ವರ್ಷಗಳಿಂದ ಪ್ರಸಾರಗೊಂಡಿವೆ. ವಿಜಯಕರ್ನಾಟಕ ಪತ್ರಿಕೆ ಪ್ರಾರಂಭದಿಂದಲೂ ಇವರ ಲೇಖನಗಳನ್ನು ಪ್ರಕಟಿಸುತ್ತಾ ಬಂದಿದೆ. ಯಕ್ಷಗಾನ ಕಮ್ಮಟ, ಗೋಷ್ಟಿಗಳಲ್ಲಿ ಇವರು ಮಂಡಿಸಿದ ಪ್ರಭಂದ ಅಪಾರ ಮನ್ನಣೆಗೆ ಪಾತ್ರವಾಗಿದೆ. ಯಕ್ಷಗಾನ ಮಾಸಪತ್ರಿಕೆ ಬಲ್ಲಿರೇನಯ್ಯ ಮತ್ತು ಉಡುಪಿಯ ತ್ರಿಕಣ್ಣೇಶ್ವರಿ ಮಹಿಮೆ ಮಾಸಪತ್ರಿಕೆಯಲ್ಲಿ ಅಂಕಣ ಬರಹಗಾರರಾಗಿಯೂ ಇವರು ಗುರುತಿಸಿಕೊಂಡಿದ್ದಾರೆ. ಹಲವಾರು ಸಂಘಸಂಸ್ಥೆಗಳಲ್ಲಿ ಸ್ವಯಂಸೇವಕರಾಗಿ ದುಡಿದ ಇವರು, ಸೀತಾನದಿ ಗಣಪಯ್ಯ ಶೆಟ್ತಿ ಪ್ರತಿಷ್ಟಾನದ ಉಪಾದ್ಯಕ್ಷರಾಗಿಯೂ. ಕುಂದಾಪುರದ ಎಂ. ಎಂ. ಹೆಗ್ಡೆ ಪ್ರತಿಷ್ಟಾನದ ಕಾರ್ಯದರ್ಶಿಯಾಗಿ. ಪಳ್ಳಿ ಸೋಮನಾಥ ಹೆಗ್ಡೆ ಸಂಸ್ಮರಣಾ ಸಮಿತಿ, ಮಂದಾರ್ತಿ ಹಾರಾಡಿ ರಾಮಗಾಣಿಗ ಪ್ರಶಸ್ತಿಯ ಸಲಹೆಗಾರರಾಗಿ, ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿ ಸದಸ್ಯನಾಗಿ, ಬ್ರಹ್ಮಾವರ ಅಜಪುರ ಕರ್ನಾಟಕ ಸಂಘದ ಸದಸ್ಯನಾಗಿ, ನೀಲಾವರ ಮಹಾಬಲ ಶೆಟ್ಟಿ ಸಂಸ್ಮರಣಾ ಸಮಿತಿ ಅದ್ಯಕ್ಷನಾಗಿ, ಕಲಾವಿದರಾದ ಜಲವಳ್ಳಿ ವೆಂಕಟೇಶರಾವ್. ರಾಮ ನಾಯರಿ, ಐರೋಡಿ ಗೋವಿಂದಪ್ಪ, ಅರಾಟೆ ಮಂಜುನಾಥ, ಕುಂಜಾಲು ರಾಮಕ್ರಷ್ಣ, ಕೋಡಿ ವಿಶ್ವನಾಥ ಗಾಣಿಗರ ಸನ್ಮಾನ ಸಮಿತಿ ಉಪಾದ್ಯಕ್ಷರಾಗಿ ಮಹತ್ತರ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿ , ಪುರಸ್ಕಾರಗಳು

ಕಲಾವಿದ, ಲೇಖಕ, ಸಂಪನ್ಮೂಲ ವ್ಯಕ್ತಿ, ಪತ್ರಕರ್ತರಲ್ಲದೆ ಬಡವರ ಬಗ್ಗೆ ವಿಶೇಷ ಕಾಳಜಿಯುಳ್ಳವರಾಗಿ, ಕಲಾವಿದರ ಒಡನಾಡಿಯಾಗಿ ಅವರ ಕಷ್ಟ ಸುಖಗಳಲ್ಲಿ ಸ್ಪಂದಿಸಿ ಮುಗ್ದ ಮನಸ್ಸುಗಳ ಮೆಚ್ಚುಗೆಗೆ ಪಾತ್ರರಾಗಿರುವ ಇವರಿಗೆ 2009ರ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ, ಬೈಕಾಡಿ ಕ್ರಷ್ಣಯ್ಯ ಸ್ಮಾರಕ ಯಕ್ಷಶ್ರೀ ಪ್ರಶಸ್ತಿ ಸಹಿತ ಹಲವಾರು ಸಂಘಸಂಸ್ಥೆ ಮತ್ತು ಮೇಳಗಳ ವೇದಿಕೆಯಲ್ಲಿ ಸನ್ಮಾನ ಸಂದಿದೆ. ಪತ್ನಿ ಇಬ್ಬರು ಪುತ್ರರೊಂದಿಗೆ ಮಣಿಪಾಲದ ಮಂಗಳಾನಗರದಲ್ಲಿ ವಾಸಿಸುವ ಇವರ ಹಿರಿಯ ಪುತ್ರ ಮಯೂರ್ ಮೂರನೇ ವರ್ಷದ ಇಂಜಿನೀಯರಿಂಗ್ ವಿದ್ಯಾರ್ಥಿ ಇನ್ನೊಬ್ಬ ಮಾಣಿಕ್ಯ ಶೆಟ್ಟಿ ದ್ವಿತೀಯ ಪಿ. ಯು. ಸಿ. ವ್ಯಾಸಂಗಮಾಡುತಿದ್ದಾನೆ.****************

ಉದಯ ಕುಮಾರ ಶೆಟ್ಟರವರ ಕೆಲವು ಭಾವಚಿತ್ರಗಳುಧರ್ಮಪತ್ನಿಯೊ೦ದಿಗೆ ಉದಯ ಕುಮಾರ ಶೆಟ್ಟರು

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
deepak j shetty(6/3/2014)
wow...its really nice article about uday shetty sir.... hats off to u sir...
subbu s nairy(10/12/2013)
nijavaagi olle lekhana.... yakshaganave naranaadigalalli thumbiruva ajathashatru... vrattiyalli proffesor..pravrattiyalli yaksha vimarshaka,swatha kalavuda...nyc job sir...keep it off
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ