ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಪಾರ್ತಿಸುಬ್ಬ ಯಕ್ಷಗಾನ ಕಲಾ ಕ್ಷೇತ್ರ ನಿರ್ಮಾಣ ತ್ವರಿತಕ್ಕೆ ನಿರ್ಧಾರ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಜುಲೈ 26 , 2013
ಕಾಸರಗೋಡು, ಜುಲೈ 26 , 2013

ಪಾರ್ತಿಸುಬ್ಬ ಯಕ್ಷಗಾನ ಕಲಾ ಕ್ಷೇತ್ರ ನಿರ್ಮಾಣ ತ್ವರಿತಕ್ಕೆ ನಿರ್ಧಾರ

ಕಾಸರಗೋಡು : ಯಕ್ಷಗಾನ ಕಲೆಯ ಕುಲಪತಿ ಪಾರ್ತಿಸುಬ್ಬರ ಹೆಸರಿನಲ್ಲಿ ಕುಂಬಳೆ ಮುಜಂಗಾವುವಿನಲ್ಲಿ ನಿರ್ಮಿಸುವ ಯಕ್ಷಗಾನ ಕಲಾಕ್ಷೇತ್ರದ ನಿರ್ಮಾಣ ತ್ವರಿತಗತಿಯಲ್ಲಿ ನಡೆಸಲು ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ನೇತೃತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಅಧ್ಯಯನ ಸಾಂಸ್ಕೃತಿಕ ಕೇಂದ್ರದ ನಿರ್ಮಾಣ ಕಾರ್ಯ ಕುಂಠಿತಗೊಂಡಿತ್ತು. ಕಟ್ಟಡ ನಿರ್ಮಾಣ ಅದಷ್ಟು ಬೇಗ ಪುನರರಾಂಭಿಸುವುದಕ್ಕಾಗಿ ಕ್ರಮ ಕೈಗೊಳ್ಳಲು ಸಭೆ ತೀರ್ಮಾನಿಸಿದೆ. ಕಲಾಕ್ಷೇತ್ರ ನಿರ್ಮಾ ಣಕ್ಕಾಗಿ ಅಂದಾಜು 44.50 ಲಕ್ಷ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ಸಾಂಸ್ಕೃತಿಕ ಇಲಾಖೆ 20ಲಕ್ಷ ರೂ. ಮಂಜೂರುಗೊಳಿಸಿದೆ. ಉಳಿದ ಮೊತ್ತ ಶಾಸಕರ ನಿಧಿಯಿಂದ ಲಭಿಸಲಿದೆ.

ಎರಡು ಅಂತಸ್ತಿನ ಕಟ್ಟಡವು ಸುಮಾರು 200 ಮಂದಿಗೆ ಕುಳಿತುಕೊಳ್ಳುವ ಸಭಾಂಗಣ, ವೇದಿಕೆ, ಮೆಕಪ್ ರೂಂ, ಗ್ರಂಥಾಲಾಯ, ಅಧ್ಯಯನ ಕೇಂದ್ರ, ಯಕ್ಷಗಾನ ತರಬೇತಿ ಕೇಂದ್ರ, ಅತಿಥಿಗೃಹ ಮುಂತಾದ ಸೌಕರ್ಯಗಳನ್ನು ಹೊಂದಿರುತ್ತದೆ. ಅರ್ಧದಲ್ಲಿರುವ ಕಟ್ಟಡ ನಿರ್ಮಾಣಕ್ಕಾಗಿ ಎಂಜಿನಿಯರ್ ಪರಿಶೀಲಿಸಿದ ನಂತರ ಕಾಮಗಾರಿ ಪುನರರಾಂಭಿಸಲಾಗುವುದು. ಸಭೆಯಲ್ಲಿ ಕಲಾಕ್ಷೇತ್ರ ಸಮಿತಿಗೆ ನೂತನವಾಗಿ ಹದಿನಾಲ್ಕು ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೇ ಆರು ಮಂದಿ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಕುಂಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಎಚ್.ರಮ್ಲಾ, ಉಪಾಧ್ಯಕ್ಷ ಮಂಜುನಾಥ ಆಳ್ವ, ಕಲಾಕ್ಷೇತ್ರ ಅಧ್ಯಕ್ಷ ಜಯರಾಮ ಎಡನೀರು, ಸಹಾಯಕ ಅಭಿವೃದ್ಧಿಕಾರಿ ಕೆ.ಎಂ. ರಾಮಕೃಷ್ಣನ್, ಬ್ಲಾಕ್ ಪಂಚಾಯಿತಿ ಸದಸ್ಯ ಸ್ನೇಹಲತಾ, ಯು. ಕೃಷ್ಣ ಶೆಟ್ಟಿ, ಎಚ್. ರಾಮಚಂದ್ರ ಶೆಟ್ಟಿ, ಸತೀಶ್ ಆಳ್ವ, ಎನ್. ಕೇಶವ ಪ್ರಸಾದ್, ಕಮಲಾಕ್ಷಿ, ಟಿ. ಸುಲೋಚನಾ, ಆರ್. ಅಶೋಕ್, ಎಂ.ಕೆ. ಮೊಹಮ್ಮದ್, ಟಿ. ಕೇಶವ, ರವಿ ಪೂಜಾರಿ, ಬಿ.ಕೆ.ಎಚ್. ಮಜೀದ್, ಕೆ. ಚಂದ್ರನ್, ಎ.ಆರ್. ಸುಬ್ಬಯ್ಯಕಟ್ಟೆ, ಸದಾಶಿವ ರೈ ಬೆಳ್ಳಿಪ್ಪಾಡಿ, ಮಾನ್ಯ ರವೀಂದ್ರ ಮಾಸ್ತರ್, ಪಂಚಾಯಿತಿ ಕಾರ್ಯದರ್ಶಿ ಎನ್. ಚಂದ್ರಶೇಖರನ್ ಹಾಜರಿದ್ದರು.


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ