ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯ ಮಾಸದ ಮೆಲುಕು: ನರಕಾಸುರ ವಧೆ ಯಕ್ಷಗಾನ

ಲೇಖಕರು :
ಕೋಟ ಸುದರ್ಶನ ಉರಾಳ
ಶುಕ್ರವಾರ, ಜೂನ್ 24 , 2016
ಜೂನ್ 24 , 2016

ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯ ಮಾಸದ ಮೆಲುಕು: ನರಕಾಸುರ ವಧೆ ಯಕ್ಷಗಾನ

ಬೆ೦ಗಳೂರು : ಮನೋರಂಜಿನಿ ಸಾಂಸ್ಕೃತಿಕ ವೇದಿಕೆ ನೆರವಿನೊಂದಿಗೆ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯು ಚಿಕ್ಕಲಸಂದ್ರದ ಕೆ.ಎಸ್.ಆರ್.ಟಿ.ಸಿ. ಬಡಾವಣೆಯ ಮನೋರಂಜಿನಿ ಸಭಾಂಗಣದಲ್ಲಿ ಹಮ್ಮಿಕೊಂಡು ಬಂದಿರುವ ಮಾಸಾಂತ್ಯದ ಸಾಂಸ್ಕೃತಿಕ ರಂಜನೆಯ ಡಾ| ರಾಧಾಕೃಷ್ಣ ಉರಾಳರ ಪರಿಕಲ್ಪನೆ-ನಿರ್ದೇಶನದ ‘ಮಾಸದ ಮೆಲುಕು‘ ಸರಣಿಯ 61ನೇ ಕಾರ್ಯಕ್ರಮವಾಗಿ “ನರಕಾಸುರ ವಧೆ” ಬಡಗು ಶೈಲಿಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಅಂಬರೀಷ್ ಭಟ್ ಯಕ್ಷ ಸಂಯೋಜನೆಯಲ್ಲಿ ಸೀಮಿತಾವಧಿಯ ಅವರಣದಲ್ಲಿ ಅಜಪುರದ ಸುಬ್ಬ ಹಾಗೂ ಅನ್ಯ ಕವಿ ರಚಿತ ಪದಗಳನ್ನು ಆಧರಿಸಿದ ಈ ಯಕ್ಷ ಪ್ರಸಂಗ ದಿನಾಂಕ 25-06-2016ರ ಶನಿವಾರ ಸಂಜೆ 6ಕ್ಕೆ ನಡೆಯಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರದರ್ಶನವನ್ನು ಪ್ರಾಯೋಜಿಸಲಿದ್ದು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಎಂ.ಎನ್.ಹಿರಿಯಣ್ಣ, ಸಮಾಜ ಸೇವಕರಾದ ನರಸಿಂಹಮೂರ್ತಿ, ಗೋಕುಲಂ ಸಂಗೀತ ಶಾಲೆಯ ನಿರ್ದೇಶಕರಾದ ಎಚ್.ಎಸ್. ವೇಣು ಗೋಪಾಲ್ ಹಾಗೂ ಶ್ರೀ ಸಿದ್ಧಿ ಗಣಪತಿ ದೇವಾಲಯ ಸಮೀತಿಯ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ ಉಪಸ್ಥಿತರಿರುತ್ತಾರೆ.

ನಾರದ ಕೃಷ್ಣನಿಗೆ ತಂದುಕೊಟ್ಟ ಪಾರಿಜಾತ ಪುಷ್ಪವನ್ನು ರುಕ್ಮಿಣಿಗೆ ಕೊಟ್ಟಾಗ ಸಿಟ್ಟುಗೊಳ್ಳುವ ಸತ್ಯಭಾಮೆ, ಅವಳನ್ನು ಸಮಾಧಾನ ಪಡಿಸುವಲ್ಲಿ ಕೃಷ್ಣ ಪರದಾಟ, ಇಂದ್ರಾದಿ ದೇವತೆಗಳ ಮೇಲೆ ನರಕಾಸುರನ ಆರ್ಭಟ, ತಂದೆ ತಾಯಿಯರೊಂದಾಗಿ ಕೊಂದಾಗ ಮಾತ್ರ ತನ್ನ ಸಾವು ಎಂಬ ವರ ಪಡೆದ ಆತನನ್ನು ಕೊಲ್ಲುವುದಕ್ಕಾಗಿ ಹೊರಟ ಕೃಷ್ಣನನ್ನು ಪಾರಿಜಾತದ ಗಿಡ ನೋಡುವ ಸಡಗರದಲ್ಲಿ ಕೂಡಿಕೊಳ್ಳುವ ಸತ್ಯಭಾಮೆ ನರಕಾಸುರನ ಬಳಿ ಕೃಷ್ಣ ಸೋತಾಗ ಮುಂದೆ ಏನಾಗುವುದು ಎಂಬ ಕುತೂಹಲ, ನವಿರಾದ ಹಾಸ್ಯ, ವಿಡಂಬನೆ, ಚಿಂತನೆಗಳ ಹೂರಣವಾದ ಈ ಕಥಾಭಾಗದಲ್ಲಿ ಸುಬ್ರಾಯ ಹೆಬ್ಬಾರ್, ನಾರಾಯಣ ಹೆಬ್ಬಾರ್, ಆದಿತ್ಯ ಹಿಮ್ಮೇಳದಲ್ಲಿಯೂ ಸಂಸ್ಥೆಯ ಗೌರವಾಧ್ಯಕ್ಷ ರಾದ ದೇವರಾಜ್ ಕರಬ, ರವೀಶ ಹೆಗಡೆ, ಅಂಬರೀಶ್ ಭಟ್, ವಾಸುದೇವ ಹೆಗಡೆ, ಆದಿತ್ಯ, ಡಾ ಉರಾಳ್, ರಾಜೇಶ್ ಕಶ್ಯಪ್, ನಿತ್ಯಾನಂದ ನಾಯಕ್ ಮೊದಲಾದವರು ಕಲಾವಿದರಾಗಿ ಪಾಲ್ಗೊಳ್ಳಲಿದ್ದಾರೆ. ವಿಶ್ವನಾಥ್ ಉರಾಳರವರ ನಿರ್ವಹಣೆ, ಸತ್ಯನಾರಾಯಣ್, ಮುರಳೀಧರ ನಾವಡ, ಭರತ್‌ಗೌಡ, ಶ್ರೀನಿವಾಸ್ ಸಾಸ್ತಾನ್, ಮಮತ ಆರ್ಕೆ ಅವರ ಸಹಕಾರದೊಂದಿಗೆ ನಡೆಯುವ ಪ್ರದರ್ಶನಕ್ಕೆ ಪ್ರವೇಶ ಉಚಿತ. ಎಲ್ಲರಿಗೂ ಸ್ವಾಗತ. ಆಸನಗಳು ಸೀಮಿತವಾಗಿರುವುದರಿಂದ ಮುಂಚಿತವಾಗಿ ಬನ್ನಿ.

ಹೆಚ್ಚಿನ ವಿವರಗಳಿಗೆ 9845663646 ಸಂಪರ್ಕಿಸಿ

ಕಲಾಕದಂಬ ಆರ್ಟ್ ಸೆಂಟರ್, 182/1, 9ನೇ ಅಡ್ಡರಸ್ತೆ, ತ್ಯಾಗರಾಜನಗರ, ಬೆಂ-28 ದೂ : 9448510582


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ