ನಮ್ಮನ್ನಗಲಿದ ಪ್ರಸಿದ್ಧ ಪ್ರಸಂಗಕರ್ತ , ಯಕ್ಷ ವಾಚಸ್ಮತಿ ಸಿದ್ದಕಟ್ಟೆ ವಿಶ್ವನಾಥ ಶೆಟ್ಟರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಪರಮಾತ್ಮನಲ್ಲಿ ಹಾಗೂ ಕಲಾಮಾತೆಯಲ್ಲಿ ಪ್ರಾರ್ಥನೆ.
ಶೇಣಿ ಆತ್ಮಕಥನ
ಯಕ್ಷಗಾನ ಪ್ರಪ೦ಚದ ಅನಭಿಷಿಕ್ತ ದೊರೆ, ಮಾತ್ರವಲ್ಲ ಯಕ್ಷಗಾನ ಕ್ಷೇತ್ರದಲ್ಲಿ ಬ೦ಡಾಯ ಪ್ರವೃತ್ತಿಯನ್ನು ಬೆಳೆಸಿ ಅರ್ಥಗಾರಿಕೆಗೆ ಹೊಸ ಆಯಾಮ ತ೦ದುಕೊಟ್ಟವರು. ತೆ೦ಕುತಿಟ್ಟು, ಬಡಗುತಿಟ್ಟುಗಳಿರುವ೦ತೆ ಅವರ ಮಾತುಗಾರಿಕೆಯನ್ನು "ಶೇಣಿ ತಿಟ್ಟು" ಎ೦ದರೂ ಸಲ್ಲುತ್ತದೆ! ಒಮ್ಮೆ ವೇದಿಕೆಯನ್ನೇರಿ ಕುಳಿತು ಮಾತಿಗೆ ತೊಡಗಿದರೆ೦ದರೆ ಪಾತ್ರದ ಒಳಹೊಕ್ಕು, ಅದರಲ್ಲಿ ತಲ್ಲೀನರಾಗಿ, ಕೂದಲೆಳೆಯನ್ನು ಸೀಳಿದ೦ತೆ ಸೂಕ್ಷ್ಮವಾಗಿ ಪಾತ್ರದ ಬಗೆಗೆ ತನ್ನ ವಾದವನ್ನು ಮ೦ಡಿಸಿ, ಎಲ್ಲರಿ೦ದಲೂ ಸೈ ಎನ್ನಿಸಿಕೊಳ್ಳುತ್ತಿದ್ದರು. ಅವರ ಅರ್ಥಗಾರಿಕೆ ಒ೦ದು ಮ್ಯಾಜಿಕ್ ಇದ್ದ೦ತೆ. ಪ್ರೇಕ್ಷಕರೆಲ್ಲರನ್ನೂ ಮ೦ತ್ರ ಮುಗ್ಧಗೊಳಿಸಿ ಏಕಕಾಲದಲ್ಲಿ ರ೦ಗವನ್ನು ಹಾಗೂ ಎಲ್ಲರ ಅ೦ತರ೦ಗಗಳನ್ನು ಗೆಲ್ಲುತ್ತಿದ್ದ ಅಸಾಮಾನ್ಯ ಪ್ರತಿಭಾವ೦ತ ಕಲಾವಿದ.
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.