ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಭಾಗವತ ನಾರಾಯಣ ನೆಬ್ಬೂರರಿಗೆ ಕಾರ್ಕಡ ಉಡುಪ ಪ್ರಶಸ್ತಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಡಿಸೆ೦ಬರ್ 27 , 2014
ಡಿಸೆ೦ಬರ್ 27, 2014

ಭಾಗವತ ನಾರಾಯಣ ನೆಬ್ಬೂರರಿಗೆ ಕಾರ್ಕಡ ಉಡುಪ ಪ್ರಶಸ್ತಿ

ಬ್ರಹ್ಮಾವರ : ಮೊತ್ತ ಮೊದಲು ವಿದೇಶಕ್ಕೆ ಯಕ್ಷಗಾನವನ್ನು ಕೊಂಡೊಯ್ದ, ಯಕ್ಷ ಸೀಮೋಲ್ಲಂಘನದ ದಾಖಲೆಯ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕರಲ್ಲೊಬ್ಬರಾದ ಕಾರ್ಕಡ ಶ್ರೀನಿವಾಸ ಉಡುಪ ನೆನಪಿನ ಪ್ರಸಕ್ತ ಸಾಲಿನ ಪ್ರಶಸ್ತಿಗೆ ಉತ್ತರ ಕನ್ನಡದ ಹಿರಿಯ ಭಾಗವತ ನೆಬ್ಬೂರು ನಾರಾಯಣ ಆಯ್ಕೆಯಾಗಿದ್ದಾರೆ.

ನೆಬ್ಬೂರರು ಸುಮಾರು ನಾಲ್ಕು ದಶಕಗಳ ಕಾಲ ತಮ್ಮ ಶ್ರೀಮಂತ ಕಂಠದಿಂದ ಯಕ್ಷಗಾನದ ಕಲಾ ವ್ಯವಸಾಯದಲ್ಲಿ ಭಾಗವತರಾಗಿ ಪ್ರಸಿದ್ಧರಾದವರು. ಕೋಟ ಅಮೃತೇಶ್ವರಿ ಮೇಳ, ಇಡುಗುಂಜಿಯ ಕೆರೆಮನೆ ಮೇಳಗಳಲ್ಲಿ ಮೂರು ತಲೆಮಾರಿನ ಕಲಾವಿದರನ್ನು ಕುಣಿಸಿ, ಮೆರೆಸಿದ್ದಾರೆ.

ದೇಶ, ವಿದೇಶಗಳಲ್ಲಿಯೂ ನೆಬ್ಬೂರರ ಸ್ವರಮಾಧುರ್ಯ ಕಲಾಸಹೃದಯರ ಕಿವಿಗಳಲ್ಲಿ ಅನುರಣಿಸಿದೆ. ಕಲಾರಂಗದಲ್ಲಿ ಮಾತ್ರವಲ್ಲದೆ, ನಿತ್ಯ ಜೀವನದಲ್ಲೂ ಶಿಸ್ತು ಸಂಯಮದಿಂದ ಬಾಳಿ, ಅಪಾರ ಕಲಾರಾಧಕರ ಪ್ರೀತಿ-ಗೌರವಕ್ಕೆ ಪಾತ್ರರಾದ ನೆಬ್ಬೂರರನ್ನು, ತಿರುಗಾಟದ ನಲ್ವತ್ತರ ಸಂಭ್ರಮವನ್ನು ಆಚರಿಸುತ್ತಿರುವ ಸಾಲಿಗ್ರಾಮ ಮಕ್ಕಳ ಮೇಳವು ಮುಂದಿನ ಜನವರಿಯಲ್ಲಿ ಕೋಟದ ಪಟೇಲರ ಮನೆಯ ಅಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಉಡುಪ ಪ್ರಶಸ್ತಿ ನೀಡಿ ಗೌರವಿಸುತ್ತದೆ ಎಂದು ಮೇಳದ ಕಾರ್ಯದರ್ಶಿ ಹಾಗೂ ಉಪನ್ಯಾಸಕ ಸುಜಯೀಂದ್ರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಲಿಗ್ರಾಮದಲ್ಲಿ ಬುಧವಾರ ನಡೆದ ಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಉಡುಪ, ಶ್ರೀಧರ ಹಂದೆ, ಬಲರಾಮ ಕಲ್ಕೂರ ಅವರನ್ನೊಳಗೊಂಡ ಆಯ್ಕೆ ಸಮಿತಿ ಈ ಆಯ್ಕೆ ಮಾಡಿತ್ತು.



ಕೃಪೆ : http://prajavani.net


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ