ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಪ್ರಚಾರ ಬಯಸದ ಸಿದ್ಧಿಯ ಕಲಾವಿದ ಹೆಮ್ಮಾಡಿ ರಾಮ ಚಂದನ್

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಬುಧವಾರ, ನವ೦ಬರ್ 18 , 2015

ಶ್ರೀ ಗೋಳಿಗರಡಿ ಪಂಜೂರ್ಲಿ ಕ್ಷೇತ್ರದ ಪಾತ್ರಿಯಾಗಿದ್ದು ಗೋಳಿಗರಡಿ ಮೇಳದ ಪೋಷಕರಾಗಿದ್ದ ಸಾಸ್ತಾನ ಚಂದು ಪೂಜಾರಿಯವರ ಸಂಸ್ಮರಣಾರ್ಥ ಪ್ರತಿ ವರ್ಷ ಗೋಳಿಗರಡಿ ಮೇಳದ ಪ್ರಥಮ ಸೇವೆಯಾಟದಂದು ನೀಡುವ ಚಂದು ಪೂಜಾರಿ ಸಂಸ್ಮರಣಾ ಪ್ರಶಸ್ತಿ ಈ ಸಾಲಿನಲ್ಲಿ ಬಡಗುತಿಟ್ಟಿನಲ್ಲಿ ಸಿದ್ದಿಯ ನೆಲೆಯಲ್ಲಿ ಗುರುತಿಸಲ್ಪಟ್ಟ ಹಿರಿಯ ಕಲಾವಿದ ಹೆಮ್ಮಾಡಿ ರಾಮ ಚಂದನ್ ಅವರಿಗೆ ನೀಡಲಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ನವಂಬರ್ 22 ರಂದು ಗೋಳಿಗರಡಿ ಮೇಳದ ಪ್ರಥಮ ಸೇವೆ ಆಟದಂದು ಗಣ್ಯರ ಉಪಸ್ಥಿತಿಯಲ್ಲಿ ಗೋಳಿ ಗರಡಿಯಲ್ಲಿ ನೆರವೇರಲಿದೆ.

ಸುದೀರ್ಘಕಾಲ ಯಕ್ಷಗಾನದ ಬಯಲಾಟ ಮೇಳಗಳಲ್ಲಿ ತಿರುಗಾಟ ಮಾಡಿ ಯಾವುದೇ ಪ್ರಚಾರ ಬಯಸದ ಅನೇಕ ಕಲಾವಿದರು ಎಲೆಮರೆಯ ಕಾಯಿಯಂತೆ ಬದುಕುತಿದ್ದಾರೆ. ಅಂತವರಲ್ಲಿ ಒಬ್ಬರು ಹಿರಿಯ ಎರಡನೇ ವೇಷಧಾರಿಯಾಗಿ ವಿವಿದ ಬಯಲಾಟ ಮೇಳಗಳಲ್ಲಿ ದಶಕಗಳಿಂದ ತಿರುಗಾಟ ನೆಡೆಸಿ ನಿವೃತ್ತಿಯ ಅಂಚಿನಲ್ಲಿರುವ ಕಲಾವಿದ ಹೆಮ್ಮಾಡಿ ರಾಮನವರು. ಬಡಗುತಿಟ್ಟಿನ ಗೋಳಿಗರಡಿ ಮೇಳವೊಂದರಲ್ಲೇ ದೀರ್ಘಕಾಲ ತಿರುಗಾಟ ನಡೆಸುತ್ತಿರುವ‌ ಇವರು ಹಾಲಾಡಿ, ಅಮೃತೇಶ್ವರಿ, ಕಮಲಶಿಲೆ, ಕಳುವಾಡಿ, ಬಗ್ವಾಡಿ ಮುಂತಾದ ಬಯಲಾಟ ಮೇಳಗಳಲ್ಲಿ ತಿರುಗಾಟ ಮಾಡಿದ ಇವರು ಬ್ರಹ್ಮಾವರ ಕುಂದಾಪುರದಲ್ಲಿ ಚಾಲ್ತಿ ಇರುವ ನಡುತಿಟ್ಟಿನ ಪ್ರಾತಿನಿಧಿಕರು.

ಕುಂದಾಪುರ ತಾಲೂಕು ಹೆಮ್ಮಾಡಿಯ ಬುಗ್ರಿಕಡು ಪೂಜಾರಿ ಮನೆಯಲ್ಲಿ ಮಂಜ ಪೂಜಾರಿ ಮತ್ತು ಚಿಕ್ಕಮ್ಮ ದಂಪತಿಗಳ ಮಗನಾಗಿ ಜನಿಸಿದ ಇವರು ಉಪ್ಪಿನಕುದ್ರುವಿನಲ್ಲಿ ಪ್ರಾಥಮಿಕ ಅಭ್ಯಾಸ , ಮತ್ತು ಆ ಕಾಲದಲ್ಲೇ ಹೈಸ್ಕೂಲು ವಿದ್ಯಾಬ್ಯಾಸವನ್ನು ಗಂಗೊಳ್ಳಿ ಹೈಸ್ಕೂಲಿನಲ್ಲಿ ಮುಗಿಸಿ ಯಕ್ಷಗಾನದ ಗೀಳನ್ನು ಅಂಟಿಸಿಕೊಂಡ ಇವರು ಬಡಗುತಿಟ್ಟಿನ ದಶಾವತಾರಿ ಗುರು ಹೆರಂಜಾಲು ವೆಂಕಟರಮಣನವರಲ್ಲಿ ತಾಳ ಹೆಜ್ಜೆ ಅಭ್ಯಾಸ ಮಾಡಿದರು. ಕೆಲಕಾಲ ಹಲವಾರು ಸಂಘ ಸಂಸ್ಥೆಗಳಲ್ಲಿ ಕಲಾವಿದನಾಗಿ ಕಾಣಿಸಿಕೊಂಡರು.

ಬಡಗುತಿಟ್ಟು ಪರಂಪರೆಯ ಕಲಾವಿದ ಐರೋಡಿ ಗೋವಿಂದಪ್ಪನವರಿಂದ ಪ್ರೇರಣೆಗೊಂಡು. ಸುಮಾರು 40 ವರ್ಷದ ಹಿಂದೆ ಗೋವಿಂದಪ್ಪನವರ ಸಾಲಿಗ್ರಾಮ ಮೇಳ ಸೇರ್ಪಡೆಯಿಂದ ಗೋಳಿಗರಡಿ ಮೇಳದಲ್ಲಿ ತೆರವಾದ ಸ್ಥಾನವನ್ನು ಸಮರ್ಥವಾಗಿ ತುಂಬಿ ಎರಡನೇ ವೇಷಧಾರಿಯಾಗಿ ಗುರುತಿಸಿಕೊಂಡರು. ಗೋಳಿಗರಡಿ ಮೇಳ ಅನಿವಾರ್ಯವಾಗಿ ನಿಂತಾಗ ಕೆಳಕಾಲ ಬೈಂದೂರಿನ ಕಳುವಾಡಿ ಮೇಳಕ್ಕೆ ಸೇರ್ಪಡೆಗೊಂಡರು.

ಬಳಿಕ ಸುರೇಂದ್ರ ಪಣಿಯೂರರಿಂದ ಪ್ರಾರಂಭವಾದ ಗೋಳಿಗರಡಿ ಮೇಳಕ್ಕೆ ಪುನಹ ಬಂದ ಇವರು ಪಣಿಯೂರರ ಯಜಮಾನಿಕೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು. ಅಲ್ಲಿ ಅವರು ನಿರ್ವಹಿಸುತಿದ್ದ ಕರ್ಣಾರ್ಜುನದ ಕರ್ಣ, ಶಲ್ಯ, ಬೀಷ್ಮವಿಜಯದ ಬೀಷ್ಮ, ಪರಶುರಾಮ, ಅರ್ಜುನ, ವಿಕ್ರಮಾದಿತ್ಯ, ಶನಿ, ಯಮ, ಪೆರುಮಳ ಬಳ್ಳಾಲ, ಕೋಟಿ-ಚನ್ನಯ, ವಾಲಿ, ಈಶ್ವರ ಮುಂತಾದ ಪಾತ್ರಗಳು ಅಪಾರ ಜನಮನ್ನಣೆ ಗಳಿಸಿದ್ದು ಬಡಗಿನ ಪ್ರಮುಖ ಶೈಲಿಯೊಂದರ ಪ್ರಾತಿನಿಧಿಕರೆಂದು ಜನಮಾನಸದಿಂದ ಗುರುತಿಸಲ್ಪಟ್ಟರು. ಬಳಿಕ ಅಮೃತೇಶ್ವರಿ, ಹಾಲಾಡಿ, ಕಮಲಶಿಲೆ ಮೇಳದಲ್ಲೂ ತಿರುಗಾಟ ಮಾಡಿದ್ದರು. ಸಾಸ್ತಾನ ವಿಠಲ ಪೂಜಾರಿಯವರ ನೇತೃತ್ವದಲ್ಲಿ ಹೊಸದಾಗಿ ಅದ್ದೂರಿಯ ತಿರುಗಾಟ ಪ್ರಾರಂಬಿಸಿದ ಗೋಳಿಗರಡಿ ಮೇಳಕ್ಕೆ ಪುನಹ ಸೇರಿದ ಅವರು ಅಂದಿನಿಂದ ಇಂದಿನವರೆಗೆ ಅದೇ ಮೇಳದಲ್ಲಿ ಸೇವೆ ಸಲ್ಲಿಸುತಿದ್ದಾರೆ.

1968ರಿಂದ ಮೂರು ವರ್ಷ ಮುಂಬೈಯಲ್ಲಿ ಕನ್ನಡ ಸಂಘ ಮತ್ತು ನಾರಾಯಣ ಗುರು ಯಕ್ಷಗಾನ ಮಂಡಳಿಯಲ್ಲಿ ಗುರುಗಳಾಗಿ ಸೇವೆ ಸಲ್ಲಿಸಿದ ಇವರು ಅಲ್ಲಿ ಹಲವಾರು ಯಕ್ಷಗಾನ ಪ್ರದರ್ಶನ ನೀಡಿದ್ದರು. ಸುಮಾರು 18 ವರ್ಷಗಳ ಕಾಲ ಉಪ್ಪಿನಕುದ್ರುವಿನಲ್ಲಿ ಶ್ರೀ ಗಣೇಶ ಗೊಂಬೆಯಾಟ ಮಂಡಳಿಯಲ್ಲಿ ಗೊಂಬೆಗಳ ಹಿಂದೆ ನಿಂತು‌ ಅರ್ಥ ಹೇಳುವ ಮೂಲಕ ಗೊಂಬೆಗಳಿಗೆ ಕಂಠದಾನ ಮಾಡುವ ಕ್ಲಿಷ್ಟಕರ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ದೀರ್ಘಕಾಲ ಗೊಂಬೆಗಳ ಹಿಂದೆ ನಿಂತು ಗೊಂಬೆಗಳ ಬಣ್ಣಗಾರಿಕೆ ವೇಷಭೂಷಣಗಳನ್ನು ಇವರು ನಿರ್ವಹಿಸುತಿದ್ದರು. ಕೇವಲ ಗೊಂಬೆಗಳ ನರ್ತನ ನೋಡುವ ಅನೇಕರಿಗೆ ತೆರೆಯ ಹಿಂದೆ ಅನೇಕ ಕಾಣದ ಕೈಗಳ ಚಾಕಚಕ್ಯತೆ ತಿಳಿದಿರಲಾರದು.

ಮೇಳ ಮುಗಿದ ಮೇಲೆ ಈಗಲೂ ಸಹ ಗೊಂಬೆಯಾಟ ಮಂಡಳಿಯೊಂದಿಗೆ ತಿರುಗಾಟ ಮಾಡುತಿದ್ದಾರೆ. ಗೊಂಬೆಯ ಜೊತೆಗೂಡಿ ಪ್ಯಾರೀಸ್, ಹೋಲೆಂಡ್, ಸ್ವಿಜರ್ ಲ್ಯಾಂಡ್ ಜರ್ಮನಿ ಆಷ್ಟ್ರೇಲಿಯ, ಮುಂತಾದ ಕಡೆ ಏಳು ಬಾರಿ ವಿದೇಶಯಾತ್ರೆ ಮಾಡಿದ್ದಾರೆ. ಸ್ವಥ ತಾಳಮದ್ದಳೆಯ ಮೇರುಪಂಕ್ತಿಯ ಅರ್ಥದಾರಿಯಾದ ಇವರ ಶನಿಕಥಾ ಕಾಲಕ್ಷೇಪ ಜಿಲ್ಲೆಯಾದ್ಯಂತ ಖ್ಯಾತಿ ಗಳಿಸಿದೆ. ಮಳೆಗಾಲದಲ್ಲಿ ಅಲ್ಲಲ್ಲಿ ಶನಿಕತೆಯನ್ನು ನಿರ್ವಹಿಸುವ ಇವರ ಮಂಡಳಿಯಲ್ಲಿ ಸುಮಾರು ಆರು ಜನ ಕಲಾವಿದರಿದ್ದಾರೆ.

ಹೆಮ್ಮಾಡಿ ರಾಮ ಚಂದನ್
ಜನನ ಸ್ಥಳ : ಹೆಮ್ಮಾಡಿ, ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ

ಕಲಾಸೇವೆ:
ಬಡಗುತಿಟ್ಟಿನ ಗೋಳಿಗರಡಿ ಮೇಳವೊಂದರಲ್ಲೇ ದೀರ್ಘಕಾಲ ತಿರುಗಾಟ ನಡೆಸುತ್ತಿರುವ‌ ಇವರು ಹಾಲಾಡಿ, ಅಮೃತೇಶ್ವರಿ, ಕಮಲಶಿಲೆ, ಕಳುವಾಡಿ, ಬಗ್ವಾಡಿ ಮುಂತಾದ ಬಯಲಾಟ ಮೇಳಗಳಲ್ಲಿ ತಿರುಗಾಟ ಮಾಡಿದ ಇವರು ಬ್ರಹ್ಮಾವರ ಕುಂದಾಪುರದಲ್ಲಿ ಚಾಲ್ತಿ ಇರುವ ನಡುತಿಟ್ಟಿನ ಪ್ರಾತಿನಿಧಿಕರು.

ಪ್ರಶಸ್ತಿಗಳು:
  • ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ
  • ಉಡುಪಿ ಯಕ್ಷಗಾನ ಕಲಾರಂಗದ ಪ್ರಶಸ್ತಿ
  • ಮುಂಬೈ ಬಂಟರ ಭವನದ ಕಲಾ ಪ್ರಕಾಶ ಪ್ರತಿಷ್ಟನದ ಪ್ರಶಸ್ತಿ,
  • ಬಿಲ್ಲವ ಸಂಘ ಬೆಂಗಳೂರು , ಮೊಗವೀರ ಸಂಘ ಬೆಂಗಳೂರು, ಕಾರ್ಕಳ ಬೊಂಬೆತ್ತಡ್ಕ ಮೋಹನ ಪೈ, ಉಡುಪಿ ಡಾ/ ಜಿ. ಶಂಕರ್ ಟ್ರಸ್ಟ್ ಸಹಿತ ಹಲವಾರು ಸಂಘ ಸಂಸ್ಥೆಗಳ ಸನ್ಮಾನ
2005ರಲ್ಲಿ ಉಡುಪಿಯಲ್ಲಿ ನೆಡೆದ ಬಿಲ್ಲವ ಕಲಾವಿದರ ಸಮಾವೇಷದಲ್ಲಿ ಇವರ ಕರ್ಣಾರ್ಜುನ ಕಾಳಗದ ಕರ್ಣನ ಪಾತ್ರ ಅಪಾರ ಮೆಚ್ಚುಗೆ ಪಡೆದಿದ್ದು ಮಾಜಿ ಸಚಿವರಾದ ಜನಾರ್ದನ ಪೂಜಾರಿಯವರು ಇವರನ್ನು ಸನ್ಮಾನಿಸಿದ್ದರು. ತನ್ನ ತಿರುಗಾಟದ ಅವಧಯಲ್ಲಿ ಹಲವಾರು ಸನ್ಮಾನ ಪಡೆದ ಇವರಿಗೆ ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ. ಉಡುಪಿ ಯಕ್ಷಗಾನ ಕಲಾರಂಗದ ಪ್ರಶಸ್ತಿ, ಮುಂಬೈ ಬಂಟರ ಭವನದ ಕಲಾ ಪ್ರಕಾಶ ಪ್ರತಿಷ್ಟನದ ಪ್ರಶಸ್ತಿ, ಬಿಲ್ಲವ ಸಂಘ ಬೆಂಗಳೂರು , ಮೊಗವೀರ ಸಂಘ ಬೆಂಗಳೂರು, ಕಾರ್ಕಳ ಬೊಂಬೆತ್ತಡ್ಕ ಮೋಹನ ಪೈ, ಉಡುಪಿ ಡಾ/ ಜಿ. ಶಂಕರ್ ಟ್ರಸ್ಟ್ ಸಹಿತ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಸುದೀರ್ಘ ಕಾಲ ಬಯಲಾಟದಲ್ಲಿಯೇ ಸೇವೆ ಸಲ್ಲಿಸಿ ನಡುತಿಟ್ಟನ್ನು ವಿಜ್ರಂಭಿಸಿದ ರಾಮನವರಿಗೆ ಗೋಳಿಗರಡಿ ಮೇಳದ ಪ್ರೋತ್ಸಾಹಕ ಚಂದು ಪೂಜಾರಿ ಸ್ಮಾರಕ ಪ್ರಶಸ್ತಿ ಯೋಗ್ಯವಾಗಿಯೇ ಸಲ್ಲುತ್ತಿದೆ.


************************


ಹೆಮ್ಮಾಡಿ ರಾಮ ಚಂದನ್ ರವರ ಕೆಲವು ಛಾಯಾ ಚಿತ್ರಗಳು

( ಕೃಪೆ : ಅ೦ತರ್ಜಾಲದ ಅನಾಮಿಕ ಯಕ್ಷಗಾನಾಭಿಮಾನಿಗಳು )

















Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ