ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಹಾಸ್ಯ ಕಲಾವಿದ ಚಪ್ಪರಮನೆ ಶ್ರೀಧರ ಹೆಗಡೆಗೆ ಸನ್ಮಾನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಜನವರಿ 12 , 2014
ಜನವರಿ 14, 2014

ಹಾಸ್ಯ ಕಲಾವಿದ ಚಪ್ಪರಮನೆ ಶ್ರೀಧರ ಹೆಗಡೆಗೆ ಸನ್ಮಾನ

ಶಿರಸಿ : ಯಕ್ಷಗಾನ ಶ್ರೇಷ್ಠ ಹಾಸ್ಯ ಕಲಾವಿದ ಚಪ್ಪರಮನೆ ಶ್ರೀಧರ ಹೆಗಡೆಗೆ ನೃತ್ಯಪುರಂ, ಖ್ಯಾತ ಹಿಂದುಸ್ತಾನಿ ಗಾಯಕ ಅಶೋಕ ಹುಗ್ಗಣ್ಣವರ್‌ಗೆ ರಾಗರತ್ನ, ಕಾರ್ಯಕ್ರಮ ಸಂಘಟಕ ರಘುಪತಿ ಭಟ್ಟ ಸುಗಾವಿಗೆ ಮಿತ್ರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ರವಿವಾರ ನಗರದ ನಯನ ಸಭಾಂಗಣದಲ್ಲಿ ನಡೆಯಿತು.

ಸ್ಥಳೀಯ ರಾಗಮಿತ್ರ ಪ್ರತಿಷ್ಠಾನದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಲಾ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ನೆರವೇರಿಸಿ ಮಾತನಾಡಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಟಿವಿ, ಮೊಬೈಲ್‌ ಯುಗದಲ್ಲೂ ಮಕ್ಕಳನ್ನು ಭಾರತೀಯ ಸಂಸ್ಕೃತಿ, ಪರಂಪರೆಯ ಮುಂದುವರಿಕೆಗೆ ನೆರವಾಗುವ ಸಂಗೀತದ ಆರಾಧನೆಯ ಶಾಲೆ ಮಿತ್ರಾ ಮ್ಯೂಸಿಕಲ್‌ನಂತಹ ಸಂಸ್ಥೆಗೆ ಸೇರಿಸುವುದು ಶ್ರೇಷ್ಠ ಎಂದು ಕಾರ್ಯವನ್ನು ಶ್ಲಾಘಿಘಿಸಿದರು. ಅಧ್ಯಕ್ಷತೆ ವಹಿಸಿದ್ದ ಪಂಡಿತ್‌ ಎಂ.ಪಿ. ಹೆಗಡೆ ಪಡಿಗೇರಿ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಸಾಧನೆಯ ಎತ್ತರಕ್ಕೇರಲು ಸಹನೆ, ಸಾಧನೆ ಬೇಕು ಎಂದರು. ವೈದ್ಯ ಶಿವರಾಮ ಕೆ.ವಿ., ವಿದ್ವಾನ್‌ ಪ್ರಕಾಶ ಹೆಗಡೆ ಯಡಹಳ್ಳಿ ಇತರರು ಇದ್ದರು. ಪ್ರಕಾಶ ಭಾಗವತ್‌ ನಿರ್ವಹಿಸಿದರು.

ಬಳಿಕ ಬೆಂಗಳೂರಿನ ಅಪರ್ಣಾ ಭಟ್ಟ, ಅಶೋಕ ಹುಗ್ಗಣ್ಣವರ್‌ ಅವರಿಂದ ಗಾಯನ, 2ನೇ ವರ್ಗದ ಪೋರ ಹೇಮಂತ ಜೋಶಿ ಅವರಿಂದ ತಬಲಾ ಸೋಲೋ ನಡೆಯಿತು. ಇದಕ್ಕೂ ಮುನ್ನ ನಡೆದ ಮಿತ್ರಾ ಮ್ಯೂಸಿಕಲ್ಸನ ವಿದ್ಯಾರ್ಥಿಗಳ ಸಂಗೀತ ಸೌರಭದಲ್ಲಿ ಅಲ್ಲಮ ಪ್ರಭು, ಎಂ.ಜಿ.ಭಟ್ಟ ನೆಬ್ಬೂರು, ಕಿರಣ ಕಾನಗೋಡ, ಸುಧಾಕರ ನಾಯ್ಕ, ಭರತ್‌ ಹೆಗಡೆ, ಪ್ರಕಾಶ ಹೆಗಡೆ ಇತರರು ಸಹಕಾರ ನೀಡಿದರು.

ಕೃಪೆ : http://kannada.yahoo.com

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ