ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
`ದಿಗಿಣಗಳ ರಾಜ` - ವೇಣೂರು ಸದಾಶಿವ ಕುಲಾಲ್‌

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಆಗಸ್ಟ್ 7 , 2013

ಕರಾವಳಿಯ ಗಂಡುಮೆಟ್ಟಿನ ಕಲೆ ಎಂದೇ ಪ್ರಸಿದ್ಧಿ ಪಡೆದಿರುವ ಯಕ್ಷಗಾನದ ಮೂಲಕ ಸಾವಿರಾರು ಮಂದಿ ಹೆಸರು-ಕೀರ್ತಿಯನ್ನು ಪಡೆದಿದ್ದಾರೆ. ಆದರೆ ಇನ್ನೂ ಕೆಲವರು ಕಲಾಮಾತೆಯ ಸೇವೆಯಲ್ಲಿ ತೊಡಗಿದ್ದು ಬಿರುದು, ಸಮ್ಮಾನ ಗಳಿಂದ ದೂರವೇ ಉಳಿದಿದ್ದಾರೆ. ಅಂಥವರಲ್ಲಿ ವೇಣೂರಿನ ಸದಾಶಿವ ಕುಲಾಲ್ ಕೂಡಾ ಒಬ್ಬರು. ರಂಗಸ್ಥಳ ಏರಿದರೆಂದರೆ ದಿಗಿಣಗಳ ಸರ ಮಾಲೆಯನ್ನೇ ಸುರಿಸಿ ನೋಡು ಗರನ್ನು ನಿಬ್ಬೆರಗಾಗಿಸುವ ಸದಾ ಶಿವರನ್ನು ‘ದಿಗಿಣಗಳ ರಾಜ’ ಎಂದು ಕರೆದರೂ ಅಚ್ಚರಿಪಡಬೇಕಿಲ್ಲ.

39 ವರ್ಷಗಳ ಮೇಳದ ತಿರು ಗಾಟದಲ್ಲಿ ಸಾರ್ಥಕತೆ ಕಂಡಿರುವ ಇವರು ಅಭಿಮನ್ಯು, ಬಬ್ರುವಾಹನ, ಚಂಡ-ಮುಂಡರು, ಷಣ್ಮುಖ, ಲೀಲೆಯ ಕೃಷ್ಣ, ಲಕ್ಷ್ಮಣ, ಅಶ್ವತ್ಥಾಮ, ಗಂಡುಗಲಿ ಕುಮಾರರಾಮ, ಬಪ್ಪನಾಡು ಕ್ಷೇತ್ರ ಮಹಾತ್ಮೆಯಲ್ಲಿನ ಗುಳಿಗ ಪಾತ್ರಧಾರಿ, ರಾಣಿ ರತ್ನಾವಳಿಯ ಉದಯನ, ಚೆನ್ನಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇಷ್ಟೇ ಅಲ್ಲದೆ ಸ್ತ್ರೀ ವೇಷ, ಕಿರೀಟ ವೇಷಗಳ ಮೂಲಕ ಜನಮನ ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಕ್ಷರಂಗದಲ್ಲಿ ಪುಂಡುವೇಶ, ಕಲಾಕಾರ, ಹಾಗೂ ತನ್ನ ದಿಗಣ ಸಾಮರ್ಥ್ಯದಿಂದ ಖ್ಯಾತಿ ಪಡೆದ ವೇಣೂರಿನ ಸದಾಶಿವ ಕುಲಾಲ್‌ ಅರ್ಥಗಾರಿಕೆಯಲ್ಲೂ ಚುರುಕು ಪಡೆದವರು. ಕೇವಲ ಮೂರನೆ ತರಗತಿ ವಿದ್ಯಾಭ್ಯಾಸ ಮಾಡಿದ್ದರೂ ಯಕ್ಷರಂಗದ ಘಟಾನುಗಟಿಗಳ ಸಾಮಿಪ್ಯದಿಂದ ಅಪಾರ ಅನುಭವ ಗಳಿಸಿದವರು. ವೇಣೂರು ಸಂದರ ಹಾಸ್ಯಗಾರ ಇವರಿಂದಾಗಿ ಯಕ್ಷಲೋಕಕ್ಕೆ ಪಾದಾರ್ಪಣೆ ಮಾಡಿದ ಇವರು ಧರ್ಮಸ್ಥಳ ಯಕ್ಷ ಕಲಾಕೇಂದ್ರದಲ್ಲಿ ಕಲೆಯ ತಾಳ, ಲಯ, ಗತಿಗಳನ್ನು ಪಡ್ರೆ ಚಂದ್ರು ಅವರಿಂದ ಕಲಿತು ಸುರತ್ಕಲ್‌ ಮೇಳ, ಮಂಗಳಾದೇವಿ ಮೇಳ, ಇದೀಗ ಹೊಸನಗರ ಮೇಳದಲ್ಲಿ ಸೇವೆ ಸಲ್ಲಿಸುತಿದ್ದಾರೆ.

1961ನೇ ಇಸವಿಯಲ್ಲಿ ವೇಣೂರಿನ ದಿ.ಕೃಷ್ಣಪ್ಪ ಮೂಲ್ಯರ ಸುಪುತ್ರರಾಗಿ ಜನಿಸಿದ ಸದಾಶಿವ ಕುಲಾಲರು ಬಾಲ್ಯದಲ್ಲಿಯೇ ಯಕ್ಷ ಗಾನ ಕಲೆಯ ಬಗ್ಗೆ ಅತಿಯಾದ ಶ್ರದ್ಧೆಯನ್ನು ಹೊಂದಿದ್ದವರು. ಮೂರನೇ ತರಗತಿಯಲ್ಲೇ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ಪಡ್ರೆ ಚಂದು ಅವರನ್ನು ಗುರುವನ್ನಾಗಿ ಸ್ವೀಕರಿಸಿ ನಾಟ್ಯ ತರಬೇತಿಯನ್ನು ಪಡೆದರು. ಆನಂತರ ವೇಣೂರು ಸುಂದರ ಹಾಸ್ಯಗಾರರ ಮೂಲಕ ರಂಗಸ್ಥಳಕ್ಕೆ ಪರಿಚಿತರಾದ ಸದಾಶಿವ ಕುಲಾಲರು ಸುರತ್ಕಲ್‌ನ ಮಹಮ್ಮಾಯಿ ಯಕ್ಷಗಾನ ಮೇಳದಲ್ಲಿ 25 ವರ್ಷ, ಮಂಗಳಾದೇವಿ ಮೇಳದಲ್ಲಿ ಐದು ವರ್ಷ ಹಾಗೂ ಹೊಸನಗರ ಮೇಳ ದಲ್ಲಿ ಆರು ವರ್ಷಗಳ ಕಾಲ ಅವಿಶ್ರಾಂತರಾಗಿ ದುಡಿದಿದ್ದಾರೆ.

ಅಗರಿ ರಘುರಾಮ ಭಾಗವತರು, ಶಿವರಾಮ ಜೋಗಿ, ಪದ್ಯಾಣ ಗಣಪತಿ ಭಟ್, ಎಂ.ಕೆ. ರಮೇಶ್ ಆಚಾರ್ಯ, ವೇಣೂರು ಸುಂದರ ಹಾಸ್ಯಗಾರರಿಂದ ಪ್ರೋತ್ಸಾಹವನ್ನು ಪಡೆದು ರಂಗಸ್ಥಳದಲ್ಲಿ ಮಿಂಚಿದೆ ಎನ್ನುವ ಸದಾಶಿವ ಕುಲಾಲರು ರಂಗಸ್ಥಳದಲ್ಲಿ ದಿಗಿಣ ತೆಗೆಯು ವುದರಲ್ಲಿ ಎತ್ತಿದ ಕೈ ಆಗಿದ್ದಾರೆ. ಈಗಲೂ ದಕ್ಷಿಣಕನ್ನಡ, ಉಡುಪಿ ಜಿಲ್ಲೆಯ ಯಕ್ಷಗಾನ ಪ್ರೇಮಿಗಳು ಸದಾಶಿವರನ್ನು ನೆನಪಿಟ್ಟು ಕೊಂಡಿರುವುದು ದಿಗಿಣಗಳ ಮೂಲಕವೇ ಎನ್ನಬಹುದಾಗಿದೆ.

ವೇಣೂರು ಸದಾಶಿವ ಕುಲಾಲ್‌ ‌
ಜನನ ದಿನಾ೦ಕ : 1961
ಜನನ ಸ್ಥಳ : ವೇಣೂರು, ಕಾರ್ಕಳ ತಾಲೂಕು,
ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ ರಾಜ್ಯ
ಕಲಾಸೇವೆ : ಸುರತ್ಕಲ್‌ ಮೇಳ, ಮಂಗಳಾದೇವಿ ಮೇಳ, ಹೊಸನಗರ ಮೇಳಗಳಲ್ಲಿ ಕಲಾವಿದನಾಗಿ ದುಡಿಮೆ.
ಪ್ರಶಸ್ತಿಗಳು:
ಹಲಾವಾರು ಸ೦ಘ-ಸ೦ಸ್ಥೆಗಳಿ೦ದ ವಿವಿಧ ಪ್ರಶಸ್ತಿಗಳು.
ಸದಾಶಿವ ಕುಲಾಲರು ಯಕ್ಷ ಗಾನದ ಅಸಾಮಾನ್ಯ ಪ್ರತಿಭೆ. ಅವರ ಪ್ರತಿಭೆಯನ್ನು ಗುರುತಿಸಿ ಸ್ಥಳೀಯ ಸಂಘಟನೆಗಳು ಪುರಸ್ಕರಿಸಿವೆ. ಮಸ್ಕತ್ ಅಭಿಮಾನಿ ಬಳಗ, ಚೆನ್ನೈ ಕುಲಾಲ ಸಂಘ, ಬೆಳಗಾಂ ಕುಲಾಲ ಸಂಘ, ಮಂಗಳೂರು ಅಭಿಮಾನಿ ಬಳಗ ಮಾತ್ರವಲ್ಲದೆ ಪಾವಂಚೆ ನಾವೂರ ಕುಲಾಲರ ಸಮ್ಮೇಳನದಲ್ಲೂ ಗೌರವಿಸಲಾಗಿದೆ. ಪತ್ನಿ ಸುಜಯ ಹಾಗೂ ಮಕ್ಕಳಾದ ನಾಗಶ್ರೀ, ಷಣ್ಮುಖ ಹಾಗೂ ನಾಗಲಕ್ಷ್ಮಿ ಜೊತೆ ಸಂಸಾರ ನಡೆಸುತ್ತಿರುವ ಶಿವರಾಮ ಕುಲಾಲರು ತಮ್ಮ ಜೀವನವನ್ನು ಯಕ್ಷಗಾನಕ್ಕೆ ಮುಡಿಪಾಗಿಟ್ಟಿದ್ದಾರೆ.

ಕುಲಾಲ ಸಮುದಾಯದಲ್ಲಿ ಜನಿಸಿ ಕುಲಾಲರು ಹೆಮ್ಮೆ ಪಡಲು ಕಾರಣರಾಗಿರುವ ಸದಾಶಿವ ಅವರು ಸಾಧನೆಯ ಶಿಖರದಲ್ಲಿ ಮತ್ತಷ್ಟು ಮೇಲೇರಬೇಕಾದರೆ ಸಂಘ-ಸಂಸ್ಥೆಗಳು ಅವರನ್ನು ಗುರುತಿಸ ಬೇಕಾಗಿದೆ. ಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಇವರು ಮುಂದಿನ ಯುವಕಲಾವಿದರಿಗೆ ಸ್ಫೂರ್ತಿ.

ಕೃಪೆ : http://jayakirana.com/


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ