ಅಧ್ಯಾಪಕ ವೃತ್ತಿ, ಯಕ್ಷಗಾನ ಪ್ರವೃತ್ತಿ
ಉಡುಪಿ ಜಿಲ್ಲೆ ಐರೋಡಿಯಲ್ಲಿ 1909ರಲ್ಲಿ ಪುಟ್ಟಯ್ಯ ಗಾಣಿಗ ವೆಂಕಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಗಾಣಿಗರು ಪ್ರಾಥಮಿಕ ವಿದ್ಯಾಬ್ಯಾಸದ ಹಚಿತದಲ್ಲೇ ಯಕ್ಷಗಾನದತ್ತ ಆಕರ್ಷಿಸಲ್ಪಟ್ಟವರು. ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಹಾರಾಡಿ ರಾಮಗಾಣಿಗರ ಸಹಿತ ಹಾರಾಡಿ ಪರಂಪರೆಯ ಅನೇಕ ಕಲಾವಿದರು ಉತ್ತುಂಗದಲ್ಲಿದ್ದ ಕಾಲವದು. ಅವರೆಲ್ಲರಿಂದ ಪ್ರೇರೇಪಿತರಾದ ಇವರು ಆಗಿನ ಪ್ರಸಿದ್ದ ಭಾಗವತ ಶ್ರೀನಿವಾಸ ಉಪ್ಪೂರರಿ೦ದ ತಾಳ ಲಯಗಳನ್ನೂ ನಂತರ ಅಂಪಾರು ಕೃಷ್ಣ ವೈದ್ಯರು, ವಾಸುದೇವ ಹೆಬ್ಬಾರರಿಂದ ಭಾಗವತಿಕೆ, ಮದ್ದಳೆವಾದನ ಹೀಗೆ ಯಕ್ಷಗಾನದ ವಿವಿಧ ಮಜಲುಗಳನ್ನು ಅಭ್ಯಸಿಸಿದರು.
ಹದಿನಾರನೇ ವಯಸ್ಸಿನಲ್ಲಿ ಮೇಳದ ತಿರುಗಾಟ ನಡೆಸಿದ ಅವರು ಅಮೃತೇಶ್ವರಿ, ಸೌಕೂರು, ಮಂದಾರ್ತಿ ಮಾರಣಕಟ್ಟೆ ಮೇಳಗಳಲ್ಲಿ ತಿರುಗಾಟ ಮಾಡಿ, ಬಳಿಕ ಮೇಳ ತೊರೆದು ಶಿಕ್ಷಕ ವೃತ್ತಿಯತ್ತ ತೊಡಗಿದ ಅವರು ಅಧ್ಯಾಪಕ ವೃತ್ತಿಯೊಂದಿಗೆ ಯಕ್ಷಗಾನವನ್ನು ಪ್ರವೃತ್ತಿಯನ್ನಾಗಿಸಿಕೊಂಡರು.
ದೇಶ-ವಿದೇಶದಲ್ಲೂ ಯಕ್ಷಗಾನದ ಕಂಪು
ಗಾಣಿಗರ ಕಂಠ ಮಾಧುರ್ಯಕ್ಕೆ ಮರುಳಾಗಿ ಡಾ. ಶಿವರಾಮ ಕಾರಂತರು ಅವರ ತಂಡಕ್ಕೆ ಸೇರಿಸಿಕೊಂಡ ಪ್ರಯುಕ್ತ ಕಾರಂತರೊಂದಿಗೆ ಭಾರತದಾದ್ಯಂತ ಹಾಗೂ ವಿದೇಶದಲ್ಲೂ ಯಕ್ಷಗಾನದ ಕಂಪನ್ನು ಹರಿಸಿದರು. ಉಪ್ಪಿನಕುದ್ರು ಕೊಗ್ಗ ಕಾಮತರ ಬೊಂಬೆಯಾಟ ತಂಡದಲ್ಲೂ ಭಾಗವತರಾಗಿ ಕಾಣಿಸಿಕೊಂಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಂತರಾಷ್ಟ್ರೀಯ ಸಾಂಸ್ಕ್ರತಿಕ ವಿನಿಮಯ ತಂಡದಲ್ಲಿ ಕಲಾವಿದರಾಗಿ ದೇಶಾದ್ಯಂತ ತಿರುಗಾಟ ಹಾಗೂ ದೆಹಲಿಯಲ್ಲಿ ಪ್ರಥಮ ಬಾರಿಗೆ ಹಿಂದಿಯಲ್ಲಿ ಯಕ್ಷಗಾನ ಪ್ರಯೋಗಮಾಡಿದ ಹೆಗ್ಗಳಿಕೆಗೆ ಪಾತ್ರರಾದರು. ಘೋರ ಬೀಷಣ ಕಾಳಗ, ವಿಶ್ವರೂಪ ದರ್ಶನ, ಕುಂಭಾಶಿ ಕ್ಷೇತ್ರ ಮಹಾತ್ಮೆ ಮುಂತಾದ ಪ್ರಸಂಗಗಳನ್ನೂ ರಚಿಸಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತೆ ರೋಹಿಣಿ ಹಟ್ಟಿಯಂಗಡಿಯವರ ಟೆಲಿಚಿತ್ರದಲ್ಲಿ ಅಭಿನಯಿಸಿದ್ದಾರೆ.
ತಮ್ಮ ಸಿರಿಕಂಠದ ಅನೇಕ ದ್ವನಿ ಸುರುಳಿಗಳು ಆ ಕಾಲದಲ್ಲೇ ಅಚ್ಚಾಗಿದ್ದವು. ಉಡುಪಿ ಯಕ್ಷಗಾನ ಕಲಾರಂಗ ಇಪ್ಪತ್ತು ವರ್ಷದ ಹಿಂದೆ ಎಂಟು ಹಿರಿಯ ಭಾಗವತರ ಗಾನವೈವಿಧ್ಯದಲ್ಲಿ ಇವರೂ ಕೂಡ ಒಬ್ಬರಾಗಿದ್ದು ಅಂದು ಅವರು ಪೂರ್ವಿರಾಗದಲ್ಲಿ ಪ್ರಸ್ತುತ ಪಡಿಸಿದ ಕರ್ಣಾರ್ಜುನದ “ಅರಸ ಧರ್ಮಜನಂತೆ ವರ ವ್ರಕೋದರನಂತೆ” ಪದ್ಯ ಅನೇಕ ಶೋತೃಗಳನ್ನು ರಂಜಿಸಿತ್ತು.
|
ಐರೋಡಿ ರಾಮ ಗಾಣಿಗ |
|
ಜನನ |
: |
1909 |
ಜನನ ಸ್ಥಳ |
: |
ಐರೋಡಿ
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ
|
ಕಲಾಸೇವೆ:
ಅಮೃತೇಶ್ವರಿ, ಸೌಕೂರು, ಮಂದಾರ್ತಿ ಮಾರಣಕಟ್ಟೆ ಮೇಳಗಳಲ್ಲಿ ತಿರುಗಾಟ ಮಾಡಿ, ಬಳಿಕ ಶಿಕ್ಷಕ ವೃತ್ತಿಯತ್ತ ತೊಡಗಿದ ಗಾಣಿಗರು ರಾಷ್ಟೀಯ ಪ್ರಶಸ್ತಿ ಪುರಸ್ಕ್ರತರು. ಡಾ. ಶಿವರಾಮ ಕಾರಂತರೊಂದಿಗೆ ದೇಶ-ವಿದೇಶದಲ್ಲೂ ಯಕ್ಷಗಾನದ ಕಂಪನ್ನು ಹರಿಸಿದ್ದಾರೆ.
|
ಮರಣ ದಿನಾ೦ಕ |
: |
ಒಕ್ಟೋಬರ್ 20, 2014 |
|
|